ಮಂಗಳವಾರ, ಜೂನ್ 17, 2025
HomeBreakingಹೈಕೋರ್ಟ್ ಅಂಗಳದಲ್ಲಿ ಬಿಬಿಎಂಪಿ ಚುನಾವಣಾ ಭವಿಷ್ಯ…! ಇಂದು ಹೊರಬೀಳಲಿದೆ ಮಹತ್ವದ ತೀರ್ಪು!

ಹೈಕೋರ್ಟ್ ಅಂಗಳದಲ್ಲಿ ಬಿಬಿಎಂಪಿ ಚುನಾವಣಾ ಭವಿಷ್ಯ…! ಇಂದು ಹೊರಬೀಳಲಿದೆ ಮಹತ್ವದ ತೀರ್ಪು!

- Advertisement -

ಬೆಂಗಳೂರು: ಬಿಬಿಎಂಪಿ ಚುನಾವಣೆ ವಿವಾದ ಕೊನೆಗೂ ಹೈಕೋರ್ಟ್ ಅಂಗಳ ತಲುಪಿದ್ದು, ವಿಚಾರಣೆ ಬಳಿಕ ಇಂದು ಹೈಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಒಂದೊಮ್ಮೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದಲ್ಲಿ ಸರ್ಕಾರಕ್ಕೆ ಹಿನ್ನಡೆಯಾದಂತಾಗಲಿದೆ.

Alvas1

ಕೊರೋನಾ ಕಾರಣ ಮುಂದಿಟ್ಟುಕೊಂಡು ಬಿಬಿಎಂಪಿ ಕಾರ್ಪೋರೇಟರ್ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಇಬ್ಬರು ನಾಯಕರು ಸರ್ಕಾರದ  ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧ ಎಂದು ಚುನಾವಣಾ ಆಯೋಗ ಹೈಕೋರ್ಟ್ ಗೆ ಹೇಳಿದೆ.

Download

ಈ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸಲಿದ್ದು, ಈ ಆದೇಶದ ಮೇರೆಗೆ ಬಿಬಿಎಂಪಿ ಭವಿಷ್ಯ ನಿರ್ಧಾರವಾಗಲಿರೋದರಿಂದ ಕಾರ್ಪೋರೇಟರ್ ಎಲೆಕ್ಷನ್ ಗೆ ಸ್ಪರ್ಧಿಸುವ ಕನಸಿನಲ್ಲಿರೋರ ಚಿತ್ತ ಹೈಕೋರ್ಟ್ ನತ್ತ ನೆಟ್ಟಿದೆ.

Bbmp1

ಈಗಾಗಲೇ ಹಲವು ಗ್ರಾಮಪಂಚಾಯತ್ ಏರಿಯಾಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿರೋ ರಾಜ್ಯ ಸರ್ಕಾರ 198 ವಾರ್ಡ್ ಗಳನ್ನು  243 ಕ್ಕೆ ಏರಿಸಿದೆ. ಆದರೆ  ಸಧ್ಯ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನಸ್ಸಿಲ್ಲ. ಸರ್ಕಾರದ  ಈ ನಿರ್ಧಾರಕ್ಕೆ ಪಕ್ಷಾತೀತವಾಗಿ ಬೆಂಗಳೂರಿನ ಎಲ್ಲ ಶಾಸಕರ ಬೆಂಬಲವೂ ಇದೆ ಎನ್ನಲಾಗುತ್ತಿದೆ.

Medras Highcourt

ಹೀಗಾಗಿ ಒಂದೊಮ್ಮೆ ಹೈಕೋರ್ಟ್ ಬಿಬಿಎಂಪಿ ಚುನಾವಣೆ ನಡೆಸುವಂತೆ ಆದೇಶ ನೀಡಿದಲ್ಲಿ, ರಾಜ್ಯ ಸರ್ಕಾರ ವಾರ್ಡ್ ರಚನೆಯ ಕಾರಣ ಮುಂದಿಟ್ಟುಕೊಂಡು ಬಿಬಿಎಂಪಿ ಚುನಾವಣೆ ಮುಂದೂಡುವ ಮನವಿಯೊಂದಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಕೊರೋನಾ ಮಧ್ಯೆ ಮತ್ತೊಂದು ಚುನಾವಣಾ ಸಾಹಸ ಬೇಕೋ ಬೇಡವೋ ಎಂಬುದನ್ನು ಹೈಕೋರ್ಟ್ ತೀರ್ಮಾನಿಸಲಿದೆ.

RELATED ARTICLES

Most Popular