ಮಂಗಳವಾರ, ಏಪ್ರಿಲ್ 29, 2025
HomeBreakingಸರ್ಜಾ ಕುಟುಂಬದಲ್ಲಿ ಮತ್ತೊಮ್ಮೆ ಮನೆಮಾಡಿದ ಸಂಭ್ರಮ…! ಆನಿವರ್ಸರಿ ಸಂಭ್ರಮದಲ್ಲಿ ದುಬಾರಿ ಹಿರೋ..!!

ಸರ್ಜಾ ಕುಟುಂಬದಲ್ಲಿ ಮತ್ತೊಮ್ಮೆ ಮನೆಮಾಡಿದ ಸಂಭ್ರಮ…! ಆನಿವರ್ಸರಿ ಸಂಭ್ರಮದಲ್ಲಿ ದುಬಾರಿ ಹಿರೋ..!!

- Advertisement -

ಕಳೆದ ಐದಾರು ತಿಂಗಳಿನಿಂದ ದುಃಖವೇ ಮಡುಗಟ್ಟಿದ್ದ ಮನೆಯಲ್ಲಿಗ ಒಂದೊಂದೆ ಸಂಭ್ರಮದ ಗಳಿಗೆ ಎದುರಾಗುತ್ತಿದೆ. ಜ್ಯೂನಿಯರ್ ಚಿರು ಆಗಮನದ ಖುಷಿಯಲ್ಲಿದ್ದ ಸರ್ಜಾ ಮನೆಯಲ್ಲಿ ಈಗ ದುಬಾರಿ ಹೀರೋ ಧ್ರುವ್ ಸರ್ಜಾ ವಿವಾಹ ವಾರ್ಷೀಕೋತ್ಸವದ ಸಂಭ್ರಮ ಮನೆ ಮಾಡಿದೆ.

2019 ನವೆಂಬರ್ 24 ರಂದು ತಮ್ಮ ಬಹುಕಾಲದ ಗೆಳತಿ ಪ್ರೇರಣಾರನ್ನು ವರಿಸಿದ್ದ ಧ್ರುವ್ ಸರ್ಜಾ, ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಈ ಲವ್ ಬರ್ಡ್ಸ್ ಮದುವೆಯಲ್ಲಿ ಹಿರಿಯಣ್ಣ ಚಿರು ಹಾಗೂ ಮೇಘನಾ ಸರ್ಜಾ ಸಖತ್ ಮಿಂಚಿದ್ದರು. ಆದರೆ ಒಂದೇ ವರ್ಷ ಕಳೆಯುವಷ್ಟರಲ್ಲಿ  ಸ್ಥಿತಿ ತುಂಬ ಬದಲಾಗಿದೆ.

ಆದರೂ ಧ್ರುವ್ ಸರ್ಜಾ ಹಾಗೂ ಪ್ರೇರಣಾ ಧ್ರುವ್ ತಮ್ಮ ಜವಾಬ್ದಾರಿ ಅರಿತು ಎಲ್ಲವನ್ನು ಮುನ್ನಡೆಸಿಕೊಂಡು ಬಂದಿದ್ದು, ಅವರ ಸುಂದರ ವೈವಾಹಿಕ ಬದುಕಿಗೆ ಈಗ ಒಂದನೇ ವಸಂತದ ಸಂಭ್ರಮ. ಚಿರು ಅಗಲಿಕೆಯ ಹಿನ್ನೆಲೆಯಲ್ಲಿ ಆನಿವರ್ಸರಿಯನ್ನು ಗ್ರ್ಯಾಂಡ್ ಆಗಿ ಸಂಭ್ರಮಿಸಲು ಧ್ರುವ್ ಸರ್ಜಾ ಸಿದ್ಧರಿಲ್ಲ. ಹೀಗಾಗಿ ಮನೆಯಲ್ಲೇ ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ್ದಾರೆ ಎನ್ನಲಾಗಿದೆ.

ಪ್ರೇರಣಾ ಹಾಗೂ ಧ್ರುವ್ ಸರ್ಜಾ  ಸ್ಕೂಲ್ ದಿನಗಳಿಂದಲೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದು, 15 ವರ್ಷಗಳ ಕಾಲ ಪ್ರೀತಿಸಿ ಹೆತ್ತವರ ಒಪ್ಪಿಗೆ ಪಡೆದು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಧ್ಯ ಧ್ರುವ್ ಸರ್ಜಾ ಪೊಗರು ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದರೇ ದುಬಾರಿ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ವಿದೇಶ ಪ್ರವಾಸವನ್ನು ಕೈಬಿಟ್ಟಿರುವ  ಈ ಜೋಡಿ ಸಧ್ಯ ತಮ್ಮ ತಮ್ಮ ಕೆಲಸದ ಮಧ್ಯೆಯೇ ವಾರ್ಷೀಕೋತ್ಸವವನ್ನು ಸೆಲಿಬ್ರೇಟ್ ಮಾಡಿದ್ದಾರೆ.

ಪ್ರೇರಣಾ ಕೂಡ ದಯಾನಂದಸಾಗರ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದು, ಇತ್ತೀಚಿಗಷ್ಟೇ ಕಾಲೇಜುಗಳು ಕಾರ್ಯಾರಂಭ ಮಾಡಿರೋದರಿಂದ ಪ್ರೇರಣಾ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

RELATED ARTICLES

Most Popular