
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯ ಸರಕಾರ ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭಿಸಲು ಸಿದ್ದತೆ ನಡೆಸುತ್ತಿದೆ. ಇದರ ನಡುವಲ್ಲೇ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ನವೆಂಬರ್ 11ರ ವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಣೆ ಮಾಡುವಂತೆ ಆದೇಶ ಹೊರಡಿಸಿದೆ.
2020/21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಆಗತ್ಯವಿರುವ ಪೂರ್ವ ಸಿದ್ಧತೆಗಳಾಗಿ ಡಿಜಿಟಲ್ ಲರ್ನಿಂಗ್, ಆನ್ಲೈನ್/ ಆಫ್ಲೈನ್ ಟೀಚಿಂಗ್, ಸ್ಟಡಿ ಮೆಟಿರಿಯಲ್ ಪ್ರಿಪರೇಷನ್, ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ/ ಎಲ್ಲಾ ವಿಶ್ವವಿದ್ಯಾಲಯಗಳ ಬೋಧಕರಿಗೆ ದಿನಾಂಕ 4.11.2020 ರಿಂದ ದಿನಾಂಕ 11.11.2020ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮೋದನೆ ನೀಡಿದೆ.
ಇನ್ನು ಪ್ರಾಂಶುಪಾಲರು ಸೂಚಿಸಿದ ಬೋಧಕರು ಕಾಲೇಜಗಳಲ್ಲಿನ ತುರ್ತು ಕೆಲಸಗಳನ್ನು ನಿರ್ವಹಿಸಲು ಪರೀಕ್ಷಾ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆಯೂ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
