ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (26-10-2020)

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (26-10-2020)

- Advertisement -

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ ಪಕ್ಷದ ದಶಮಿ ತಿಥಿ, ಧನಿಷ್ಠಾ ನಕ್ಷತ್ರ, ವೃದ್ಧಿ ಯೋಗ, ಗರಜ ಕರಣ, ಅಕ್ಟೋಬರ್ , ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಇಂದು ವಿಜಯದಶಮಿ. 3ಮುಕ್ಕಾಲು ಅಮೃತಗಳಿಗೆಯಲ್ಲಿ 1ಇದು ವಿಜಯ ದಶಮಿ. ದಶಮಿಯ ದಿನದಂದು ವೃತ್ತಿಪರವಾಗಿ ಮಾಡುವಂತಹ ಎಲ್ಲ ಕೆಲಸ ಕಾರ್ಯಗಳು, ಹೊಸ ಕನಸು, ಹೊಸ ಸಂಸ್ಥೆ, ಹೊಸ ಕನಸನ್ನ ಚಿಗುರೊಡೆಸಲು ಇರುವಂತ ಅದ್ಭುತವಾದಂತಹ ದಿನ. ಜಗನ್ಮಾತೆಯು ಮಹಿಷಾಸುರ ಮರ್ದಿನಿಯಾಗಿ ನಿಂತು ರಕ್ತ ಬೀಜಾಸುರ ಮತ್ತೊಮ್ಮೆ ಶುಂಭ ನಿಶುಂಭರ ಸಂಹಾರ ಮಾಡಿ ಗೆದ್ದಂತಹ 1ಅದ್ಭುತವಾದ ದಿನ. ಎಲ್ಲಾ ದೇವತೆಗಳು ತಮ್ಮ ಆಯುಧಗಳನ್ನು ಅಮ್ಮನವರಿಗೆ ಕೊಟ್ಟಿರುತ್ತಾರೆ. ಆ ಆಯುಧಗಳು ಮತ್ತು ಅಮ್ಮನೋರು ರಕ್ತ ರಕ್ತಸಿಕ್ತವಾಗಿರುತ್ತಾರೆ.

ಆಯುಧಗಳನ್ನೆಲ್ಲ ತೊಳೆದು ಪೂಜೆ ಮಾಡುವುದೇ ಆಯುಧ ಪೂಜೆ. ವಿಶೇಷವಾಗಿ ಅಮ್ಮನವರನ್ನು ಲೋಕಕ್ಕೆ ಪರಿಪೂರ್ಣವಾಗಿ ತೋರಿಸಿಕೊಟ್ಟಂತಹ ದಿನ. ಇದು 3ಮುಕ್ಕಾಲು ಗಳಿಗೆಯಲ್ಲಿ ಮೂರನೆಯ ಅಮೃತ ಗಳಿಗೆ. 1ಚಂದ್ರಮಾನ ಯುಗಾದಿ 2ಅಕ್ಷಯ ತೃತೀಯ 3ವಿಜಯದಶಮಿ 4 ದೀಪಾವಳಿ. ಈ 4ಅಮೃತಗಳಿಗೆ ಗಳಲ್ಲಿ ಯಾವ ದಿನದಲ್ಲಾದರೂ ಶುಭಕಾರ್ಯಗಳನ್ನು ಪ್ರಾರಂಭ ಮಾಡಬಹುದು. ಎಂತಹ ದೋಷ ಇದ್ದರೂ ಕೂಡ ನಿಮ್ಮ ಕಾರ್ಯವನ್ನು ಇಂದು ಆರಂಭ ಮಾಡಬಹುದು. ಗಣಪತಿ ಪೂಜೆಯನ್ನು ಮಾಡಿಸಿ ಆಚಾರ್ಯರ ಮುಖಾಂತರ ದೇವಿ ಪೂಜೆಯನ್ನು ಮಾಡಿಸಿ ಪ್ರಾರಂಭ ಮಾಡಿ ಕೊಳ್ಳಿ. ದಶಮಿಯ ದಿನ ಗ್ರಹಣವಿದ್ದರೂ ಕೂಡ ಶುಭ ಕಾರ್ಯವನ್ನು ಮಾಡಬಹುದು. ವಿಜಯದಶಮಿ ಗೆ ಅಂತಹ ಪರಿಪೂರ್ಣತ್ವಿದೆ. ಆದ್ದರಿಂದಲೇ ವಿಜಯದಶಮಿ ದಿನವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಎಲ್ಲೆಲ್ಲಿ ಅಮ್ಮನವರು ಇದ್ದಾರೊ ಆ ಕ್ಷೇತ್ರದಲ್ಲೆಲ್ಲಾ ಇಂದು ಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಇಂದು ಅಮ್ಮನವರ ದರ್ಶನ ಮಾಡುವುದೇ 1ಸೌಭಾಗ್ಯ. ಅಮ್ಮನ ಗೆಲುವು ಪರಿಪೂರ್ಣವಾಗಿ ಗೆದ್ದು ಬಂದು ಅಲಂಕಾರವಾಗಿ ಪಟ್ಟಕ್ಕೆ ಕೂತಿರುವಂತಹ ಆನಂದಕರವಾದ ಜ್ಞಾನಾಂದಕರವಾದ ದಿನ. ಈ ವಿಜಯ ದಶಮಿ ದಿನ ಕಿಂಚಿತ್ತೂ ಲೇವಾ ಲೇಶ ಇಲ್ಲದೆ, ಆತಂಕವಿಲ್ಲದೆ, ಭಯವಿಲ್ಲದೆ, ಆತಂಕವಿಲ್ಲದೆ, ಯಾವುದೇ ವ್ಯಾಪಾರ ವ್ಯವಹಾರ ಯಾವುದೇ ಮನೆ ಗೃಹಪ್ರವೇಶ ಮುಂತಾದ ಯಾವುದೇ ಕಾರ್ಯವನ್ನು ಪ್ರಾರಂಭ ಮಾಡಲು ಇಂದು ಶುಭದಿನ. ಇಂದು ಯಾವುದೇ ಕಾಲಗಳನ್ನು ನೋಡುವ ಅವಶ್ಯಕತೆ ಇಲ್ಲ. ಇಂದು ಎಲ್ಲವೂ ಸಮ್ಮತವೇ, ಎಲ್ಲರಿಗೂ ಸಮ್ಮತವೆ. ವಿಜಯದಶಮಿ ದಿನ ಜಾವಾ ತೆಗೆದುಕೊಳ್ಳಲು ಮನೆ ತೆಗೆದು ಕೊಳ್ಳಲು ಶುಭದಿನ ಎಂದು ಯಾವುದಾದರೂ ಹೊಸ ವಸ್ತುವನ್ನು ತೆಗೆದುಕೊಳ್ಳುವುದು ಶುಭಕರ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ. ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ
ಚೆನ್ನಾಗಿದೆ ಗತ್ತು ತೂಕ ಅಭಿವೃದ್ಧಿ ಯ ದಿನ ಆದರೆ ಯುದ್ದೋನ್ಮಾದದಲ್ಲಿರುತ್ತೀರ ಜಾಗ್ರತೆ. ತುಂಬಾ ದೊಡ್ಡ ವಾಹನ ಕನ್ ಸ್ಟ್ರಕ್ಷನ್ ವಿಚಾರದಲ್ಲಿ ಜಾಗ್ರತೆ.

ವೃಷಭ ರಾಶಿ
ಚೆನ್ನಾಗಿದೆ ತುಂಬಾ ಬಲವಿದೆ. ದೇವರು ಬಲವನ್ನ ಕೊಡುವುದು ಒಳ್ಳೆಯದಕ್ಕೆ ಅದನ್ನ ಒಳ್ಳೆಯದಕ್ಕೆ ಬಳಸಿ .

ಮಿಥುನ ರಾಶಿ
ಸೋದರಿ ವರ್ಗದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಸಹೋದ್ಯೋಗಿಗಳೊಡನೆ ಸ್ವಲ್ಪ ಕಿರಿಕಿರಿ. ಯಾವುದೇ ಪ್ರಚೋದನೆಗೆ ಒಳಗಾಗಬೇಡಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಕರ್ಕಾಟಕ ರಾಶಿ
ಭೂಮಿ ವಿಚಾರ, ಅಧಿಕಾರ ವಿಚಾರ, ಅಂತಸ್ತಿನ ವಿಚಾರ, ಭಾತ್ರುವಿನ ವಿಚಾರ, ಪದವಿ , ಹೊಸ ಕಾರಿನ ವಿಚಾರದಲ್ಲಿ ಹೆಜ್ಜೆಯಿಟ್ಟಿದ್ದರೆ ಗೆಲುವು ನಿಮ್ಮದೆ.

ಸಿಂಹ ರಾಶಿ
ಚೆನ್ನಾಗಿದೆ ಯಾವ ಶತ್ರುವು ನಿಮ್ಮ ಮುಂದೆ ನಿಲ್ಲಲಾರ.ತುಂಬಾ ಅಹಂಕಾರ ಕೊಡಲು ಹೋಗಬೇಡಿ ಅದು ಹಾಳು ಮಾಡುತ್ತದೆ ಎಚ್ಚರಿಕೆ.

ಕನ್ಯಾ ರಾಶಿ
ಚೆನ್ನಾಗಿದೆ ಭೂಮಿ, ಮನೆ, ಜಾಗ, ವರವೊಂದನ್ನು ತೋಟ,ಗದ್ದೆ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದರೆ 100% ದಾರಿಯಾಗುವಂತಹ ಶುಭದಿನ.

ತುಲಾ ರಾಶಿ
ಗರ್ಭಿಣಿ ಸ್ತ್ರೀಯರು ಜಾಗ್ರತೆ, ತುಂಬಾ ಫಾಸ್ಟ್ ಆಗಿ ಗಾಡಿ ಓಡಿಸುವವರು ಜಾಗ್ರತೆ.

ವೃಶ್ಚಿಕ ರಾಶಿ
ಬಹುದಿನದ ಕೆಲಸಕಾರ್ಯಗಳು ವಿಳಂಬವಾಗದೆ ನಡೆಯುವಂತಹ ಅನುಕೂಲಕರ ದಿನ. ಇಂದು ಸುಬ್ರಹ್ಮಣ್ಯ ಸ್ವಾಮಿ ಮತ್ತು ದೇವಿಯ ದರ್ಶನ ಮಾಡಿ ಕೊಳ್ಳಿ ಒಳ್ಳೆಯದಾಗುತ್ತದೆ.

ಧನಸ್ಸು ರಾಶಿ
ಆಗದ ಅಸಾಧ್ಯವಾದ ಕೆಲಸಗಳನ್ನ ಕೂಡ ಸಾಧಿಸಿಕೊಳ್ಳುವಂತಹ ಅದ್ಭುತವಾದ ದಿನ ಜೆಟ್ಟಿಯ ರೀತಿ ನೀವು ಯಾರು ನಿಮ್ಮನ್ನು ಸೊಲ್ಲಿಸಲಾಗುವುದಿಲ್ಲ.

ಮಕರ ರಾಶಿ
ಅಣ್ಣನ ಸಹಕಾರ ಭೂಮಿ ಮನೆ ವಾಹನ ವನ್ನು ಪಡೆಯುವಂತಹ ದಿನ ಮತ್ತು ಹೊಸ ಕಾರ್ಯದ ಅಭಿವೃದ್ಧಿ.

ಕುಂಭ ರಾಶಿ
ಸೋದರ ಮತ್ತು ಸೋದರಿ ವರ್ಗದಿಂದ ಸ್ವಲ್ಪ ಖರ್ಚು ವೆಚ್ಚಗಳು ಬಂದರೂ ಕೂಡ ದೇವಿಯ ಆಶೀರ್ವಾದದಿಂದ ಎಲ್ಲವನ್ನು ಗೆದ್ದು ನಿಭಾಯಿಸುತ್ತೀರ.

ಮೀನ ರಾಶಿ
ಆರ್ಕಿಟೆಕ್ಟ್, ಇಂಜಿನಿಯರ್ ಪೋಲಿಸ್ ಡಿಪ್ಲೊಮ್ಯಾಟಿಕ್ ಇಂಟೀರಿಯರ್ ಆಗಿ ಕೆಲಸಗಳಲ್ಲಿದ್ದರೆ ಅನುಕೂಲಕರವಾದಂತಹ ದಿನ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular