ಮೇಘನಾ ರಾಜ್ ಸರ್ಜಾ….ಕಳೆದ ನಾಲ್ಕು ತಿಂಗಳ ಎಡಬಿಡದೇ ಕಾಡುತ್ತಿದ್ದ ನೋವುಗಳ ನಡುವೆಯೇ ಖುಷಿಯ ಕ್ಷಣಗಳನ್ನು ಹುಡುಕುತ್ತ ದಿನಕಳೆದಿದ್ದಾರೆ. ಸಧ್ಯ ಜೂನಿಯರ್ ಚಿರುವನ್ನು ಮಡಲಲ್ಲಿಟ್ಟುಕೊಂಡು ನೋವು ಮರೆಯುವ ಸರ್ಕಸ್ ಆರಂಭಿಸಿರುವ ಮೇಘನಾಗೆ ಚಿರು ಕೊನೆಯ ಚಿತ್ರ ಶಿವಾರ್ಜುನ್ ಕೂಡ ಸ್ವಲ್ಪ ರಿಲೀಫ್ ತಂದಿದೆ.

ಹೌದು ಚಿರು ಸರ್ಜಾ ಇನ್ನಿಲ್ಲವಾದರೂ ತಮ್ಮ ಸಾಲು-ಸಾಲು ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ. ಅದರಲ್ಲೂ ಬಿಡುಗಡೆಗೊಂಡ ಚಿರು ಕೊನೆಯ ಚಿತ್ರ ಶಿವಾರ್ಜುನ್ ಚಿತ್ರವಂತೂ ಚಿರು ಹಾಗೂ ಮೇಘನಾ ಒಟ್ಟೂಟ್ಟಿಗೆ ನೋಡಿದ ಕೊನೆಯ ಚಿತ್ರ. ಈ ಕಾರಣಕ್ಕೂ ಚಿತ್ರ ಮೇಘನಾ ಪಾಲಿಗೆ ಅವಿಸ್ಮರಣೀಯ.

ಕೇಂದ್ರ ಸರ್ಕಾರದ ಅನ್ ಲಾಕ್ 0.5 ಬಳಿಕ ರಾಜ್ಯದಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆದಿದ್ದು, ಇದಾದ ಬಳಿಕ ಅಕ್ಟೋಬರ್ 16 ರಿಂದ ಚಿರು ಬರ್ತಡೇ ಗಿಫ್ಟ್ ಎಂಬಂತೆ ಚಿತ್ರತಂಡ ಶಿವಾರ್ಜುನ್ ಚಿತ್ರವನ್ನು ರಿಲೀಸ್ ಮಾಡಿದೆ. ಅಲ್ಲಿಂದ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಈ ವಿಚಾರಕ್ಕೆ ಚಿರು ಪತ್ನಿ ಮೇಘನಾ ಸರ್ಜಾ ಖುಷಿ ವ್ಯಕ್ತಪಡಿಸಿದ್ದು, ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಥಿಯೇಟರ್ ಗಳು ಬಾಗಿಲು ತೆರೆದ ಬಳಿಕ ಮೊದಲ ಚಿತ್ರವಾಗಿ ಶಿವಾರ್ಜುನ್ ರಿಲೀಸ್ ಆಗಿದ್ದು, ಚಿರು ಫ್ಯಾನ್ಸ್ ತುಂಬ ಖುಷಿಯಿಂದ ಚಿತ್ರ ವೀಕ್ಷಿಸಿದ್ದಾರೆ. ಕೇವಲ ಚಿರು ಫ್ಯಾನ್ಸ್ ಮಾತ್ರವಲ್ಲ ಕುಟುಂಬಸ್ಥರು ಕೂಡ ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸಿದ್ದಾರೆ. ಸಧ್ಯ ಚಿರು ಚಿತ್ರ ತೆರೆ ಮೇಲೆ ಓಡ್ತಿರೋದು ಹಾಗು ಅಭಿಮಾನಿಗಳು ಖುಷಿಯಿಂದ ನೋಡುತ್ತಿರೋದು ಮೇಘನಾಗೆ ಸಮಾಧಾನ ಹಾಗೂ ಒಂದು ರೀತಿ ಸಂತೋಷ ತಂದಿದೆ.

ಇನ್ನೊಂದೆಡ ಸಧ್ಯ ಹೈಬಜೆಟ್ ಚಿತ್ರಗಳನ್ನು ರಿಲೀಸ್ ಮಾಡದೇ ಇರಲು ಚಿತ್ರತಂಡಗಳು ನಿರ್ಧರಿಸಿದ್ದು ಕೂಡ ರೀ ರೀಲಿಸ್ ಚಿತ್ರಗಳಿಗೆ ಪೂರಕವಾಗಿದ್ದು, ಒಟ್ಟಿನಲ್ಲಿ ಜೂನ್ ನಲ್ಲಿ ಚಿರು ಕಳೆದುಕೊಂಡು ಕಂಗೆಟ್ಟಿದ್ದ ಸರ್ಜಾ ಕುಟುಂಬಕ್ಕೆ ಚಿಕ್ಕ ಚಿಕ್ಕ ಸಂಗತಿಗಳು ಕೊಂಚ ರಿಲೀಫ್ ನೀಡ್ತಿರೋದಂತು ನಿಜ.