ಜ್ಯೂನಿಯರ್ ಚಿರುಗೆ ಸಿಕ್ತು ಹೆಸರು….! ಸರ್ಜಾ ಕುಟುಂಬದ ಕುಡಿಗೆ ಭಾವನಾತ್ಮಕ ಬೆಸುಗೆ…!

ಕೆಲವೊಂದನ್ನು ತರ್ಕಕ್ಕೆ ಒಡ್ಡುವುದಕ್ಕಿಂತ ಭಾವನಾತ್ಮಕವಾಗಿ ಒಪ್ಪಿಕೊಳ್ಳುವುದರಲ್ಲಿ ಬದುಕಿನ ನೆಮ್ಮದಿ ಅಡಗಿದೆ. ಅಂತಹುದೇ ಸ್ಥಿತಿಯಲ್ಲಿದೆ ಸರ್ಜಾ ಕುಟುಂಬ. ಎದೆಯೆತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ಜ್ಯೂನಿಯರ್ ಚಿರು. ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿರುವ  ಮುದ್ದಾದ ಕಂದನಲ್ಲೇ ಕಳೆದುಕೊಂಡ ಮಗನನ್ನು ಕಳೆದುಕೊಂಡಿರುವ ಕುಟುಂಬ ಆತನಿಗೆ ಸಧ್ಯಕ್ಕೆ ತಂದೆಯ ಹೆಸರನ್ನೇ ನೀಡಿದೆ.

ಚಿರಂಜೀವಿ ಸರ್ಜಾ ನಿಧನದ ನಾಲ್ಕು ತಿಂಗಳ ಬಳಿಕ ಸರ್ಜಾ ಕುಟುಂಬದ ಮೂರನೇ ತಲೆಮಾರು ಧರೆಗೆ ಬಂದಿದೆ. ಚಿರು-ಮೇಘನಾ ದಾಂಪತ್ಯದ ಫಲವಾಗಿ ಧರೆಗೆ ಬಂದ ಜ್ಯೂನಿಯರ್ ಚಿರು,  ಆ ಕುಟುಂಬದ ಪಾಲಿಗೆ ಅಕ್ಷರಷಃ ಚಿರು ಮರುಜನ್ಮ. ಹೀಗಾಗಿ ಸಧ್ಯ  ಪುಟ್ಟ ಕಂದಮ್ಮನಿಗೆ ಚಿರು ಎಂದೇ ಕರೆಯಲು ಕುಟುಂಬ ನಿರ್ಧರಿಸಿದೆ.

ಸರ್ಜಾ ಕುಟುಂಬ ಈಗಿರುವ ಸ್ಥಿತಿಯಲ್ಲಿ ನಾಮಕರಣ ಶಾಸ್ತ್ರ ಮಾಡೋದು, ಹೆಸರಿಡೋದು ಎಲ್ಲವೂ ಕಷ್ಟ. ಹೀಗಾಗಿ ನಾಮಕರಣ ಮಾಡೋ ತನಕ ಆ ಪುಟಾಣಿಗೆ ಚಿರು ಎಂದು ಕರೆಯಲು ನಿರ್ಧರಿಸಿದ್ದು, ಈಗಾಗಲೇ ಜ್ಯೂನಿಯರ್ ಚಿರು ಎಲ್ಲರೂ ಬಾಯ್ತುಂಬ ಚಿರು ಚಿರು ಅಂತ ಕರೆಯಲಾರಂಭಿಸಿದ್ದಾರಂತೆ.

ಸಾಮಾನ್ಯವಾಗಿ ಮಕ್ಕಳಿಗೆ ನಾಮಕರಣ ಹುಟ್ಟಿದ 12 ನೇ ದಿನ, ಮೂರು ತಿಂಗಳು ಅಥವಾ 9 ನೇ ತಿಂಗಳಿಗೆ ಮಾಡೋದು ವಾಡಿಕೆ. ಆದರೆ ಸಧ್ಯ ಸರ್ಜಾ ಕುಟುಂಬ ನಾಮಕರಣ ಆಚರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮನೆಗೆ ಬಂದ ಮೊಮ್ಮಗನನ್ನೇ ಮಗನ ರೂಪದಲ್ಲಿ ಕಾಣ್ತೀರೋ ಚಿರು ಹೆತ್ತವರು ಚಿರು ಅಂತಲೇ ಕರೆದು ಮಗನ ಅಗಲಿಕೆಯ ದುಃಖ ಮರೆಯುತ್ತಿದ್ದಾರಂತೆ.

ಇನ್ನು ಜಾತಕ, ಅಕ್ಷರದ ಬಲದಿಂದ ಬೇರೆ ಹೆಸರು ಇಟ್ಟರೂ ಜ್ಯೂನಿಯರ್ ಚಿರುಗೆ ಮುಂದೆ ಚಿರಾಗ್ನಿ ಅಂತ ಹೆಸರಿಡೋ ಸಾಧ್ಯತೆ ಎಂದು ಕೂಡ ಹೇಳಲಾಗ್ತಿದೆ.

ಆದರೆ ಸದ್ಯಕ್ಕಂತೂ ಮುದ್ದು ಕಂದ ಚಿರು ಅಂತನೇ ಕರೆಯಲ್ಪಡುತ್ತಿದ್ದು, ತಂದೆಯನ್ನು ನೋಡದಿದ್ದರೂ ಕುಟುಂಬಸ್ಥರ ಪ್ರೀತಿಯಲ್ಲಿ ಮುಳುಗೇಳುತ್ತಿದೆ.

ತಪ್ಪದೇ ಓದಿ : ಚಿತ್ರರಂಗಕ್ಕೆ ಬರ್ತಾರಂತೆ ಜೂನಿಯರ್ ಚಿರು ..!

ಇದನ್ನೂ ಓದಿ : ಗಜ ಕೇಸರಿ ಯೋಗದಲ್ಲಿ ಧರೆಗೆ ಬಂದ ಜ್ಯೂನಿಯರ್ ಚಿರು .. ! ಜ್ಯೋತಿಷಿಗಳು ಏನಂತಾರೆ ಗೊತ್ತಾ ..!!!

ಥೇಟ್ ಚಿರುವಂತೆ ಇದೆ ಎನ್ನುತ್ತಿರೋ ಚಿರು ಸ್ನೇಹಿತರು, ಸಂಬಂಧಿಕರು, ಆಪ್ತರು ಚಿರುನೇ ಮತ್ತೊಮ್ಮೆ ಹುಟ್ಟಿಬಂದಿದ್ದಾನೆ ಅಂತ ಮೇಘನಾಗೆ ಧೈರ್ಯ ತುಂಬುತ್ತಿದ್ದಾರಂತೆ. ಕಳೆದ ನಾಲ್ಕು ತಿಂಗಳನ್ನು ಆತಂಕದಲ್ಲೇ ಕಳೆದ ಮೇಘನಾ ಈಗ ಚಿರು ಪ್ರತಿರೂಪ ಕಂಡು ಕೊಂಚ ನಿರಾಳವಾಗಿದ್ದು, ತಾಯ್ತನದ ಸಂಭ್ರಮದಲ್ಲಿದ್ದಾರೆ.  

Comments are closed.