ಬುಧವಾರ, ಜೂನ್ 18, 2025
HomeBreakingಮದುವೆಗೆ ಗಂಡು ಹುಡುಕ್ತಿದ್ದಾರಂತೆ ಪೂಜಾ ಹೆಗ್ಡೆ…! ಮನಸೆಳೆದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್…!!

ಮದುವೆಗೆ ಗಂಡು ಹುಡುಕ್ತಿದ್ದಾರಂತೆ ಪೂಜಾ ಹೆಗ್ಡೆ…! ಮನಸೆಳೆದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್…!!

- Advertisement -

ನಟಿ ಪೂಜಾ ಹೆಗ್ಡೆ ಮದುವೆಯಾಗ್ತಿದ್ದಾರಂತೆ….! ಹೌದಾ ಹುಡುಗ ಹೇಗಿರಬೇಕಂತೆ…? ಅನ್ನೋ ನಿಮ್ಮ ಪ್ರಶ್ನೆಗೆ ಸಿಗೋ ಉತ್ತರ ಹುಡುಗ ತುಂಬ ಕೇರಿಂಗ್ ಆಗಿರಬೇಕಂತೆ, ಕೆಲಸ ಹಂಚ್ಕೊಂಡು ಮಾಡಬೇಕಂತೆ…ಎಲ್ಲದಕ್ಕಿಂತ ಮುಖ್ಯವಾಗಿ ಜಾಯಿಂಟ್ ಫ್ಯಾಮಿಲಿ ಬೇಡವಂತೆ. ಇಷ್ಟಕ್ಕೂ ಇಷ್ಟೆಲ್ಲ ಷರತ್ತುಗಳ ಜೊತೆ ಪೂಜಾ ಹೆಗ್ಡೆ ಮದ್ವೆಯಾಗ್ತಿರೋದು ಮಾತ್ರ ರೀಲ್ ನಲ್ಲಿ.

Alvas1

ಹೌದು ಪೂಜಾ ಹೆಗ್ಡೆ ಮದ್ವೆಯಾಗ್ತಿಲ್ಲ. ತೆಲುಗಿನ ಹೊಸ ಚಿತ್ರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೇಲರ್ ನಲ್ಲಿ ಪೂಜಾ ಹೆಗ್ಡೆ ಸಖತ್ ಫನ್ನಿ ಡೈಲಾಗ್ಸ್ ಜೊತೆ ಮನಸೆಳೆದಿದ್ದು, ಮದುವೆಯಿಂದ ನೀವು ಏನು ಬಯಸ್ತಿರಾ ಎಂಬ ಪ್ರಶ್ನೆಗೆ ಇಡ್ಲಿ,ವಡೆ ,ಸಾಂಬಾರ ಎಂಬ ಕಾಮೆಡಿ ಉತ್ತರ ಸಖತ್ ವೈರಲ್ ಆಗ್ತಿದೆ.

Actress Pooja Hegde

ನಾಗಾರ್ಜುನ್ ಕೊನೆಯ ಪುತ್ರ ಅಖಿಲ್ ನಾಯಕನಾಗಿರೋ ಈ ಚಿತ್ರ ಯುವಕನೊಬ್ಬ ಮದ್ವೆಗೆ ಹೆಣ್ಣು ಹುಡುಕುವ ಕಾಮೆಡಿ ಕಥಾನಕ ಹೊಂದಿದೆ. ಹಾಸ್ಯಮಯವಾಗಿ ಅಷ್ಟೇ ಭಾವನಾತ್ಮಕವಾಗಿ ಸಿನಿಮಾ ಮೂಡಿ ಬರ್ತಿದೆಯಂತೆ.

Pooja Hegde To Kajal Aggarwal When South Actresses Proved Orange Is The New Black With Their Outfits

ಮದ್ವೆಯಾಗೋ ಹುಡುಗ ನನ್ನ ಶೂಗೆ ಸಮಾನ ಅನ್ನೋ ಪೂಜಾ ಹೆಗ್ಡೆ, ಮದುವೆಯಾದ ಮೇಲೆ ಸಂಜೆಗಳನ್ನು ಕಳೆಯೋದು ನಂಗಿಷ್ಟ ಯಾಕಂದ್ರೆ ಆಮೇಲೆ ಅಲ್ವೆ ರಾತ್ರಿಗಳು ಬರೋದು ಅನ್ನೋ ರೋಮ್ಯಾಂಟಿಕ್ ಡೈಲಾಗ್ ಗಳು ಈ ವೈರಲ್ ಆಗ್ತಿದ್ದು, ಚಿತ್ರ 2021 ರಲ್ಲಿ ತೆರೆಗೆ ಬರಲಿದೆ.

https://www.youtube.com/results?search_query=most+eligible+bachelor+trailer

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾಗೆ ಭಾಸ್ಕರ್ ಆಕ್ಷ್ಯನ್ ಕಟ್ ಹೇಳಿದ್ದರೇ,ಬನ್ನಿ ವಾಸ್, ವಾಸು ವರ್ಮಾ,ಅಲ್ಲು ಅರವಿಂದ್ ನಿರ್ಮಾಪಕರು. ವೆನ್ನೆಲ್ ಕಿಶೋರ್, ಅಮಾನಿ,ಮುರುಳಿ ಶರ್ಮಾ ಸೇರಿದಂತೆ ಅದ್ದೂರಿ ತಾರಾಗಣವಿದೆ.

RELATED ARTICLES

Most Popular