ನಿತ್ಯಭವಿಷ್ಯ : 14-11-2020

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಚತುರ್ದಶಿ  ತಿಥಿ, ಸ್ವಾತಿ ನಕ್ಷತ್ರ,  ಆಯುಷ್ಮಾನ್ ಯೋಗ , ಶಕುನಿ  ಕರಣ, ನವೆಂಬರ್ 14 , ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯಾಹ್ನ 12 ಗಂಟೆ  6 ನಿಮಿಷದಿಂದ 1ಗಂಟೆ 50 ನಿಮಿಷದವರೆಗೂ ಇದೆ.

ಇಂದು ದೀಪಾವಳಿ ಹಬ್ಬ , ಲಕ್ಷ್ಮಿ ಪೂಜೆ ಮಾಡುವ ದಿನ. ಲಕ್ಷ್ಮಿ ಪೂಜೆಯನ್ನು ಸಂಜೆ 5 ಗಂಟೆ 52 ನಿಮಿಷದಿಂದ 8 ಗಂಟೆ 18ನಿಮಿಷದ ವರೆಗೆ ಅತ್ಯದ್ಭುತವಾದ ಪ್ರದೋಷಕಾಲದಲ್ಲಿ ಮಾಡುವಂತಹ ಲಕ್ಷ್ಮೀ ಪೂಜೆ ಅತ್ಯಂತ ಶ್ರೇಷ್ಠಕರ. ಮಹಾಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳಲು ಈ ಸಮಯ ಅತ್ಯದ್ಭುತವಾದ ಮಹಾಕಾಲ. ಯಾವುದೋ ಕಾರಣಾಂತರಗಳಿಂದ ಈ ಸಮಯದಲ್ಲಿ ಪೂಜೆಯನ್ನು ಮಾಡಲು ಆಗದೆ ಇದ್ದವರು ರಾತ್ರಿ  11ಗಂಟೆ 39ನಿಮಿಷದಿಂದ  12ಗಂಟೆ  29ನಿಮಿಷದ ವರೆಗೆ ಪೂಜೆ ಮಾಡಿಕೊಳ್ಳಬಹುದು. ಅಲ್ಲದೆ ರಾತ್ರಿ 12ಗಂಟೆ 15ನಿಮಿಷದಿಂದ  2ಗಂಟೆ 18ನಿಮಿಷದ ಒಳಗೆ ಮತ್ತೊಂದು ಪೂಜೆಯನ್ನ ಮಾಡಿಕೊಳ್ಳಬಹುದು.

ನಾಳೆ ಬೆಳಗ್ಗೆ 4ಗಂಟೆ 12 ನಿಮಿಷ ದಿಂದ 4 ಗಂಟೆ 54 ನಿಮಿಷದ ಒಳಗೆ ಮಾಡಿಕೊಳ್ಳುವಂತಹ ಲಕ್ಷ್ಮಿ ಪೂಜೆ ಶ್ರೇಷ್ಠವಾದುದು.  ಲಕ್ಷ್ಮಿದೇವಿಯು ಎಣ್ಣೆಯಿಂದ ಯಾವಾಗಲೂ ದೂರ, ಆದರೆ ದೀಪಾವಳಿಯ ದಿನದಂದು ಮಾತ್ರ ಎಣ್ಣೆಯಲ್ಲಿ ಲಕ್ಷ್ಮೀ ದೇವಿಯು ಪ್ರವೇಶ ಮಾಡುತ್ತಾರೆ. ಆದ್ದರಿಂದ ಲಕ್ಷ್ಮಿದೇವಿಯನ್ನು ಎಣ್ಣೆ ರೂಪದಲ್ಲಿ ದೀಪಾವಳಿಯ ದಿನದಂದು ಪೂಜಿಸಲಾಗುತ್ತದೆ. ದೀಪಗಳಿಗೆ ಎಣ್ಣೆ ಹಾಕಿ ದೀಪ ಹಚ್ಚಲಾಗುತ್ತದೆ. ನಮಗೆ ಹೆಚ್ಚು ಹೆಚ್ಚು ಬೆಳಕನ್ನು ತಂದು ಕೊಡು ಎಂದು ಜಗನ್ಮಾತೆಯ ಹೆಸರಿನಲ್ಲಿ ದೀಪವನ್ನು ಹಚ್ಚುವುದರ ಸಂಕೇತವೇ ದೀಪಾವಳಿ. ಅದರಲ್ಲೂ ಇಂದು ಲಕ್ಷ್ಮಿದೇವಿಗೆ ಎಳ್ಳೆಣ್ಣೆ ಬಹು ಪ್ರಿಯವಾದದ್ದು ಆದ್ದರಿಂದ ಎಳ್ಳೆಣ್ಣೆಯಿಂದ ದೀಪ ಹಚ್ಚುವುದು ಒಳ್ಳೆಯದು ಜೊತೆಗೆ ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಕೂಡ ಒಳ್ಳೆಯದು.  ನಾಳೆ ಬೆಳಗ್ಗೆ 4ಗಂಟೆ 12 ನಿಮಿಷ ದಿಂದ 4 ಗಂಟೆ 54 ನಿಮಿಷದ ಒಳಗೆ ದೇಹಕ್ಕೆ ಎಳ್ಳೆಣ್ಣೆಯನ್ನು ಹಚ್ಚಿ ಸ್ನಾನ ಮಾಡಬೇಕು. 

ನದಿಗಳ ಸ್ನಾನದಲ್ಲಿ ಸರ್ವಶ್ರೇಷ್ಠವಾದುದು ಗಂಗಾ ನದಿಯ ಸ್ನಾನ. ಆದರೆ ಎಲ್ಲರೂ ಗಂಗಾ ನದಿಯ ನೀರಿನಲ್ಲಿ ಸ್ನಾನ ಮಾಡುವ ಸುಯೋಗ ಇರುವುದಿಲ್ಲ.  ಆದ್ದರಿಂದ ಸೂರ್ಯೋದಯಕ್ಕಿಂತ ಮೊದಲು 88 ನಿಮಿಷ ಕ್ಕಿಂತ ಮುಂಚೆ   ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾದೇವಿಯು ಎಲ್ಲಾ ನೀರಿನಲ್ಲೂ     ಸೂಕ್ಷ್ಮ ರೂಪದಲ್ಲಿ ಹರಿಯುತ್ತಾಳೆ. ಬಾವಿ ನೀರು, ತೊಟ್ಟಿ ನೀರು, ಕೆರೆ ನೀರು ,ಹೀಗೆ ಎಲ್ಲಾ ನೀರುಗಳಲ್ಲಿ ಹರಿಯುತ್ತಾಳೆ.  ಅದರಲ್ಲೂ ಅತಿ ಮುಖ್ಯವಾಗಿ ಪುರುಷರು ಎಣ್ಣೆ ಹಚ್ಚಿ ಸ್ನಾನ ಮಾಡಲೇಬೇಕು. ಎಳ್ಳು ಶನಿಕಾರಕತ್ವ. ನಾನು ಮಂದಗಮನ,  ನನ್ನನ್ನು ಕ್ರೂರ  ಗ್ರಹ ಎಂದು ಕೊಂಡಿದ್ದಾರೆ.

ನನ್ನನ್ನು ನೋಡಿದರೆ ಎಲ್ಲರೂ ದೂರ ಹೋಗುತ್ತಾರೆ,  ಶಾಪ ಗ್ರಹದ ಜಾತಕ ನನ್ನದು,  ನನಗೂ ಒಂದು ಶ್ರೇಷ್ಠತೆ ಸೌಭಾಗ್ಯ ಕೂಡು,  ಅವರವರ ಕರ್ಮಕ್ಕೆ ತಕ್ಕಂತೆ  ಬದುಕನ್ನ ಕೊಡುವಂತಹದ್ದು ನನ್ನ ಕೆಲಸ. ಕರ್ಮಾಧಿಪತಿ ಯು ಅವರು ಒಳ್ಳೆಯ ಕರ್ಮ ಮಾಡಿದ್ದರೆ ಒಳ್ಳೆಯದನ್ನ  ಕೆಟ್ಟ ಕರ್ಮ ಮಾಡಿದ್ದರೆ ಕಷ್ಟವನ್ನು ಕೊಡುತ್ತಾನೆ ಅಷ್ಟೆ. ಶನೇಶ್ವರ ದೇವರು ಕೊಡುವಂತಹ ಅದೃಷ್ಟ ಮತ್ಯಾರು ಕೊಡಲಾಗುವುದಿಲ್ಲ. ಜಗನ್ಮಾತೆಯಾದ ಲಕ್ಷ್ಮೀದೇವಿಯನ್ನು ಶನೇಶ್ಚರ ದೇವರು  ಈ ರೀತಿಯಾಗಿ ಕೇಳಿ ಕೊಂಡಾಗ ಕೊಟ್ಟಂತಹ  ವರವೇ ದೀಪಾವಳಿಯ ಎಳ್ಳೆಣ್ಣೆ ಸ್ನಾನ. ಯಾರು ನನ್ನನ್ನು ನೆನಪಿಸಿ ಕೊಂಡು ನಿನಗೆ ಅರ್ಪಿಸಿಕೊಳ್ಳುತ್ತಾರೋ ಧರ್ಮಕ್ಕೆ ಅಧೀನರಾಗಿ ತಲೆಬಗ್ಗಿಸಿ ನಿಲ್ಲುತ್ತಾರೋ ಅವರ ಮನೆಯಲ್ಲಿ ನಾನು ಸದಾ ನೆಲೆಸುತ್ತೇನೆ ಎಂಬುದಾಗಿ ಲಕ್ಷ್ಮಿದೇವಿಯು ಹೇಳುತ್ತಾರೆ.

ಆದ್ದರಿಂದ ಲಕ್ಷ್ಮೀದೇವಿಯು ದೀಪಾವಳಿಯ ದಿನದಂದು ಎಳ್ಳೆಣ್ಣೆಯಲ್ಲಿ  ಪ್ರವೇಶಿಸಿರುತ್ತಾರೆ. ಆದ್ದರಿಂದ  ಲಕ್ಷ್ಮಿ ರೂಪವಾಗಿರುವ ಶನೇಶ್ವರರಿಗೆ ಪ್ರೀತಿಪಾತ್ರವಾದ ಎಳ್ಳೆಣ್ಣೆಯನ್ನು  ಮೇಲೆ ತಿಳಿಸಿದ ಬ್ರಾಹ್ಮಿ ಸಮಯದಲ್ಲಿ ನಿಮ್ಮ ದೇಹಕ್ಕೆ ಹಚ್ಚಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠ ಇದರಿಂದ ಲಕ್ಷ್ಮೀಯು ನಿಮ್ಮ ಮನೆಯಲ್ಲಿ ನಿಲ್ಲಿಸುತ್ತಾಳೆ. ಯಾವ ಮನೆಯಲ್ಲಿ ಸ್ತ್ರೀ ನಗುನಗುತ್ತಾ ಇರುತ್ತಾಳೆ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಈ ಲಕ್ಷ್ಮಿ ಹಬ್ಬದಂದು ಲಕ್ಷ್ಮಿ ದೇವಿಗೆ ಇಷ್ಟವಾದ ಅರಶಿನ ಕುಂಕುಮ,  ಬಳೆ, ಕೆಂಪು ಅಕ್ಷತೆ, ಲಕ್ಷ್ಮೀದೇವಿಗೆ ಪದ್ಮ ಎಂದರೆ ಬಲು ಇಷ್ಟ, 3 ತರದ ಎಣ್ಣೆಗಳನ್ನು ಆಕಿ ದೀಪವನ್ನು ಹಚ್ಚಿ, ಬೇಕಾದರೆ ಎಣ್ಣೆಯ ಜೊತೆ ಸ್ವಲ್ಪ ತುಪ್ಪವನ್ನು ಸೇರಿಸಿ ಲಕ್ಷ್ಮಿ ತುಪ್ಪ ಪ್ರಿಯೆ, ತುಪ್ಪದ ನೈವೇದ್ಯವಂತೆ ಇಡಿ. ಎಲ್ಲಿ ಶುದ್ಧವಿರುತ್ತದೊ,  ಅಂದ ಇರುತ್ತದೋ, ನಗುವಿರುತ್ತದೆ ಅಲ್ಲಿ ಲಕ್ಷ್ಮಿ ಇರುತ್ತಾಳೆ. ಲಕ್ಷ್ಮೀ ಮುತ್ತೈದೆ ಪ್ರಿಯೆ, ಕುಂಕುಮ ಪ್ರಿಯೆ, ಮಾಂಗಲ್ಯದಲ್ಲಿ ನೆಲೆಸಿರುತ್ತಾಳೆ. ಗೌರಿ ವಿಶೇಷವಾಗಿ ಅರಿಶಿಣ ಪ್ರಿಯೆ , ಕಿವಿಯೋಲೆಯಲ್ಲಿ ನೆಲೆಸಿರುತ್ತಾಳೆ.  

ಮೇಷರಾಶಿ : ಆರೋಗ್ಯದಲ್ಲಿ ಏರುಪೇರು, ಕುಟುಂಬ ಸದಸ್ಯರ ಜೊತೆಗೆ ತಿರುಗಾಟ, ಮಾನಸಿಕವಾಗಿ ದುಗುಡ, ಆತಂಕ, ಸಂಕಟ, ಬಂಧು-ಬಾಂಧವರ ಮೇಲೆ ಕುಟುಂಬಸ್ಥರ ಮೇಲೆ ಅನಗತ್ಯವಾಗಿ ಕೂಗಾಡುವ ಪರಿಸ್ಥಿತಿ, ತಾಯಿ ಆರೋಗ್ಯದಲ್ಲಿ ಏರುಪೇರು.

ವೃಷಭರಾಶಿ : ಅತ್ಯಾಪ್ತರ ಆಗಮನದಿಂದ ಮನಸಿಗೆ ನೆಮ್ಮದಿ, ವ್ಯಾಜ್ಯಗಳಲ್ಲಿ ಗೆಲುವು, ಸ್ತ್ರೀಯರಿಂದ ಮಾನಾಪಮಾನ, ಪಾಲುದಾರಿಕೆಯಲ್ಲಿ ಆರ್ಥಿಕ ಮುಗ್ಗಟ್ಟು, ಕುಟುಂಬದ ಮಾನಹಾನಿ.

ಮಿಥುನರಾಶಿ : ಅನಾರೋಗ್ಯದ ಹಿನ್ನೆಲೆಯಲ್ಲಿ ಖರ್ಚು, ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಕಾರ್ಯದಲ್ಲಿ ಯಶಸ್ಸು, ಧನಾಗಮನ, ಉದ್ಯೋಗ ಸ್ಥಳದಲ್ಲಿ ಆತಂಕ, ವರ್ಗಾವಣೆಯ ಭೀತಿ, ಆರೋಗ್ಯದಲ್ಲಿ ವ್ಯತ್ಯಾಸಗಳು.

ಕಟಕರಾಶಿ : ಹಿರಿಯರಿಂದ ಕಿರಿಕಿರಿ, ಕೋರ್ಟ್ ವ್ಯಾಜ್ಯಗಳಲ್ಲಿ ಸೋಲು, ನಷ್ಟಗಳು ಆಗುವ ಸಂಭವ, ಮಕ್ಕಳ ಭವಿಷ್ಯದ ಚಿಂತೆ, ನಿದ್ರಾಭಂಗ, ಆಕಸ್ಮಿಕ ದುರ್ಘಟನೆಗಳು.

ಸಿಂಹರಾಶಿ : ಆಪ್ತರೊಂದಿಗೆ ಹೊಂದಾಣಿಕೆ, ಮನೆಯಲ್ಲಿ ಹಬ್ಬದ ವಾತಾವರಣ, ಭೂಮಿಯಿಂದ ಮಹಿಳಾ ಮಿತ್ರರಿಂದ ಆರ್ಥಿಕ ಸಂಕಷ್ಟ, ಅಧಿಕ ಉಷ್ಣದಿಂದ ಬಾಯಿ ಹುಣ್ಣು.

ಕನ್ಯಾರಾಶಿ : ಹಲವು ಚಿಂತೆಗಳು ನಿಮ್ಮನ್ನು ಕಾಡಲಿವೆ, ಕೌಟುಂಬಿಕವಾಗಿ ಹರ್ಷದಾಯಕ ಬೆಳವಣಿಗೆ, ಲಾಭ ಮತ್ತು ಅನುಕೂಲಕರ ವಾತಾವರಣ, ವಾಹನ ಚಾಲನೆಯಿಂದ ಪೆಟ್ಟು, ಎಚ್ಚರಿಕೆ, ಮೊಂಡುವಾದ ಮತ್ತು ಧೋರಣೆಯಿಂದ ತೊಂದರೆ.

ತುಲಾರಾಶಿ : ಪತಿ, ಪತ್ನಿಯ ನಡುವೆ ವಾಗ್ವಾದ, ಕುಟುಂಬದ ಸದಸ್ಯರ‌ ಮಾತಿಗೆ ಬೆಲೆ ಕೊಡಿ, ನಿದ್ರಾಭಂಗ, ಮಾನಸಿಕವಾಗಿ ಕೆಟ್ಟ ಆಲೋಚನೆಗಳು, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನಿಂದನೆ.

ವೃಶ್ಚಿಕರಾಶಿ : ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ವಾಹನ ಖರೀದಿ ಯೋಗ, ಆಕಸ್ಮಿಕವಾಗಿ ಸಾಲಗಾರರಿಂದ ಮುಕ್ತಿ, ದುರಾಚಾರಗಳಿಗೆ ಮತ್ತು ದುಷ್ಟ ಕೆಲಸಗಳಿಗೆ ಮುಂದಾಗುವಿರಿ, ಅನಿರೀಕ್ಷಿತ ಕಾರಣದಿಂದ ಪ್ರಯಾಣ ರದ್ದು.

ಧನಸ್ಸುರಾಶಿ : ಉದ್ಯೊಕಗದ ಚಿಂತೆ ಕಾಡಲಿದೆ. ಪ್ರೀತಿ-ಪ್ರೇಮದ ಪ್ರಸ್ತಾವನೆ, ದಾಂಪತ್ಯ ಸಮಸ್ಯೆಗಳು, ಆಸೆ-ಆಕಾಂಕ್ಷಿಗಳಲ್ಲಿ ಪ್ರೀತಿ-ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ.

ಮಕರರಾಶಿ : ಆರೋಗ್ಯದಲ್ಲಿ ಚೇತರಿಕೆ, ಮನೆಯಲ್ಲಿ ನೆಮ್ಮದಿಯ ವಾತಾವರಣ,  ಸಾಲ ಮಾಡುವ ಸನ್ನಿವೇಶ, ಸ್ವಂತ ಉದ್ಯಮ, ವ್ಯಾಪಾರ ವ್ಯವಹಾರ ಪ್ರಾರಂಭ ಸಿದ್ಧತೆಯಿಂದ ಹಿಂದೆ ಸಾಲದಿಂದ ತೊಂದರೆ.

ಕುಂಭರಾಶಿ : ಅನಿರೀಕ್ಷಿತ ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಾರಣವಾಗಲಿದೆ. ಘಟನೆಗಳಿಂದ ಬೆಳವಣಿಗೆ ಕುಂಠಿತ, ನಿಮಗೆ ಸಿಗಬೇಕಾದ ಅಂತ ಸ್ಥಾನಮಾನ ಬೇರೆಯವರ ಪಾಲು, ಕಲ್ಪನಾ ಭಾವಗಳಿಂದ ತೊಂದರೆ ಎಚ್ಚರಿಕೆ.

ಮೀನರಾಶಿ : ಕಂಕಣ‌ಬಲ ಕೂಡಿ‌ಬರಲಿದೆ, ಮಂಗಲ ಕಾರ್ಯಕ್ಕೆ ಸಿದ್ದತೆ, ತಾಯಿಯಿಂದ ಸಹಕಾರ, ಸಂಶಯಾತ್ಮಕ ವಿಷಯಗಳು, ಪ್ರೀತಿ-ಪ್ರೇಮದ ನಡುವೆ ಬಿರುಕು, ತಂದೆಯೊಂದಿಗೆ ಸಮಾಲೋಚನೆ.

Comments are closed.