ಸೋಮವಾರ, ಜೂನ್ 16, 2025
HomeBreakingಬಾಲಿವುಡ್ ಗೆ ನವಾಬ ಮನೆತನದ ಕುಡಿ ಎಂಟ್ರಿ….! ಸಿನಿಮಾಗೆ ಬರ್ತಿದ್ದಾರೆ ಇಬ್ರಾಹಿಂಅಲಿಖಾನ್…!!

ಬಾಲಿವುಡ್ ಗೆ ನವಾಬ ಮನೆತನದ ಕುಡಿ ಎಂಟ್ರಿ….! ಸಿನಿಮಾಗೆ ಬರ್ತಿದ್ದಾರೆ ಇಬ್ರಾಹಿಂಅಲಿಖಾನ್…!!

- Advertisement -

ಸ್ಯಾಂಡಲ್ ವುಡ್, ಬಾಲಿವುಡ್,ಕಾಲಿವುಡ್ ಹೀಗೆ ಎಲ್ಲ ಚಿತ್ರರಂಗದಲ್ಲೂ ಈಗ ನೆಕ್ಸ್ಟ್ ಜನರೇಶನ್ ಕಾಲ. ಹೌದು ಬಹುತೇಕ ಸ್ಟಾರ್ ಗಳ ಮಕ್ಕಳು ಬಣ್ಣ ಹಚ್ಚಿ ಅದೃಷ್ಟ ಪರೀಕ್ಷೆಗೆ ನಡೆಸಿದ್ದಾರೆ. ಇದೀಗ  ಈಸಾಲಿಗೆ  ನವಾಬ ಮನೆತನದ ಕುಡಿ ಹೊಸ ಸೇರ್ಪಡೆ. ಹೌದು ಸೈಫ್ ಅಲಿಖಾನ್ ಪುತ್ರ ಕೂಡ ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ.

Alvas1

 ಬಾಲನಟನಾಗಿ ಬರ್ತಿದ್ದಾರೆ ಸೈಫ್ ಅಲಿಖಾನ್ ಪುತ್ರ ಅಂತ ಅಂದ್ಕೊಂಡ್ರಾ ನಾವು ಹೇಳೋಕೆ ಹೊರಟಿರೋದು ಸೈಫ್ಅಲಿಖಾನ್ ಹಾಗೂ ಕರೀನಾ ಪುತ್ರ ತೈಮೂರ್ ಬಗ್ಗೆ ಅಲ್ಲ. ಸೈಫ್ ಅಲಿಕಾನ್ ಹಿರಿಯ ಪುತ್ರ ಇಬ್ರಾಹಿಂ ಅಲಿಖಾನ್ ಬಗ್ಗೆ.  ಹೌದು 19 ವರ್ಷದ ಸುಂದರಾಂಗ ಇಬ್ರಾಹಿಂ ಅಲಿಖಾನ್ ಬಾಲಿವುಡ್ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ.

935594 Saif Ibrahim

ಸೈಫ್ ಅಲಿಖಾನ್ ಹಾಗೂ ನಟಿ ಅಮೃತಾ ಸಿಂಗ್ ಪುತ್ರ ಇಬ್ರಾಹಿಂ ಖಾನ್  ನಟನೆಗೆ ಬರಲು ಸಿದ್ಧವಾಗಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆ ಕೂಡ ನಡೆಸಿದ್ದಾರೆ. ನೋಡೋಕೆ ಸೈಫ್ ಅಲಿಖಾನ್ ರಂತೆ ಎತ್ತರವಾಗಿ,ಬೆಳ್ಳಗೆ ಕಾಣ್ತಿರೋ ಇಬ್ರಾಹಿಂ ಯಾವ ಪ್ರಾಜೆಕ್ಟ್ ಮೂಲಕ ಎಂಟ್ರಿಕೊಡ್ತಿದ್ದಾರೆ ಅನ್ನೋದು ಇನ್ನು ಬಹಿರಂಗವಾಗಿಲ್ಲ.

Ibrahim1m

ಇನ್ನು ಮಗನ ಬಾಲಿವುಡ್ ಎಂಟ್ರಿಗೆ ಬಗ್ಗೆ ಮಾತನಾಡಿರೋ  ಸೈಫ್ ಅಲಿಖಾನ್, ಇಬ್ರಾಹಿಂ ನಮ್ಮೆಲ್ಲರಂತೆ ಸಿನಿಮಾ ರಂಗ ಆಯ್ಕೆ ಮಾಡಿಕೊಂಡಿರೋದು  ನನಗೆ ಖುಷಿ ನೀಡಿದೆ.  ಇದಕ್ಕಿಂತ ಬೆಸ್ಟ್ ಜಾಗ ಇನ್ನೊಂದಿಲ್ಲ.  ನಾನು ನನ್ನ ಹತ್ತೊಂಬತ್ತನೇ ವಯಸ್ಸಿನಲ್ಲಿ ಅವ್ಯವಸ್ಥಿತವಾಗಿದ್ದೆ. ಬಹುಷಃ ಸಿನಿಮಾ ರಂಗವೇ ನನ್ನನ್ನು ಸರಿದಾರಿಗೆ ತಂದಿದೆ. ಬದುಕಿಗೆ ಒಂದು ಅರ್ಥ ತಂದಿದೆ ಎಂದಿದ್ದಾರೆ.

Image

ಸೈಫ್ ಅಲಿಖಾನ್ ಮನೆಯಿಂದ ಈಗಾಗಲೇ ಅವರ ಪುತ್ರಿ ಸಾರಾ ಅಲಿಖಾನ್ ಕೂಡ ಬಾಲಿವುಡ್ ಪ್ರವೇಶಿಸಿದ್ದಾರೆ. ಈಗ ಅಕ್ಕನ ಹಾದಿಯಲ್ಲೇ ತಮ್ಮನೂ ಅನುಸರಿಸಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಸೈಫ್ ಅಲಿಖಾನ್ ಕುಟುಂಬದ ದಂಡಯಾತ್ರೆ ಮುಂದುವರಿಯುವ ಲಕ್ಷಣ ದಟ್ಟವಾಗಿದೆ.

Namami Shankara 2
RELATED ARTICLES

Most Popular