ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಚಕರ ನೇಮಕ…! ಹೊರಬಿತ್ತು ಆದೇಶ…!!

ಕೇರಳ: ರಾಜ್ಯದ ದೇವಾಲಯಗಳಿಗೆ  ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರನ್ನು ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರಕ್ಕೆ  ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ.  ರಾಜ್ಯ ಸರ್ಕಾರದ  ಈ ನಿರ್ಣಯದಿಂದ ಪರಿಶಿಷ್ಟ ಸಮುದಾಯದವರಿಗೂ ದೇವರ ಪೂಜೆ ನೆರವೇರಿಸಲು ಅವಕಾಶ ದೊರೆತಂತಾಗಲಿದೆ.

ಕೇರಳದ ಟಿಡಿಬಿ ಸ್ವಾಯತ್ತ ದೇವಾಲಯಗಳಿಗೆ ಸಂಬಂಧಿಸಿದ ಆಡಳಿತ ನಡೆಸುವ ಸಂಸ್ಥೆಯಾಗಿದ್ದು, ದೇಶದ ಪ್ರಸಿದ್ಧ ಯಾತ್ರಾಕ್ಷೇತ್ರ ಶಬರಿಮಲೈ ಸೇರಿದಂತೆ ಒಟ್ಟು ರಾಜ್ಯದ ಪ್ರಸಿದ್ಧ 1200 ದೇವಸ್ಥಾನಗಳನ್ನು ನಿರ್ವಹಿಸುತ್ತಿದೆ.  ಸಧ್ಯ  ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಚಕರನ್ನು ನೇಮಿಸಲು ನಿರ್ಧರಿಸಲಾಗಿದೆ.

ದೇವಾಲಯದಲ್ಲಿ ಸಧ್ಯ ಅರೆಕಾಲಿಕ ಅವಧಿಗೆ  ಪರಿಶಿಷ್ಟ ಜಾತಿಯ 18 ಹಾಗೂ ಪರಿಶಿಷ್ಟ ಪಂಗಡದ 2 ಅರ್ಚಕರನ್ನು ನೇಮಿಸಲಾಗಿದೆ. ಈ ವಿಚಾರವನ್ನು ಸ್ವತಃ ಕೇರಳ ದೇವಸ್ವಂ ಮಂಡಳಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ವಿಶೇಷ ನೇಮಕಾತಿ ಪ್ರಕ್ರಿಯೆಯಲ್ಲಿ  ಪರಿಶಿಷ್ಟ ಜಾತಿ ಹಾಗೂ ಸಮುದಾಯದವರು ಅರೆಕಾಲಿಕ ಅರ್ಚಕರಾಗಿ ದೇವಸ್ಥಾನಕ್ಕೆ ನೇಮಕವಾಗಿ ದ್ದಾರೆ ಎಂದು ಸಚಿವರು ತಿಳಿಸಿದ್ದು, ಇದು ಕೇರಳದಲ್ಲಿ ಹೊಸರೀತಿಯ ಹೋರಾಟವನ್ನು ಹುಟ್ಟುಹಾಕುವ ಸಾಧ್ಯತೆ ಇದೆ.

ಕೇರಳದಲ್ಲಿ ಎಡಪಂಥೀಯ ಚಿಂತನೆಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಳೆದ ನಾಲ್ಕೂವರೆ ವರ್ಷದಲ್ಲಿ ವಿವಿಧ ದೇವಾಲಯಗಳಿಗೆ 133 ಬ್ರಾಹ್ಮಣೇತರ ಅರ್ಚಕರು ನೇಮಕಗೊಂಡಿದ್ದಾರೆ.

Comments are closed.