ಸರಕಾರಿ ನೌಕರರಿಗೆ ಗುಡ್ ನ್ಯೂಸ್ : ಇನ್ಮುಂದೆ ವಾರದಲ್ಲಿ 5 ದಿನವಷ್ಟೇ ಕೆಲಸ

ಚೆನ್ನೈ : ಸರಕಾರಿ ಕಚೇರಿಗಳು ಇನ್ಮುಂದೆ ವಾರದಲ್ಲಿ 5 ದಿನ ಮಾತ್ರವೇ ಕಾರ್ಯನಿರ್ವಹಿಸಲಿದೆ. ಈ ನಿಯಮ ಮುಂದಿನ ವರ್ಷ ಅಂದ್ರೆ 2021ರ ಜನವರಿ 1ರಿಂದ ಜಾರಿಗೆ ಬರಲಿದೆ. ಇಂತಹ ದ್ದೊಂದು ನಿಯಮವನ್ನು ಜಾರಿಗೆ ತರಲು ಹೊರಟಿರುವುದು ತಮಿಳುನಾಡು ಸರಕಾರ.

ಹೌದು, ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಬೆನ್ನಲ್ಲೇ 2020ರ ಮೇ 15ರಂದು ತಮಿಳುನಾಡ ಸರಕಾರ ಆದೇಶವೊಂದನ್ನು ಹೊರಡಿಸಿತ್ತು. ಈ ವೇಳೆಯಲ್ಲಿ ಸರಕಾರಿ ಕಚೇರಿಗಳು 6 ದಿನಗಳ ಕಾಲವೂ ಶೇ.50ರಷ್ಟು ಸಿಬ್ಬಂಧಿಗಳೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿತ್ತು. ಆದರೆ ಸಪ್ಟೆಂಬರ್ 1ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಿದೆ.

ಅದರಂತೆಯೇ ಶೇ.100ರ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದ್ರೀಗ ತಮಿಳುನಾಡು ಸರಕಾರ ಹೊಸದಾಗಿ ಆದೇಶವನ್ನು ಹೊರಡಿಸಿದ್ದು, 2021ರ ಜನವರಿ 1 ರಿಂದ ಜಾರಿಗೆ ಬರುವಂತೆ ಸರಕಾರಿ ಕಚೇರಿಗಳು ವಾರದಲ್ಲಿ 5 ದಿನಗಳು ಮಾತ್ರವೇ ತೆರೆಯಲಿದ್ದು, 5 ದಿನಗಳು ಮಾತ್ರವೇ ನೌಕರರು ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಜ್ಯದ ಮುಖ್ಯಕಾರ್ಯದರ್ಶಿ ಕೆ.ಷಣ್ಮುಗಂ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Comments are closed.