ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಅಶ್ವಯುಜ ಮಾಸೆ, ಶುಕ್ಲ ಪಕ್ಷದ ದ್ವಿತೀಯ ತಿಥಿ, ಸ್ವಾತಿ ನಕ್ಷತ್ರ, ಪ್ರೀತಿ ಯೋಗ, ಬಾಲವ ಕರಣ, ಅಕ್ಟೋಬರ್18 , ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ರಾತ್ರಿ ಹತ್ತು ಗಂಟೆ ಮೇಲೆ ಇರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ .

ಪಾರ್ವತಿ ಅಮ್ಮನವರ ಎರಡನೆಯ ರೂಪವೇ ಬ್ರಹ್ಮಚಾರಿಣಿ ರೂಪ. ಅಮ್ಮನವರು ನಾರದರನ್ನು ನನ್ನ ರೂಪವೇನು, ನಾನು ಬಂದಿರುವ ಕರ್ತವ್ಯವೇನು, ನನ್ನ ಮುಂದಿನ ಜೀವನವೇನು ಎಂಬುದಾಗಿ ಕೇಳಿದಾಗ ನೀವು ಬಂದಿರುವುದೇ ಶಿವನನ್ನು ಸೇರಲು ಆದ್ದರಿಂದ ತಪಸ್ಸನ್ನು ಆಚರಿಸು, ಬ್ರಹ್ಮಚಾರಿಣಿ ವ್ರತವನ್ನು ನಿಷ್ಠೆ ಭಕ್ತಿಯಿಂದ ಆಚರಿಸಬೇಕೆಂದು ಹೇಳುತ್ತಾರೆ. ಅದರಂತೆ ದೇವಿಯು ಹದಿನಾರು ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸುತ್ತಾರೆ ಅದುವೇ ಬ್ರಹ್ಮಚಾರಿಣಿ ಸ್ವರೂಪ. ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ
ಅಮಾವಾಸ್ಯೆಯ ಪ್ರಭಾವದಿಂದ ಸಣ್ಣ ತಳಮಳ ವಿರುತ್ತದೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತೀರಿ. ಆತಂಕ ಬೇಡ ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಬೇರೆಯವರ ಊಹಾಪೋಹಗಳಿಗೆ ಕಿವಿಗೊಡಬೇಡಿ.
ವೃಷಭರಾಶಿ
ರಾಹು ನಿಮ್ಮ ಮನೆಯಲ್ಲೇ ಇರುವುದರಿಂದ ಬಲ ಜಾಸ್ತಿ ಇದೆ. ವಾರದ ಪೂರ್ಣ ಬಲ ನಿಮಗೆ ಇಂದು ಬರುವಂತಹ ಕೆಲಸ ಮಾಡುವಂತಹ ಸಹಯೋಗ.

ಮಿಥುನರಾಶಿ
ಚಂದ್ರ ರಾಹು ಸಾರದಲ್ಲಿದ್ದು, ರಾಹು ಹನ್ನೊಂದನೇ ಮನೆಯಲ್ಲಿರುವುದರಿಂದ ಹಳೇ ಗಾಯ ಹಳೆ ನೋವು ಉಲ್ಬಣಿಸುವಂತೆ ಛಾಯೆ ಇದೆ. ಹಳೆ ಬಾಧೆಯನ್ನು ನೆನೆಸಿಕೊಂಡು ಕೊರಗುತ್ತೀರಿ. ಅಮ್ಮನವರಿಗೆ ಬಾಳೆಹಣ್ಣಿನ ಪ್ರಸಾದವನ್ನು ಇಟ್ಟು ಮುತ್ತೈದೆಯರಿಗೆ ಕುಂಕುಮ ಕೊಟ್ಟು ಪ್ರಸಾದವನ್ನು ಸೇವಿಸಿ ಒಳ್ಳೆಯದಾಗುತ್ತದೆ.
ಕರ್ಕಾಟಕರಾಶಿ
ಚೆನ್ನಾಗಿದೆ ತೊಂದರೆ ಏನೂ ಇಲ್ಲ ಅಂದುಕೊಂಡು ಕೆಲಸಗಾರರ ನೆಲವು ಪ್ರಗತಿ ಹೊಂದುತ್ತದೆ ಆತ್ಮೀಯರ ಭೇಟಿಯಾಗುತ್ತದೆ.

ಸಿಂಹರಾಶಿ
ಮಹಾ ಬಲವಿದೆ, ಎಲ್ಲರ ಬಲ ಸೇರಿ ಶಿವ ಬಲವಿದೆ. ತೊಂದರೆ ಏನೂ ಇಲ್ಲ, ತುಂಬಾ ಚೆನ್ನಾಗಿದೆ.
ಕನ್ಯಾರಾಶಿ
ನಿಮಗೂ ಕೂಡ ಚೆನ್ನಾಗಿದೆ ರಾಹು ಭಾಗ್ಯ ಸ್ಥಾನದಲ್ಲಿದ್ದಾನೆ. ಕುಜ ಸ್ವಲ್ಪ ವಕ್ರವಾಗಿರುವುದರಿಂದ ಕುಟುಂಬ ಆರೋಗ್ಯ ಮನೆ ವಿಚಾರದಲ್ಲಿ ತುಂಬಾ ಜಾಗ್ರತೆಯಿಂದ ಇರಿ. ದೇವಿಗೆ ಅವಲಕ್ಕಿ ನೈವೇದ್ಯವೇ ನ್ನಿಟ್ಟು ಪೂಜಿಸಿ. ಅಮ್ಮನವರಿಗೆ ಕೆಂಪು ಸೀರೆ ಇಲ್ಲ ಬೂದಿ ಬಣ್ಣದ ಸೀರೆಯನ್ನು ಕೊಡಿ ಒಳ್ಳೆಯದಾಗುತ್ತದೆ.

ತುಲಾರಾಶಿ
ವಿಪರೀತ ಅಡ್ಡದಾರಿಯ ಆಲೋಚನೆಗಳಿಗೆ ಒಳಗಾಗುತ್ತೀರಿ ಜಾಗ್ರತೆ.
ವೃಶ್ಚಿಕರಾಶಿ
ಇಂತಹ ಸಮಸ್ಯೆ ಇದ್ದರೂ ಅದನ್ನು ಜೀರ್ಣಿಸಿಕೊಂಡು ಮುಂದಕ್ಕೆ ಹೆಜ್ಜೆ ಇಡುವಂತಹ ಮಹಾ ಭೀಮಬಲವಿದೆ.
ಧನಸ್ಸುರಾಶಿ
ಕುಜ ರಾಹು ಸಂಧಿ ಇರುವುದರಿಂದ ತಪ್ಪಾದ ವ್ಯಕ್ತಿಗಳು ತಪ್ಪಾದ ಕೆಲಸ ಕಾರ್ಯಗಳಿಗೆ ಪ್ರಚೋದನೆ ಮಾಡುತ್ತಾರೆ ಎಚ್ಚರಿಕೆ ಯಾವುದೇ ರೀತಿಯ ಇನ್ವೆಸ್ಟ್ ಮೆಂಟ್ ಮಾಡ ಬೇಕಾದರೆ ಎಚ್ಚರಿಕೆಯಿಂದ ಮಾಡಿ.
ಮಕರರಾಶಿ
ಪೂರ್ವ ಪುಣ್ಯ ಸ್ಥಾನದ ರಾಹು ದಶಮ ಸ್ಥಾನದ ಚಂದ್ರ ಕಲಾವಿದರಿಗೆ ವಿಶೇಷವಾಗಿ ಮಹಾ ಸಂಯೋಗವನ್ನು ತಂದುಕೊಡುವಂತಹ ದಿನ. ಸ್ಪೋರ್ಟ್ಸ್ ಪರ್ಸನ್ ಮಿಲಿಟರಿ ರಕ್ಷಣಾ ಇಲಾಖೆಗಳಿಗೆ ಅಭಿವೃದ್ಧಿ

ಕುಂಭರಾಶಿ
ಪೊಲೀಸ್, ಟೀಚರ್, ಲಾ ಡಿಪಾರ್ಟ್ಮೆಂಟ್ನಲ್ಲಿ ಟೀಚರ್ ಆಗಿದ್ದರೆ, ಸರ್ಜಿಕಲ್, ಸರ್ಜನ್, ಈ ಡಿಪಾರ್ಟಮೆಂಟ್ ಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೆ ಅಭಿವೃದ್ಧಿ.
ಮೀನರಾಶಿ
ಸ್ವಲ್ಪ ತಳಮಳ, ಫುಡ್ ಇನ್ಫೆಕ್ಷನ್, ವಾಟರ್ ಇನ್ಫೆಕ್ಷನ್, ಥ್ರೋಟ್ ಇನ್ಫೆಕ್ಷನ್, ಥಂಡಿಗೆ ಪ್ರಭಾವಕ್ಕೆ ಒಳಗಾಗುವ ಛಾಯೆಯಿದೆ ಆರೋಗ್ಯದ ಕಡೆ ಗಮನ ಕೊಡಿ.