ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದು ಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿರಿಸಿರೋ ಡಿ ಬಾಸ್ ಕೇಕ್ ಕಟ್ಟ ಮಾಡದೇ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳೋ ಮೂಲಕ ಮಾದರಿಯಾಗಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರಲ್ಲಿರೋ ದರ್ಶನ್ ನಿವಾಸಕ್ಕೆ ಅಭಿಮಾನಿಗಳ ದಂಡೇ ಹರಿಬಂದಿದೆ. ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳಿಗೆ ದರ್ಶನ ನೀಡಿದ ದಾಸ ಹಾರ ತುರಾಯಿ ಬದಲು ದವಸ, ದಾನ್ಯಗಳನ್ನು ತರುವಂತೆ ಮನವಿ ಮಾಡಿದ್ದರು. ಅಕ್ಕಿ, ದವಸ ದಾನ್ಯಗಳನ್ನು ಸ್ವೀಕರಿಸಿದ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಶೇಕ್ ಹ್ಯಾಂಡ್ ಮಾಡಿದರಷ್ಟೇ ಅಲ್ಲದೇ, ಕೇಕ್ ಕಟ್ ಮಾಡದೇ ಬರ್ತಡೇ ಆಚರಿಸಿಕೊಂಡ್ರು.

ದರ್ಶನ್ ಬರ್ತಡೇ ಹಿನ್ನೆಲೆಯಲ್ಲಿ ನಟ ವಿನೋದ್ ಪ್ರಭಾಕರ್, ಆದಿತ್ಯ ಸೇರಿದಂತೆ ಚಿತ್ರರಂಗದ ನಟನಟಿಯರು ಆಗಮಿಸಿ ಶುಭ ಕೋರಿದ್ರು. ಬರ್ತಡೇ ಹಿನ್ನೆಲೆಯಲ್ಲಿ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಟೀಸರನ್ ನ್ನು ಮಧ್ಯರಾತ್ರಿಯೇ ಚಿತ್ರತಂಡ ಬಿಡುಗಡೆ ಮಾಡಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 3 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದ್ದು, ಟೀಸರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಅನ್ನು ವಿಭಿನ್ನವಾಗಿ ತೋರಿಸೋ ಮೂಲಕ ಚಿತ್ರದ ಬಗ್ಗೆ ಇದ್ದ ಕುತೂಹಲವನ್ನು ಹೆಚ್ಚಿಸಲಾಗಿದೆ.
ರಾಬರ್ಟ್ ಸಿನಿಮಾದ EXCLUSIVE ಟೀಸರ್ ವೀಕ್ಷಿಸಿ.