ಇನ್ಮುಂದೆ ASI, ಕಾನ್ ಸ್ಟೇಬಲ್ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವಂತಿಲ್ಲ !

ಹಾಸನ : ಇನ್ಮುಂದೆ ಕಂಡ ಕಂಡಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಂದ ದಂಡ ವಸೂಲಿ ಮಾಡುವಂತಿಲ್ಲ. ಅದ್ರಲ್ಲೂ ಎಎಸ್ ಐ, ಹೆಡ್ ಕಾನ್ ಸ್ಟೇಬಲ್ ಹಾಗೂ ಕಾನ್ ಸ್ಟೇಬಲ್ ಸ್ಥಳದಂಡ ವಸೂಲಿ ಮಾಡುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಎಎಸ್ಐ ಹಾಗೂ ಹೈವೆ ಪೆಟ್ರೋಲಿಂಗ್ ಮತ್ತು ಇಂಟರ್ ಸೆಪ್ಟರ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸ್ಥಳದಂಡ ವಸೂಲಿಯ ನೆಪದಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ.

ಈ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಳದಂಡ ವಸೂಲಿಯನ್ನು ಪಿಎಸ್ ಐ ಅವರನ್ನು ಹೊರತು ಪಡಿಸಿ ಎಎಸ್ಐಯವರು ಸ್ಥಳದಂಡ ವಸೂಲಿ ಮಾಡದಂತೆ ಸೂಚಿಸಲಾಗಿದೆ. ಖುದ್ದಾಗಿ ಪಿಎಸ್ ಐ ಅವರೇ ಸ್ಥಳ ದಂಡವನ್ನು ವಸೂಲಿ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ.

ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಮೋಟಾರ್ ವಾಹನ ಚಾಲಕರು ನಿಯಮ ಉಲ್ಲಂಘನೆ ಮಾಡುವವರ ಬಗ್ಗೆ ಎಎಸ್ ಐ ಹಾಗೂ ಹೆಡ್ ಕಾನ್ ಸ್ಟೇಬಲ್ ಹಾಗೂ ಕಾನ್ ಸ್ಟೇಬಲ್ ಅವರು ಗುರುತಿಸಿ ಸ್ಥಳದಂಡ ಮಾಡುವ ಕುರಿತು ಪಿಎಸ್ ಐ ಅವರ ಗಮನಕ್ಕೆ ತರತಕ್ಕದ್ದು. ಅಲ್ಲದೇ ಪಿಎಸ್ ಐ ಅವರೇ ಸ್ಥಳಕ್ಕೆ ತೆರಳಿ ದಂಡವನ್ನು ವಸೂಲಿ ಮಾಡಬೇಕಾಗಿದೆ.

ಪಿಎಸ್ ಐ ಹುದ್ದೆಗಿಂತ ಕೆಳಹಂತದ ಅಧಿಕಾರಿಯವರಿಗೆ ಸ್ಥಳದಂಡವನ್ನು ವಸೂಲಿ ಪುಸ್ತಕವನ್ನು ಕೂಡ ನೀಡದಂತೆ ಸೂಚಿಸಲಾಗಿದೆ. ಮುಂದಿನ ಆದೇಶದ ವರೆಗೂ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎ್ಲಲಾ ಠಾಣಾಧಿಕಾರಿಗಳಿಗೆ ಹಾಗೂ ವೃತ್ತ ನಿರೀಕ್ಷಕರಿಗೆ ಸೂಚನೆಯನ್ನು ನೀಡಿದ್ದಾರೆ. ಇತರ ಜಿಲ್ಲೆಗಳಲ್ಲಿಯೂ ಕೂಡ ಇಂತಹದ್ದೇ ಸ್ಥಿತಿಯಿದ್ದು, ಹಾಸನ ಜಿಲ್ಲೆಯಲ್ಲಿ ಹೊರಡಿಸಲಾಗಿರುವ ಆದೇಶವನ್ನು ಇತರ ಜಿಲ್ಲೆಗಳಲ್ಲಿಯೂ ಕೂಡ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ.

Comments are closed.