ಮೇಘನಾ ರಾಜ್ ಬಳಿ ಇದೆ ಮರೆಯದ ಗಿಫ್ಟ್…! ವಿಷ್ಣುದಾದಾ ಕೊಟ್ಟ ಗಿಫ್ಟ್ ಏನು ಗೊತ್ತಾ….!!

ಸ್ಯಾಂಡಲ್ ವುಡ್ ನ ಸಹಜ ಸುಂದರಿ ಖ್ಯಾತಿಯ ಮೇಘನಾ ರಾಜ್ ಸಧ್ಯ ಜ್ಯೂನಿಯರ್ ಚಿರು ಜೊತೆ ತಾಯ್ತನದ ಸಂಭ್ರಮವನ್ನು ಎಂಜಾಯ್ ಮಾಡ್ತಿದ್ದಾರೆ.

ಇದರ ಜೊತೆ ಜ್ಯೂನಿಯರ್ ಚಿರುಗೆ ತಮ್ಮ ಅಮೂಲ್ಯವಾದ ನೆನಪುಗಳನ್ನು ಪರಿಚಯಿಸುತ್ತಿದ್ದಾರೆ. ಆ ನೆನಪುಗಳಲ್ಲಿ ಒಂದು ಮರೆಯದ ನೆನಪು ಮೇಘನಾರಾಜ್ ಹಾಗೂ ವಿಷ್ಣುದಾದಾ ನಡುವೆ ಇರೋದು.

ಹೌದು, ನಟ ವಿಷ್ಣು ವರ್ಧನ ಅವರ ಒಂದು ಮರೆಯದ ನೆನಪು ಮೇಘನಾರಾಜ್ ಜೊತೆಗಿದೆ. ಇದನ್ನು ಮೇಘನಾಗೆ ನೀಡಿದ್ದು ವಿಷ್ಣುವರ್ಧನ್ ದತ್ತುಪುತ್ರಿ ಕೀರ್ತಿ ಅನಿರುದ್ಧ್.

ವಿಷ್ಣುವರ್ಧನ್ ತಮ್ಮ ಕೈಯಲ್ಲೊಂದು ವಾಚ್ ಕಟ್ಟುತ್ತಿದ್ದರು. ಆ ವಾಚ್ ನ್ನು ಸದಾ ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಸಾಯುವ ಕೊನೆ ದಿನಗಳವರೆಗೂ ಪ್ರೀತಿಯಿಂದ ಇಟ್ಟುಕೊಂಡಿದ್ದರಂತೆ. ಆ ವಾಚ್ ನ್ನು ಸದಾ ತಂದೆಯ ನೆನಪಿಗಾಗಿ ಕಾಯ್ದಿಟ್ಟುಕೊಂಡಿದ್ದ ಕೀರ್ತಿ ಅನಿರುದ್ಧ್ , ಅದನ್ನು ವಿಷ್ಣು ನೆನಪಿನ ಗಿಫ್ಟ್ ಆಗಿ ಮೇಘನಾ ರಾಜ್ ಗೆ ನೀಡಿದ್ದರಂತೆ.

ಇಷ್ಟಕ್ಕೂ ಮೇಘನಾ ಕುಟುಂಬ ಹಾಗೂ ವಿಷ್ಣುದಾದಾ ಕುಟುಂಬದ ನಡುವಿನ ಬಾಂಧವ್ಯ ತುಂಬಾ ಹಳೆಯದು. ಹಿರಿಯ ಪೋಷಕ ನಟ-ನಟಿ ದಂಪತಿಗಳಾದ ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್ ನಟ ವಿಷ್ಣುವರ್ಧನ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಎರಡು ಕುಟುಂಬವೂ ಸ್ನೇಹಿತರಂತೆ ಬದುಕುತ್ತಿದೆ.

ಹೀಗಾಗಿ ಸದಾ ವಿಷ್ಣು ನೆನಪು ಉಳಿಸುವಂತ ಗಿಫ್ಟ್ ನ್ನು ಮೇಘನಾಗೆ ಕೀರ್ತಿ ನೀಡಿದ್ದಾರೆ. ಅದನ್ನು ಮೇಘನಾರಾಜ್ ಕೂಡ ಜತನವಾಗಿ ಕಾಪಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಈಗ ಆ ಗಿಫ್ಟ್ ನ್ನು ತಮ್ಮ ಮಗನಿಗೆ ತೋರಿಸಲು ಕೂಡಾ ಸಿದ್ಧವಾಗಿದ್ದಾರಂತೆ.

ಮೇಘನಾರಾಜ್ ಗರ್ಭಿಣಿಯಾಗಿದ್ದಾಗಲೂ ದಿ.ವಿಷ್ಣುವರ್ಧನ್ ಪತ್ನಿ ಭಾರತೀ ವಿಷ್ಣುವರ್ಧನ್ ತರೆಹವಾರಿ ಅಡುಗೆ ಮಾಡಿ ಬಡಿಸಿ ಮೇಘನಾ ಬಯಕೆ ತೀರಿಸಿದ್ದಾರಂತೆ.

ಒಟ್ಟಿನಲ್ಲಿ ತಂದೆಯ ನೆನಪಿನ ಜೊತೆ ಚಿರು ಪುತ್ರನಿಗೆ ಸ್ಯಾಂಡಲ್ ವುಡ್ ನ ಹಿರಿಯ ನಟ ವಿಷ್ಣುವರ್ಧನ್ ಆಶೀರ್ವಾದವೂ ಸಿಕ್ಕಿದಂತಾಗಿದೆ.

Comments are closed.