ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (03-11-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ತೃತೀಯ ತಿಥಿ, ರೋಹಿಣಿ ನಕ್ಷತ್ರ, ಪರಿಗ ಯೋಗ, ವನಿಜ ಕರಣ, ನವೆಂಬರ್ 03 , ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ರಾತ್ರಿ ಹತ್ತು ಗಂಟೆ ಮೇಲೆ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಬರುವಾಗ ನಾವು ಏನೂ ತಂದಿಲ್ಲ ಹೋಗುವಾಗ ಏನನ್ನು ತೆಗೆದುಕೊಂಡು ಹೋಗೋದಿಲ್ಲ. ಸಾಮಾನ್ಯವಾಗಿ ಎಲ್ಲಾ ಮಕ್ಕಳು ಹುಟ್ಟಿದಾಗ ಮುಷ್ಟಿಯನ್ನು ಬಿಗಿಹಿಡಿದು ಕೊಂಡಿರುತ್ತವೆ. ಆ ಮಗುವಿನಿಂದ ಏನಾದರೂ ವಿಶೇಷ ಕಾರ್ಯ ಆಗಬೇಕು ಎಂದಾದರೆ ಆ ಮಗುವಿನ ಕೈ ಮುಷ್ಟಿ ಇಡಿರುವುದಿಲ್ಲ ತೆರೆದಿರುತ್ತದೆ. ಇಂತಹ ಮಕ್ಕಳು ಕೈಯನ್ನ ಅಗಲವಾಗಿ ತೆರೆದಿಟ್ಟುಕೊಂಡು ಭೂಮಿಯ ಮೇಲೆ ಬರುತ್ತವೆ. ಅಮ್ಮನ ಹೊಟ್ಟೆಯೊಳಗೆ ಕರುಳ ಬಳ್ಳಿಯ ಮೂಲಕ ಊಟ ಮಗುವಿಗೆ ದೊರೆಯುತ್ತಿರುತ್ತದೆ. ಆ ಮಗುವು ಹೊಟ್ಟೆಯಲ್ಲಿರುವಾಗ ತನ್ನ ಹಿಂದಿನ ಜನ್ಮದ ಕರ್ಮಗಳನ್ನು ನೆನೆಸಿಕೊಂಡು ಈ ಭೂಮಿಗೆ ಹೋಗಬೇಕಾ ಎಂದು ಬ್ರಹ್ಮನ ಜೊತೆ ವಾದವನ್ನ ಮಾಡುತ್ತಿರುತ್ತದೆ.

ಆಗ ಬ್ರಹ್ಮ ನೀನು ಮಾತನಾಡಿದ್ದು ಸಾಕು ಭೂಮಿಗೆ ಹೋಗು ಎಂದು ಪ್ರಾಣವಾಯುವನ್ನು ತುಂಬಿ ಭೂಮಿಗೆ ಕಳಿಸುತ್ತಾರೆ. ಆಗ ಮಗು ಅಮ್ಮನ ಜನಾಂಗ ದಲ್ಲಿ ಹುಟ್ಟುತ್ತದೆ. ಸಾಮಾನ್ಯವಾಗಿ ಎಲ್ಲರೂ ಯೋನಿ ಪುತ್ರರು. ಪುರುಷ ಸಂಪರ್ಕವಿಲ್ಲದೆ ದೇಹ ಸಂಪರ್ಕವಿಲ್ಲದೆ ಹಾಗೆಯೇ ಹುಟ್ಟಿದವರನ್ನು ಅಯೋನಿಜರು ಎಂದು ಕರೆಯಲಾಗುತ್ತದೆ. ಸೀತಾಮಾತೆ ಮತ್ತು ದ್ರೌಪದಿ ಅಯೋನಿಜರು. ಹುಟ್ಟುವಾಗ ಮಗುವು ತನಗೆ ಈ ಬಂಧ ಬೇಡ ಈ ಬದುಕು ಬೇಡವಾಗಿತ್ತು ಎಂಬುದಾಗಿಯೇ ಅಳುತ್ತಾ ಬರುತ್ತದೆ. ಮಗು ಹುಟ್ಟಿದಾಗ ಅಳಲಿಲ್ಲವೆಂದರೆ ಜೀವವಿಲ್ಲ ಎಂದರ್ಥ. ಹೆರಿಗೆಯ ನೋವು ಸ್ತ್ರೀಯರಿಗೆ ಬರದೆ ಪುರುಷರಿಗೆ ಬಂದರೆ 5ನಿಮಿಷಗಳಲ್ಲಿ ಅವರ ಪ್ರಾಣ ಹೂರಟು ಹೋಗುತ್ತದೆ.

ಗಂಟೆಗಟ್ಟಲೇ ದಿನಗಟ್ಟಲೇ ನೋವನ್ನು ತಡೆದುಕೊಳ್ಳುವ ಶಕ್ತಿ ಅಮ್ಮನಿಗೆ ಮಾತ್ರ ಇರುವುದು. ಅಮ್ಮನಿಗಿಂತ ಮೀರಿದ ಭಾರ, ನೋವು ತಡೆದುಕೊಳ್ಳುವ ಶಕ್ತಿ ಲೋಕದಲ್ಲಿ ಮತ್ಯಾರಿಗೂ ಇಲ್ಲ. ಹುಟ್ಟಿದ ತಕ್ಷಣ ಅಳುತ್ತಾ ಬಂದರು ಆನಂತರ ಇಲ್ಲಿನ ಗಾಳಿ ಸೋಕಿ ಹುಟ್ಟಿದ ಪ್ರತಿಯೊಬ್ಬರೂ ಇಲ್ಲಿನ ಮಾಯೆಗೆ ಒಳಗಾಗುತ್ತಾರೆ. ಆದರೆ ವಿಚಿತ್ರವೆನೆಂದರೆ ಮಗು ಅಳುತ್ತಾ ಇದ್ದರೆ ಸುತ್ತ ಇರುವವರು ಸಂಭ್ರಮಿಸುತ್ತಿರುತ್ತಾರೆ.

ನಾವು ಮರಳಿ ಹೋಗುವಾಗ ಎಲ್ಲಾ ಕರ್ತವ್ಯವನ್ನ ಮುಗಿಸಿಬಿಟ್ಟರೆ ಮುಖದಲ್ಲಿ ಆನಂದ ತೇಜಸ್ಸು ಇದ್ದು ತೃಪ್ತಿಯಾಗಿ ಪ್ರಾಣ ಹೋಗಿರುತ್ತದೆ. ಇದಕ್ಕೆ 1ಅತ್ಯುತ್ತಮ ಉದಾಹರಣೆಯೆಂದರೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು. ಮತ್ತೆ ಕೆಲವರು ಪ್ರಾಣ ಹೋಗುವಾಗ ಯಾವುದಾದರೂ ವಸ್ತುಗಳ, ವ್ಯಕ್ತಿಗಳ ಮೇಲೆ ವ್ಯಾಮೋಹವಿದ್ದರೆ ಅವರು ಮತ್ತೆ ಹುಟ್ಟಿ ಬರುತ್ತಾರೆ. ಪರಿಪೂರ್ಣತೆ ಇಂದ ತೃಪ್ತಿಯಿಂದ ಇಹಲೋಕವನ್ನು ತ್ಯಜಿಸಿದರು ಸಂತೃಪ್ತಿಯಿಂದ ನಗುತ್ತಾ ಹೋಗುತ್ತಾರೆ. ಆದರೆ ಸುತ್ತಮುತ್ತ ಇರುವ ಬಂಧು ಬಳಗ ದವರು ಅಳುತ್ತಿರುತ್ತಾರೆ. ಆದ್ದರಿಂದ ಬದುಕಿರುವಾಗಲೇ ಎಲ್ಲರೂ ಅವರವರ ಕರ್ತವ್ಯಗಳನ್ನು ಮಾಡಬೇಕು.

ಮೇಷರಾಶಿ
ಚೆನ್ನಾಗಿದೆ, ಚಂದ್ರನಿಗೆ ಸ್ವಲ್ಪ ರಾಹು ತತ್ತ್ವ ವಿರುವುದರಿಂದ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ ಥ್ರೋಟ್ ಇನ್ಫೆಕ್ಷನ್ ಡಸ್ಟ್ ಅಲರ್ಜಿ ಮುಂತಾದ ಇನ್ಫೆಕ್ಷನ್ ಗಳಾಗುವ ಸಂಭವವಿದೆ ಎಚ್ಚರಿಕೆ. 3ನೇ ವಯಸ್ಸಿನಿಂದ ಮೇಲ್ಪಟ್ಟವರೆಲ್ಲರೂ ಕೂಡ ಬ್ರಹ್ಮಶಂಕರ ವನ್ನು ಉಪಯೋಗಿಸಬಹುದು.

ವೃಷಭರಾಶಿ
ಚಂದ್ರ ರಾಹು ಜೊತೆಯಲ್ಲಿ ಸೇರಿರುವುದರಿಂದ ಸ್ವಲ್ಪ ಹುಳಿ ಭಾವವಿರುತ್ತದೆ. ಅನ್ಯಾಯ ಮಾರ್ಗದ ಕಡೆಗೆ ನಿಮ್ಮನ್ನು ಎಳೆದುಬಿಡುತ್ತದೆ ಎಚ್ಚರಿಕೆ.

ಮಿಥುನರಾಶಿ
ದಿಢೀರ್ ಪ್ರಯಾಣ ಪ್ರಯಾಣದಲ್ಲೊಂದು ಬಳಲಿಕೆ ಉಂಟಾಗುತ್ತದೆ . ದೂರದ ಊರಿನಲ್ಲಿ ಅಲ್ಲೊಂದು ಪ್ರಯಾಸದ ಕೆಲಸ ಕಾರ್ಯಗಳು ಆಗುತ್ತವೆ.

ಕರ್ಕಾಟಕರಾಶಿ
ಮಾಡುವ ಛಲ ಇದೆ ಆದರೆ ಯಾರೋ ಅದಕ್ಕೆ ಕೊಕ್ಕೆ ಹಾಕುತ್ತಾರೆ. ನಾವು ಸರಿಯಾಗಿ ಇದ್ದರೂ ಕೂಡ ಅದನ್ನು ಅಲ್ಲಗಳೆದು ನಿನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹೇಳುವ ಮೂಲಕ ಹಾಳು ಮಾಡಿಬಿಡುತ್ತಾರೆ. ನನ್ನ ಕೈಯಲ್ಲಿ ಆಗುತ್ತದೆ ಎಂಬ ಭಾವವನ್ನು ಸದಾ ಇಟ್ಟುಕೊಳ್ಳಬೇಕು ಅದುವೇ ಅದಮ್ಯ ಚೇತನ್ಯ ಶಕ್ತಿ. ಅಹಂ ಬ್ರಹ್ಮಾಸ್ಮಿ ಎಂಬಂತೆ ಎಲ್ಲವೂ ನಮ್ಮ ಕೈಯಲ್ಲೇ ಇದೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಎಲ್ಲವೂ ಸಾಧ್ಯ.

ಸಿಂಹರಾಶಿ
ಎಕ್ಸ್ ಪೋರ್ಟ್, ಇಂಪೋರ್ಟ್, ಟ್ರಾವೆಲ್ಸ್, ಹುಳಿಗೆ ಸಂಬಂಧ ಪಟ್ಟಂಥ ವ್ಯವಹಾರ ಗಳಲ್ಲಿ ಇರುವಂತಹವರಿಗೆ ಅಭಿವೃದ್ಧಿ.

ಕನ್ಯಾರಾಶಿ
ತಿಂಡಿ ಪದಾರ್ಥ ಗಳಂಥ ಹೋಟೆಲ್ ವ್ಯವಹಾರಗಳನ್ನು ನಡೆಸುವ ಅಂಥವರಿಗೆ ಇಂದು ಸ್ವಲ್ಪ ಪ್ರಯಾಸದ ದಿನ ಪರಿಶ್ರಮದ ದಿನ. ಹಾಲು ಬೆಣ್ಣೆ ತುಪ್ಪ ಮೊಸರು ಸ್ವಲ್ಪ ಕಷ್ಟಕರ. ಮಧ್ಯಮ ವ್ಯಾಪಾರಿಗಳಿಗೆ ಸ್ವಲ್ಪ ಲಾಭಕರ.

ತುಲಾರಾಶಿ
ಉದ್ಯೋಗದಲ್ಲಿ ಪರಿಶ್ರಮದಿಂದ ಫಲವುಂಟು ಆದರೆ ಯಾರ ಹುಳಿಯಿಂಡಲು ಯತ್ನಿಸುತ್ತಾರೆ. ದುರ್ಗಾದೇವಿಗೆ ದೀಪವನ್ನು ಹಚ್ಚಿ ಹೋಗಿ. ಓಂ ದುಂ ದುರ್ಗಾಯೈ ನಮಃ ಎಂದು ಜೆಪಿಸಿ.

ವೃಶ್ಚಿಕರಾಶಿ
ಗೆಲುವು ಸೋಲು ಎರಡು ಕೂಡ ಉಂಟು. ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯುತ್ತದೆ. ಸೋಲಿಗೆ ಕುಗ್ಗಬೇಡಿ ಗೆಲುವಿಗೆ ಹಿಗ್ಗಬೇಡಿ.

ಧನಸ್ಸುರಾಶಿ
ಆಕಸ್ಮಿಕವಾಗಿ ಧನಲಾಭ. ಆಕಸ್ಮಿಕವಾಗಿ ವೃತ್ತಿಯಲ್ಲಿಶುಭ ಸುದ್ದಿಯೊಂದನ್ನು ಕೇಳುವಿರಿ.

ಮಕರರಾಶಿ
ಹಿರಿಯರೋರ್ವರ ಆಶೀರ್ವಾದದಿಂದ ಅಭಿವೃದ್ಧಿ. ಹಿರಿಯರ ಶಾಪಕ್ಕೆ ಗುರಿಯಾಗಬೇಡ ಮಾತಿಗೆ ಮಾತು ಕೊಟ್ಟು ಎದುರಾಡಬೇಡಿ.

ಕುಂಭರಾಶಿ
ಅಮ್ಮನ ಆರೋಗ್ಯದ ಕಡೆ ಗಮನಕೊಡಿ. ಅಮ್ಮನಂಥ ಅವರ ಆಶೀರ್ವಾದ ದೊರೆಯುತ್ತದೆ. ಕುಟುಂಬಕ್ಕೆ ಸಂಬಂಧಪಟ್ಟಂತೆ 1ಪುಟ್ಟ ಒತ್ತಡ ಕೂಡ ಉಂಟು. ಆಕಸ್ಮಿಕವಾಗಿ ದೈವ ದರ್ಶನ ದಿಂದ ಬಂದಿರುವ ಸಮಸ್ಯೆಗಳೆಲ್ಲ ದೂರವಾಗುತ್ತದೆ.

ಮೀನರಾಶಿ
ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಧೈರ್ಯದಿಂದ ಮುಂದಕ್ಕೆ ಹೆಜ್ಜೆ ಇಡಿ. ಧೈರ್ಯದಿಂದ ಮಾಡುವ ಸಕಲ ಕೆಲಸ ಕಾರ್ಯಗಳಲ್ಲೂ ಅಭಿವದ್ಧಿ.

Comments are closed.