ವಿಶ್ವದ ಪ್ರಸಿದ್ದ ಕಾರುಗಳ ಮಾರಾಟ ಸಂಸ್ಥೆಯಾಗಿರುವ ಕಿಯಾ ಜಾಗತಿಕ ಮಟ್ಟದಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಕಿಯಾ ಸೋನೆಟ್ ಭರ್ಜರಿ ಮಾರಾಟವನ್ನು ಕಾಣುತ್ತಿದೆ. ಈ ಮೂಲಕ ಕಿಯಾ ಭಾರತದ 4ನೇ ಅತೀ ದೊಡ್ಡ ವಾಹನ ತಯಾರಿಕಾ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕಿಯಾ ಮೋಟಾರ್ಸ್ ಕಾರ್ಪೊರೇಶನ್‌ಗೆ ಭಾರತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಿಕಾ ಕಂಪೆನಿ ಎನಿಸಿಕೊಂಡಿದೆ. ಅದ್ರಲ್ಲೂ ಕಿಯಾ ಪರಿಚಯಿಸಿರುವ ಎಸ್‌ಯುವಿ ಶ್ರೇಣಿಯನ್ನು ಕಾರುಗಳು ಜನಪ್ರಿಯತೆ ಹೆಚ್ಚಿಸಿಕೊಂಡಿವೆ.

ಜಾಗತಿಕವಾಗಿ ಕಿಯಾ ಅಕ್ಟೋಬರ್‌ನಲ್ಲಿ 2,65,714 ಯುನಿಟ್‌ಗಳನ್ನು ಮಾರಾಟ ಕಂಡಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ.6.1 ರಷ್ಟು ಹೆಚ್ಚಳವಾಗಿದೆ.
ಜಾಗತಿಕವಾಗಿ, ಭಾರತೀಯ ಮಾರುಕಟ್ಟೆಗೆ ಕಿಯಾ ಮೋಟಾರ್ಸ್ ಕಂಪೆನಿ ಪರಿಚಯಿಸಿದ ಸೆಲ್ಟೋಸ್ ಮತ್ತು ಸೋನೆಟ್ ಇತರ ಕಾರು ಗಳಿಗೆ ಪ್ರಬಲ ಪೈಪೋಟಿಯನ್ನು ನೀಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸಂಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ತಂದುಕೊಟ್ಟಿವೆ.

ದಕ್ಷಿಣ ಕೊರಿಯಾದಲ್ಲಿ ಕಿಯಾ ಕಂಪೆನಿಯು ಜಾಗತಿಕವಾಗಿ 2,17,705 ಯುನಿಟ್‌ಗಳನ್ನು ಮಾರಾಟ ಮಾಡಿದೆ.ಭಾರತೀಯ ಮಾರುಕಟ್ಟೆ ಯಲ್ಲಿಯೂ ಕಿಯಾದ ಸೋನೆಟ್ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ 11,721 ಯೂನಿಟ್ ಸೋನೆಟ್ ಕಾರು ಹಾಗೂ ಸೆಲ್ಟೋಸ್, ಕಾರ್ನಿವಲ್ ಮತ್ತು ಸೋನೆಟ್ ಮೂರು ಮಾದರಿಗಳಿಂದಲೂ ಒಟ್ಟು 21,021 ಯುನಿಟ್‌ಗಳನ್ನು ಮಾರಾಟ ಮಾಡಿದೆ –

ಕಳೆದ ವರ್ಷವಷ್ಟೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಿಯಾ ಮೋಟಾರ್ಸ್ ಕಾರ್ಪೊರೇಷನ್ ತನ್ನ ಮಾರಾಟದ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.