ಸೋಮವಾರ, ಜೂನ್ 16, 2025
HomeCinemaನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು…! ಸೂಪರ್ ಸ್ಟಾರ್ ಪುತ್ರಿ ಬಿಚ್ಚಿಟ್ಟ ಕರಾಳ ಸತ್ಯ…!!

ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು…! ಸೂಪರ್ ಸ್ಟಾರ್ ಪುತ್ರಿ ಬಿಚ್ಚಿಟ್ಟ ಕರಾಳ ಸತ್ಯ…!!

- Advertisement -

ಮುಂಬೈ: ಹಲವು ಬಾಲಿವುಡ್ ನಟಿಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡ ಬೆನ್ನಲ್ಲೇ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಪುತ್ರಿ ಕೂಡ ತನ್ನ ಮೇಲೆ ದೌರ್ಜನ್ಯ ನಡೆದಿತ್ತು ಎಂಬ ಭಯಾನಕ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಅಮೀರಾ ಖಾನ್ ಮೊದಲ ಪತ್ನಿಯ ಪುತ್ರಿ ಇರಾ ಖಾನ್ ಇಂತಹದೊಂದು ಅಮಾನುಷ,ಭಯಾನಕ ಕೃತ್ಯ ತನ್ನ ಮೇಲೆ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

Ira Khan 3

ನಾನು 14 ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಹಾಗೇ ನಡೆಸಿದ ವ್ಯಕ್ತಿ ಉದ್ದೇಶಪೂರ್ವಕವಾಗಿ ನನ್ನೊಂದಿಗೆ ಹಾಗೇ ನಡೆದುಕೊಂಡ ಎಂದು ಅರಿವಾಗಲು ನನಗೆ ಕೊಂಚ ಸಮಯ ಬೇಕಾಯಿತು. ಬಳಿಕ ನಾನು ಈ ವಿಚಾರವನ್ನು ಮೇಲ್ ಮೂಲಕ ಪೋಷಕ ರೊಂದಿಗೆ ಹಂಚಿಕೊಂಡೆ. ಮತ್ತೆಂದೂ ಅಂತಹ ಕೆಟ್ಟ ಅನುಭವ ಎದುರಿಸುವ ಸ್ಥಿತಿ ಬರಲಿಲ್ಲ ಎಂದಿದ್ದಾರೆ.

ಅಲ್ಲದೆ ಕೆಲವೇ ಸಮಯದಲ್ಲಿ ನಾನು ಆ ಕಹಿ ಅನುಭವದಿಂದ ಹೊರಬಂದೆ ಎಂದು ಕೂಡ ಇರಾ ಹೇಳಿಕೊಂಡಿದ್ದಾರೆ. ಆದರೇ ಇರಾ ಆ ವ್ಯಕ್ತಿ ಯಾರು ಅಥವಾ ಯಾವ ಸಂದರ್ಭದಲ್ಲಿ ಇಂಥ ಕೆಟ್ಟ ಅನುಭವವಾಯಿತು ಎಂಬ ಸಂಗತಿಗಳನ್ನು ಬಹಿರಂಗಪಡಿಸಿಲ್ಲ.

Ira Khan

ಇರಾ ಖಾನ್ ತಮ್ಮ ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಈ ವಿಚಾರ ಹಂಚಿಕೊಂಡಿದ್ದು ಈ ಸಂಗತಿ ಬಯಲಾಗುತ್ತಿದ್ದಂತೆ ಎಲ್ಲ ಮಾಧ್ಯಮಗಳ ಟಾಪ್ ನ್ಯೂಸ್ ನಲ್ಲಿ ಸುದ್ದಿ ಸ್ಥಳ ಪಡೆದುಕೊಂಡಿದೆ.

ತಾನು ಕಳೆದ ನಾಲ್ಕು ವರ್ಷಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದೆ. ಈಗ ಅದರಿಂದ ಹೊರಬಂದಿದ್ದೇನೆ ಎಂಬ ಸಂಗತಿಯನ್ನು ಇರಾ ಖಾನ್ ಮುಕ್ತವಾಗಿ ಹೇಳಿಕೊಂಡಿದ್ದರು.

Namami Shankara 1
Ira Khan 2

ತಂದೆ ವಿಚ್ಛೇಧನ ಹಾಗೂ ಮರು ಮದುವೆ ಬಗ್ಗೆಯೂ ಇರಾ ಖಾನ್ ಮುಕ್ತವಾಗಿ ಮಾತನಾಡಿದ್ದು, ಕುಟುಂಬದಲ್ಲಿ ಎಲ್ಲರೂ ಸ್ನೇಹಿತರಂತೆ ಇದ್ದಿದ್ದರಿಂದ ವಿಚ್ಚೇಧನ ದೊಡ್ಡ ಪರಿಣಾಮ ಬೀರಲಿಲ್ಲ ಎಂದಿದ್ದಾರೆ. ಸದ್ಯ ಇರಾ ಖಾನ್ ವಿಡಿಯೋ ಸಾವಿರಾರು ಶೇರ್ ಆಗಿದ್ದು ಲಕ್ಷಾಂತರ ಜನರು ಲೈಕ್ ,ಕಮೆಂಟ್ ಮಾಡ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular