ದುಡಿಮೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅದ್ರಲ್ಲೂ ಇದೀಗ ಡಿಜಿಟಲ್ ಯುಗ, ಎಲ್ಲರೂ ಡಿಜಿಟಲ್ ಮಾರ್ಗಗಳಲ್ಲಿಯೇ ವ್ಯವಹಾರ ಮಾಡೋದಕ್ಕೆ ಯತ್ನಿಸುತ್ತಾರೆ. ಇಲ್ಲೊಬ್ಬರು ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ತನ್ನ ಕಾಲಿನ ಪೋಟೋಗಳನ್ನೇ ಮಾರಿ ತಿಂಗಳಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ನಿಮಗೆ ಆಶ್ಚರ್ಯವಾದ್ರೂ, ಇದು ನಿಜ. ಇಂಗ್ಲೆಂಡಿನ 28 ವರ್ಷದ ಸ್ವೀಟ್ ಆ್ಯಚಸ್ ಯುವತಿ ತನ್ನ ಸೆಲ್ಫಿ ಫೋಟೋವನ್ನು ಆನ್ ಲೈನ್ ನಲ್ಲಿ ಮಮಾರಾಟ ಮಾಡಿ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ.
ಎಲ್ಲರೂ ಓದಿಗಾಗಿ ಹಣ ಹೊಂದಿಸಲು ಅಂಗಡಿಯಲ್ಲೋ ಅಥವಾ ಹೋಟೆಲ್ನಲ್ಲೋ ಕೆಲಸ ಮಾಡಿದರೆ, ಈಕೆ ಮಾತ್ರ ಸೆಲ್ಫೀ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾಳೆ. ಇದಕ್ಕಾಗಿ ನಿತ್ಯ 4-5 ಗಂಟೆ ವ್ಯಯಿಸುತ್ತಾಳೆ.
ಸಾಮಾನ್ಯವಾಗಿ ಮುಖದ ಪೋಟೋಗಳನ್ನು ಕಳುಹಿಸುವಂತೆ ಬೇಡಿಕೆಯಿಡುತ್ತಾರೆ. ಆದರೆ ಸ್ವೀಟ್ ಆ್ಯಚಸ್ ಬಳಿಯಲ್ಲಿ ಪಾದದ ಪೋಟೋ ನೀಡಲು ಜನರು ಬೇಡಿಕೆಯಿಡುತ್ತಿದ್ದಾರೆ.

ಆರಂಭದಲ್ಲಿ ಸ್ವೀಟ್ ಆ್ಯಚಸ್ ತನ್ನ ಪಾದದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ತದನಂತರದಲ್ಲಿ ಪೋಟೋಗಳನ್ನು ಕಳುಹಿಸುವಂತೆ ಹಲವರು ಬೇಡಿಕೆಯಿಟ್ಟಿದ್ದಾರೆ. ಕೆಲವರು ಹಣ ನೀಡುವುದಾಗಿಯೂ ತಿಳಿಸಿದ್ದಾರೆ.
ನಂತರದಲ್ಲಿ ಆ್ಯಚಸ್ ವಿವಿಧ ಬಂಗಿಯಲ್ಲಿರುವ ಪಾದದ ಪೋಟೋಗಳನ್ನು ಕಳುಹಿಸಿದ್ದಾರೆ. ನಂತರದಲ್ಲಿ ತನ್ನ ಪಾದದ ಪೋಟೋ ಗಳಿಂದಲೇ ಹಣ ಸಂಪಾದನೆಯ ದಾರಿಯನ್ನು ಕಂಡುಕೊಂಡಿದ್ದಾರೆ.
ದಿನಕ್ಕೆ ಕನಿಷ್ಠ 100 ಜನರು ಸೆಲ್ಫಿ ಕಳಿಸುವಂತೆ ಬೇಡಿಕೆ ಇಟ್ಟರೆ ಇದರಲ್ಲಿ 70 ಮಂದಿ, ಕಾಲ್ಗೆರಳು, ಕಾಲಿನ ಪಾದ, ಮೊಣಕಾಲಿನ ಫೋಟೊ ಕಳಿಸುವಂತೆ ಕೇಳಿಕೊಳ್ಳುತ್ತಾರಂತೆ.

ಇಷ್ಟೇ ಅಲ್ಲಾ ಹಲವರು ಈಕೆಯ ಬಳಿಯಲ್ಲಿ ನ್ಯೂಡ್ ಪೋಟೋಗಳನ್ನು ಕಳುಹಿಸುವಂತೆಯೂ ಕೇಳಿಕೊಂಡಿದ್ದಾರೆ. ಆದರೆ ಇಂತಹ ಪೋಟೋಗಳನ್ನು ತಾನು ಕಳುಹಿಸುವುದಿಲ್ಲಾ ಎಂದಿರುವ ಆ್ಯಚಸ್, ಬೇಡಿಕೆಗಳನ್ನು ತಿರಸ್ಕರಿಸಿದ್ದಾಲೆ. ಆದ್ರೆ ಆ್ಯಚಸ್ ತನ್ನ ಪಾದದ ಪೋಟೋಗಳಿಂದಲೇ ತಿಂಗಳಿಗೆ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಸಂಪಾದನೆ ಮಾಡುತ್ತಿದ್ದಾಳೆ.