ಪ್ರಚಾರವಿಲ್ಲ…!ಭಾಷಣವಿಲ್ಲ….! ಅಮೇರಿಕಾದಲ್ಲಿ ಚುನಾವಣೆ ಗೆದ್ದ ನಾಯಿ…!!

ಅಮೇರಿಕಾ: ಸಧ್ಯ ಎಲ್ಲಾ ಕಡೆಯೂ ಚುನಾವಣೆಯದ್ದೇ ಸುದ್ದಿ. ಇನ್ನು ಅಮೇರಿಕಾದಲ್ಲಂತೂ ಅಧ್ಯಕ್ಷೀಯ ಚುನಾವಣೆಯದ್ದೇ ಬಿಸಿ ಬಿಸಿ ಚರ್ಚೆ. ಈ ಮಧ್ಯೆ ಸದ್ದಿಲ್ಲದೇ ನಾಯಿಯೊಂದು ಚುನಾವಣೆ ಗೆದ್ದಿದೆ. ಹೌದು ಮೇಯರ್ ಚುನಾವಣೆಯಲ್ಲಿ ನಾಯಿಯೊಂದು ಅಭೂತಪೂರ್ವ ಗೆಲುವು ಸಾಧಿಸಿದ್ದು, ಜನರಿಗೆ ಅಚ್ಚರಿ ತಂದಿದೆ.

ಅಮೇರಿಕಾದ ಕೆಂಟಕಿ ನಗರದ ಆಬ್ಯಿಟ್ ಹ್ಯಾಶ್ ನಗರದಲ್ಲಿ ವಿಲ್ಬರ್ ಬೀಸ್ಟ್ ಹೆಸರಿನ ಪ್ರೆಂಚ್ ಬುಲ್ ಡಾಗ್ ವೊಂದನ್ನು ಜನರು ತಮ್ಮ ಪ್ರತಿನಿಧಿಯಾಗಿ ಆಯ್ಕೆಮಾಡಿದ್ದಾರೆ. ಆ ನಗರದ ಒಟ್ಟು 22,985 ಮತದಾರರ ಪೈಕಿ 13,143 ಮತದಾರರು ಈ ನಾಯಿಮರಿಯನ್ನು ತಮ್ಮ ನಾಯಕನೆಂದು ಸೆಲೆಕ್ಟ್ ಮಾಡಿದ್ದಾರೆ.

ಇದು ಆಬ್ಯಿಟ್ ಹ್ಯಾಶ್ ನಗರದ  ಇದುವರೆಗಿನ ಚುನಾವಣೆಯ ಹಿಸ್ಟೋರಿಕಲ್ ಗೆಲುವು ಎಂದು ಅಲ್ಲಿನ  ಹಿಸ್ಟೋರಿಕಲ್ ಸೊಸೈಟಿ ಫೆಸ್ ಬುಕ್  ಪೋಸ್ಟ್ ನಲ್ಲಿ ಪೋಸ್ಟ್ ಹಾಕಿದೆ. ಜಾಕ್ ಹ್ಯಾಬಿಟ್ ಹೆಸರಿನ ಬೀಗಲ್ ನಾಯಿ ಹಾಗೂ ಪಪ್ಪಿ ಹೆಸರಿನ ಗೋಲ್ಡನ್ ರಿಟ್ರೀವರ್ ನಾಯಿಗಳು ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.

ಇಲ್ಲಿನ ಆಬ್ಯಿಟ್ ಹಾಶ್ ನಗರದ ನಿವಾಸಿಗಳು ಇದೇ ಮೊದಲಲ್ಲ, 1990 ರಿಂದಲೂ ತಮ್ಮ ಮೇಯರ್ ಆಗಿ ನಾಯಿಗಳನ್ನು ಆಯ್ಕೆ ಮಾಡುತ್ತ ಬಂದಿದ್ದಾರೆ. ಅಷ್ಟೇ ಅಲ್ಲ  ನಾಯಿಯನ್ನು ಮುಂದಿಟ್ಟುಕೊಂಡು ಆಬ್ಯಿಟ್ ಹಾಶ್ ನ ಹಿಸ್ಟೋರಿಕಲ್ ಸೊಸೈಟಿಗೆ ಇತರೆ  ದಾನ ಧರ್ಮಕ್ಕೆ ದೇಣಿಗೆ ಸಂಗ್ರಹಿಸಲು ಅನುಕೂಲವಾಗಲಿದೆ ಅನ್ನೋದು ಅಲ್ಲಿನ ಜನರ ಲೆಕ್ಕಾಚಾರ. ಆದರೆ ಈ ನಾಯಿಗಳು ಹೇಗೆ ಪ್ರಚಾರ ನಡೆಸಿದ್ವು, ಅಧಿಕಾರ ಚಲಾಯಿಸಲಿವೆ ಅನ್ನೋದು ಮಾತ್ರ ಕುತೂಹಲದ ಪ್ರಶ್ನೆ.

https://www.facebook.com/155120904559486/posts/3684385064966368/

Comments are closed.