ಸೋಮವಾರ, ಏಪ್ರಿಲ್ 28, 2025
HomeCinemaಮಲೆನಾಡಿನಲ್ಲಿ ಅಡಿಕೆ ಸುಲಿಯಲು ಹೋದ ಪುಟ್ಟಗೌರಿ…! ಇಷ್ಟಕ್ಕೂ ರಂಜನಿಗೆ ಇಂಥ ಸ್ಥಿತಿ ಬಂದಿದ್ದ್ಯಾಕೆ…?

ಮಲೆನಾಡಿನಲ್ಲಿ ಅಡಿಕೆ ಸುಲಿಯಲು ಹೋದ ಪುಟ್ಟಗೌರಿ…! ಇಷ್ಟಕ್ಕೂ ರಂಜನಿಗೆ ಇಂಥ ಸ್ಥಿತಿ ಬಂದಿದ್ದ್ಯಾಕೆ…?

- Advertisement -

ಕೊರೋನಾ ಲಾಕ್ ಡೌನ್ ನಿಂದ ಕಿರುತೆರೆ ಹಿರಿತೆರೆ ಕಲಾವಿದರೆಲ್ಲ ಅದಾಯವಿಲ್ಲದೇ ಕಂಗಾಲಾಗಿದ್ದಾರೆ. ಈ ಮಧ್ಯೆ ಪುಟ್ಟ ಗೌರಿ ಖ್ಯಾತಿಯ ರಂಜನಿ ಅಡಿಕೆ ಇತರ ಕೆಲಸದವರ ಜೊತೆ ಅಡಿಕೆ ಸುಲಿಯೋ ಸಾಹಸ ಮಾಡ್ತಿರೋ ಪೋಟೋವೊಂದು ವೈರಲ್ ಆಗಿದೆ.

ಅಯ್ಯೋ ಪುಟ್ಟ ಗೌರಿ ಗೆ ಇಂಥ ಸ್ಥಿತಿನಾ ಅಂತ ಸೀರಿಯಲ್ ಪ್ರಿಯ ಹೆಣ್ಣುಮಕ್ಕಳು ನೊಂದುಕೊಳ್ಳೋ ಮುನ್ನವೇ ಸತ್ಯ ಹೇಳ್ತಿವಿ ಕೇಳಿ. ಇಷ್ಟಕ್ಕೂ ರಂಜನಿ ಹೀಗೆ ಅಡಿಕೆ ಸುಲಿತಾ ಇರೋದು ಕೆಲಸಕ್ಕೆ ಅಲ್ಲ ಬದಲಾಗಿ ಕುತೂಹಲಕ್ಕೆ.

ಹೌದು,ಸದ್ಯ ದಿಗಂತ್ ಹಾಗೂ ಆಂಡಿ ಜೊತೆ ಬೆಳ್ಳಿ ತೆರೆಯಲ್ಲಿ ಹಿರೋಯಿನ್ ಆಗಿ ಮಿಂಚೋಕೆ ಸಿದ್ಧವಾಗಿರೋ ರಂಜನಿ ರಾಘವನ್ ಶೂಟಿಂಗ್ ಗಾಗಿ ಶಿವಮೊಗ್ಗ ಸನಿಹದ ಹಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ.

ಮಲೆನಾಡಿನ ಲ್ಲಿ ಈಗ ಅಡಿಕೆ ಕೊಯ್ಲು ನಡೆಯುತ್ತಿದ್ದು, ಅಡಿಕೆ ಸುಲಿಯೋದ್ರಲ್ಲಿ ಕೂಲಿಯಾಳುಗಳು ಫುಲ್ ಬ್ಯುಸಿ. ಯಾರ ಮನೆ ಅಂಗಳ ನೋಡಿದರೂ ಅಡಿಕೆ ರಾಶಿ ಎಂಬ ಸ್ಥಿತಿ. ಇಂಥ ಪರಿಸರದಲ್ಲಿ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಶೂಟಿಂಗ್ ತೆರಳಿರೋ ರಂಜನಿ ಕುತೂಹಲದಿಂದ ಅಡಿಕೆ ಸುಲಿದು ನೋಡಲು ಮುಂದಾಗಿದ್ದಾರೆ.

ಕುತೂಹಲದಿಂದ ಅಡಿಕೆ ಸುಲಿಯುವ ಮೆಟಗತ್ತಿ ಮೇಲೆ ಕೂತಿರುವ ರಂಜನಿ ಸ್ಥಳೀಯ ಹೆಣ್ಣುಮಗಳೊಬ್ಬಳು ಮಾರ್ಗದರ್ಶನ ನೀಡ್ತಿದ್ದಾರೆ. ಈ ವಿಡಿಯೋ ವನ್ನು ಸ್ವತಃ ರಂಜನಿ ರಾಘವನ್ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ರಂಜನಿ ರಾಘವನ್ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ” ಚಿತ್ರದಲ್ಲಿ ಎರಡನೇ ಹಿರೋಯಿನ್ ಆಗಿ ನಟಿಸುತ್ತಿದ್ದು, ಮೊದಲನೇ ಹಿರೋಯಿನ್ ಆಗಿ ಐಂದ್ರಿತಾ ರೈ ನಟಿಸುತ್ತಿದ್ದಾರೆ. ನಾಯಕ ನಟನಾಗಿ ದಿಗಂತ್ ನಟಿಸುತ್ತಿದ್ದು, ಬರೋಬ್ಬರಿ 8 ವರ್ಷಗಳ ಬಳಿಕ ಆ್ಯಂಡಿ ಮತ್ತು ದೂದ್ ಪೇಡ ದಿಗಂತ್ ಒಟ್ಟಿಗೆ ನಟಿಸುತ್ತಿದ್ದಾರೆ.

ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ನಡೆಯುತ್ತಿರುವ ಈ ಚಿತ್ರೀಕರಣದಲ್ಲಿ ದಿಗಂತ್ ಹಾಗೂ ಐಂದ್ರೀತಾ ಜೊತೆ ರಂಜನಿ ಸಖತ್ ಎಂಜಾಯ್ ಮಾಡ್ತಿದ್ದಾರಂತೆ.

RELATED ARTICLES

Most Popular