ಮಂಗಳವಾರ, ಏಪ್ರಿಲ್ 29, 2025
HomeBreakingಮೇಘನಾ ಮಗುವಿಗೆ ವಜ್ರದ ಉಡುಗೊರೆ...! ಜ್ಯೂನಿಯರ್ ಚಿರುಗೆ ದೊಡ್ಡಪ್ಪನಿಂದ ಬಂತು ಬೆಲೆಬಾಳುವ ಗಿಫ್ಟ್...!!

ಮೇಘನಾ ಮಗುವಿಗೆ ವಜ್ರದ ಉಡುಗೊರೆ…! ಜ್ಯೂನಿಯರ್ ಚಿರುಗೆ ದೊಡ್ಡಪ್ಪನಿಂದ ಬಂತು ಬೆಲೆಬಾಳುವ ಗಿಫ್ಟ್…!!

- Advertisement -

ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡಿದ್ದರೂ ತಂದೆಯ ಪ್ರೀತಿ ಹಾಗೂ ಜನಪ್ರಿಯತೆಯನ್ನು ಹುಟ್ಟುತ್ತಲೇ ಅನುಭವಿಸಿದ ಅದೃಷ್ಟವಂತ ಜ್ಯೂನಿಯರ್ ಚಿರು. ಮೇಘನಾ ಸರ್ಜಾ ಮಡಿಲಲ್ಲಿ ಮಲಗಿರೋ ಪುಟ್ಟ ಚಿರು ಗೆ ಉಡುಗೊರೆಗಳ ರಾಶಿಯೇ ಬರುತ್ತಿದ್ದು, ಈ ಪೈಕಿ ಸ್ಯಾಂಡಲ್ ವುಡ್ ಪೈಲ್ವಾನ್ ಸುದೀಪ್ ಬೆಲೆಬಾಳುವ ಗಿಫ್ಟ್ ನೀಡಿ ತಮ್ಮ ಹೃದಯವಂತಿಕೆ ಮೆರೆದಿದ್ದಾರೆ.

ಸ್ಯಾಂಡಲ್ ವುಡ್ ಒಂದು ಮನೆ ತರ ಇದ್ದರೇ, ಇಲ್ಲಿನ‌ ಬಹುತೇಕ ನಟ-ನಟಿಯರು ಒಂದೊಳ್ಳೆ ಬಾಂಡಿಂಗ್ ಹೊಂದಿದ್ದಾರೆ. ಇದಕ್ಕೆ ಚಿರಂಜೀವಿ ಸರ್ಜಾ ಹಾಗೂ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಕೂಡ ಹೊರತಲ್ಲ. ಸ್ವಂತ ಅಣ್ಣ ತಮ್ಮನ ತರ ಬಾಂಧವ್ಯ ಹೊಂದಿರೋ ಚಿರು-ಸುದೀಪ್ ಹಲವು ಒಳ್ಳೆಯ ಕ್ಷಣಗಳನ್ನ ಒಟ್ಟಿಗೆ ಕಳೆದಿದ್ದಾರೆ.

ಆದರೆ ಈಗ ಚಿರು ಜೀವಂತವಾಗಿ ಇಲ್ಲ. ತಮ್ಮ ನೆನಪುಗಳನ್ನು ಮಾತ್ರ ಬಿಟ್ಟು ಹೋಗಿದ್ದಾರೆ. ಇಂಥ ಪ್ರಾಣ ಸ್ನೇಹಿತ, ಒಡಹುಟ್ಟಿದಂತ ತಮ್ಮ ಇಲ್ಲದೇ ಹೋದರೂ ಕಿಚ್ಚ್ ಸುದೀಪ್ ಮಗುವಿಗೆ ದೊಡ್ಡಪ್ಪನಂತೆ ನಿಂತು ಕರ್ತವ್ಯ ನಿರ್ವಹಿಸೋದನ್ನು ಮರೆತಿಲ್ಲ.

ಜ್ಯೂನಿಯರ್ ಚಿರು ಜನಿಸಿದಾಗ ಶೂಟಿಂಗ್ ಹಾಗೂ ಕೆಲಸದಲ್ಲಿ ಬ್ಯುಸಿ ಇದ್ದ ಕಿಚ್ಚ್ ಸುದೀಪ್ ತಮ್ಮ ಕೆಲಸ ಎಲ್ಲ ಮುಗಿಸಿ ಫ್ರೀ ಆಗ್ತಿದ್ದಂತೆ ಜ್ಯೂನಿಯರ್ ಚಿರುಗಾಗಿ ಸ್ಪೆಶಲ್ ಗಿಫ್ಟ್ ಒಂದನ್ನು ಖರೀದಿಸಿದ್ದಾರೆ.

ಅದು ಅಂತಿಂಥ ಗಿಫ್ಟ್ ಅಲ್ಲ. ಹೌದು ಕನ್ನಡದ ಮಾಣಿಕ್ಯ ಸುದೀಪ್ ಮೇಘನಾ ಹಾಗೂ ಚಿರು ಪ್ರೀತಿಯ ಕುಡಿಗೆ  ವಜ್ರವೊಂದನ್ನು ಕೊಡುಗೆಯಾಗಿ ನೀಡಿದ್ದಾರಂತೆ.

ಆದರೇ ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ತಿಳಿಬಾರದು ಅನ್ನೋ ಮನಸ್ಥಿತಿಯ ಸುದೀಪ್ ಈ ವಿಚಾರವನ್ನು ಹಂಚಿಕೊಂಡಿಲ್ಲ. ಸುದೀಪ್ ಹಾಗೂ ಮೇಘನಾ ಸರ್ಜಾ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯವಿದ್ದು ಆಗಾಗ ಭೇಟಿ ಮಾಡುತ್ತಾರೆ.

ಇನ್ನು ಚಿರು ಹಾಗೂ ಸುದೀಪ್ ಸ್ವಂತ ಅಣ್ಣ ತಮ್ಮನಂತಿದ್ದು ಸುದೀಪ್ ಹಲವು ಚಿತ್ರದಲ್ಲಿ ಚಿರು ನಟಿಸಿದ್ದಾರೆ. ಆದರೇ ಚಿರು ಅಕಾಲಿಕ ನಿಧನ ಇವರನ್ನು ಭೌತಿಕವಾಗಿ ದೂರ ಮಾಡಿದ್ದರೂ ಚಿರು ಬರ್ತಡೇ ಗೆ ಸ್ಪೆಶಲ್ ಪೋಟೋ ಹಂಚಿಕೊಂಡ ಸುದೀಪ್ ವಿಶ್ ಮಾಡಿದ್ದರು.

ಈಗ ಪುಟ್ಟ ಕಂದನಿಗೆ ದೊಡ್ಡಪ್ಪನಾಗಿ ನಿಂತಿರೋ ಸುದೀಪ್ ತಮ್ಮ ಸ್ಥಾನಕ್ಕೆ ತಕ್ಕಂತೆ ವಜ್ರದ ಉಡುಗೊರೆ ನೀಡಿದ್ದಾರೆ.

RELATED ARTICLES

Most Popular