ಸ್ಕೋಡಾ ಭಾರತವು ಈಗಾಗಲೇ ತನ್ನ ಬಿಎಸ್6 ಸ್ಕೋಡಾ ರಾಪಿಡ್‌ನ ಬುಕಿಂಗ್‌ನ್ನು ಆರಂಭಿಸಿದೆ. ಈ ನೂತನ ಬಿಎಸ್6 ಸ್ಕೋಡಾ ರಾಪಿಡ್ ಕಾರು 1.0 ಲೀಟರ್ 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಸ್ಕೋಡಾದ ಈ ಬಿಎಸ್6 ರಾಪಿಡ್‌ನ್ನು ಅತೀ ಕಡಿಮೆ ಬೆಲೆಗೆ ಬುಕ್ ಮಾಡಬಹುದಾಗಿದೆ.

ಬಿಎಸ್6 ಸ್ಕೋಡಾ ರಾಪಿಡ್‌ನ್ನು ಇಂದಿನಿಂದಲೇ 50,000 ರೂಪಾಯಿಗಳ ಬೆಲೆಯಲ್ಲಿ ಬುಕಿಂಗ್ ಮಾಡಬಹುದಾಗಿದೆ. ಬುಕಿಂಗ್ ಇಂದಿನಿಂದಲೇ ಮಾಡಿದರೂ ಕೂಡ ಈ ಬಿಎಸ್6 ರಾಪಿಡ್‌ನ ವಿತರಣೆಯು 2020 ರ ಎಪ್ರಿಲ್ 14 ರಿಂದ ಆರಂಭವಾಗಲಿದೆ.
ಸ್ಕೋಡಾದ ಬೆಂಗಳೂರಿನ ವಿತರಕರ ಪ್ರಕಾರ ಬಿಎಸ್6 ಸ್ಕೋಡಾ ರಾಪಿಡ್‌ನ್ನು ಸದ್ಯಕ್ಕೆ ಕೇವಲ ಹೊಸ 1.0 ಲೀಟರ್ ಮಾನವ ಚಾಲಿತ ಟ್ರಾನ್ಸ್‌ಮಿಷನ್ ಎಂಜಿನ್‌ನೊಂದಿಗೆ ಕೊಂಡುಕೊಳ್ಳಬಹುದಾಗಿದ್ದು, ಮುಂದಿನ ದಿನಗಳಲ್ಲಿ ಸ್ವಯಂಚಾಲಿತ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲೂ ಕೂಡ ಖರೀದಿಸಬಹುದಾಗಿದೆ.

ಈ ಹಿಂದೆ ಬಿಎಸ್6 ಪೋಲೋ ಮತ್ತು ವೆಂಟೋ ಗಳಲ್ಲಿ ನೀಡಲಾದ 110 ಬಿಹೆಚ್‌ಪಿ ಶಕ್ತಿಯನ್ನು ಹಾಗೂ 175 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸಬಲ್ಲ 1.0 ಲೀಟರ್ 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್‌ನ್ನೇ ಇದರಲ್ಲೂ ಕೂಡ ಅಂದರೆ ಬಿಎಸ್6 ರಾಪಿಡ್‌ನಲ್ಲೂ ಕೂಡ ಅಳವಡಿಸಬಹುದೆಂದು ಅಂದಾಜಿಸಲಾಗಿದೆ.
ಈಗಾಗಲೇ ವಾಹನ ಮಾರುಕಟ್ಟೆಯಲ್ಲಿರುವ ಬಿಎಸ್4 ಸ್ಕೋಡಾ ರಾಪಿಡ್ ಕಾರು 104 ಬಿಹೆಚ್‌ಪಿ ಶಕ್ತಿಯನ್ನು ಹಾಗೂ 153 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುವ 1.6 ಲೀಟರ್ ಪೆಟ್ರೋಲ್ ಎಂಜಿನ್‌ನ್ನು, 109 ಬಿಹೆಚ್‌ಪಿ ಶಕ್ತಿಯನ್ನು ಹಾಗೂ 250 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುವ 1.5 ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ.

1.6 ಲೀಟರ್ ಪೆಟ್ರೋಲ್ ಎಂಜಿನ್‌ಗಳು 5 ಸ್ಪೀಡ್ ಮಾನವ ಚಾಲಿತ ಟ್ರಾನ್ಸ್‌ಮಿಷನ್‌ನ್ನು ಮತ್ತು 6 ಸ್ಪೀಡ್ ಟಾರ್ಕ್ ಪರಿವರ್ತಕವನ್ನು, 1.5 ಲೀಟರ್ ಡೀಸೆಲ್ ಎಂಜಿನ್‌ಗಳು 6 ಸ್ಪೀಡ್ ಮಾನವ ಚಾಲಿತ ಮತ್ತು 7 ಸ್ಪೀಡ್ ಡಿಎಸ್‌ಜಿ ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ನ್ನು ಹೊಂದಿದೆ.
ಬಿಎಸ್6 ಸ್ಕೋಡಾ ರಾಪಿಡ್‌ನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್‌ನ್ನು ಮುಂದುವರೆಸಿಕೊಂಡು ಬರಲಾಗುವುದಿಲ್ಲ. ಆದರೆ 1.6 ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಮುಂದುವರೆಸಿಕೊಂಡು ಬರಬಹುದಾಗಿದೆ. ಎಂಜಿನ್‌ನ್ನು ಹೊರತು ಪಡಿಸಿ ಬಿಎಸ್6 ಸ್ಕೋಡಾ ರಾಪಿಡ್ ಅಷ್ಟೊಂದು ವ್ಯತ್ಯಾಸವನ್ನು ಪಡೆದುಕೊಳ್ಳಲಾರದು ಎಂದು ಅಂದಾಜಿಸಲಾಗಿದೆ.

ಬಿಎಸ್6 ಸ್ಕೋಡಾ ರಾಪಿಡ್ ಕಾರು ಬಿಎಸ್4 ರಾಪಿಡ್ ನಲ್ಲಿನ ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳನ್ನೊಳಗೊಂಡ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು, ಆಂಬಿಯೆಂಟ್ ಲೈಟಿಂಗ್‌ನ್ನು, ಆಪಲ್ ಕಾರ್‌ಪ್ಲೇ ಆಂಡ್ರಾಯ್ಡ್ ಆಟೋಗಳನ್ನೊಳಗೊಂಡ ಟಚ್‌ಸ್ಕ್ರೀನ್ ಇನ್ಫೊಟೇನ್ಮೆಂಟ್ ವ್ಯವಸ್ಥೆ, ಕ್ಯಾಮರಾ, ಕ್ರೂಸ್ ನಿಯಂತ್ರಕಗಳು ಸೇರಿದಂತೆ ಇನ್ನು ಸಾಕಷ್ಟು ವೈಶಿಷ್ಟ್ಯತೆಯನ್ನು ತನ್ನಲ್ಲಿಯೂ ಅಳವಡಿಸಿಕೊಳ್ಳಲಿದೆ.

ಬಿಎಸ್4 ಸ್ಕೋಡಾ ರಾಪಿಡ್ ಕಾರಿಗಿಂತಲೂ ಬಿಎಸ್6 ಸ್ಕೋಡಾ ರಾಪಿಡ್‌ನ ಬೆಲೆಯು ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ. ಬಿಎಸ್6 ಸ್ಕೋಡಾ ರಾಪಿಡ್ ಕಾರು ಮಾರುಕಟ್ಟೆಯಲ್ಲಿ ವೋಕ್ಸ್‌ವ್ಯಾಗನ್ ವೆಂಟೋ, ಮಾರುತಿ ಸುಜುಕಿ ಸಿಯಾಝ್ ಮತ್ತು 2020 ಹೋಂಡಾ ಸಿಟಿ ಕಾರುಗಳಿಗೆ ಸ್ಪರ್ಧೆಯನ್ನು ನೀಡಲಿದೆ.