ನಿತ್ಯಭವಿಷ್ಯ : 02-12-2020

ಮೇಷರಾಶಿ
ಸ್ತ್ರೀಯಿಂದ ಶುಭ, ಬಾಕಿ ವಸೂಲಿ, ವಾಹನ ಖರೀದಿ, ಒಳ್ಳೆಯ ಅನುಕೂಲ, ಸುಖ ಭೋಜನ, ನಿರೀಕ್ಷಿತ ಕೆಲಸಗಳು ಕೈಗೂಡುವುದು, ವ್ಯವಹಾರದಲ್ಲಿ ಅಭಿವೃದ್ದಿ.

ವೃಷಭರಾಶಿ
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಹೋದರರಿಂದ ಸಹಾಯ, ಹಣಕಾಸಿನ ಬಗ್ಗೆ ಎಚ್ಚರವಿರಲಿ, ಶತ್ರು ಭಾದೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ.

ಮಿಥುನರಾಶಿ
ಮನಕ್ಲೇಷ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ವಾಹನ ಅಪಘಾತ, ಸಣ್ಣ ಮಾತಿನಿಂದ ಕಲಹ, ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆಯನ್ನು ವಹಿಸುವುದು ಉತ್ತಮ.

ಕಟಕರಾಶಿ
ಅನಿರೀಕ್ಷಿತ ಶುಭವಾರ್ತೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ಸರಕಾರಿ ಉದ್ಯೋಗಿಗಳಿಗೆ ಶುಭಫಲ, ಆರೋಗ್ಯದಲ್ಲಿ ಚೇತರಿಕೆ, ಸ್ಥಳ ಬದಲಾವಣೆ, ಅಧಿಕ ಖರ್ಚು.

ಸಿಂಹರಾಶಿ
ಉದ್ಯೋಗ, ವ್ಯವಹಾರಗಳಲ್ಲಿ ಅಭಿವೃದ್ದಿ, ತಾಯಿಯಿಂದ ಶುಭಹಾರೈಕೆ, ವಸ್ತ್ರ ಖರೀದಿ, ಮಾತಿನಲ್ಲಿ ಹಿಡಿತವಿರಲಿ, ಅತಿಯಾದ ನೋವು, ದಿನಾಂತ್ಯಕ್ಕೆ ಶುಭ ವಾರ್ತೆ ಕೇಳುವಿರಿ.

ಕನ್ಯಾರಾಶಿ
ಸಮಚಿತ್ತದಿಂದ ವ್ಯವಹರಿಸಿದ್ರೆ ಹಾದಿ ಸುಗಮವಾಗಲಿದೆ, ನಂಬಿದ ಜನರಿಂದ ಅಶಾಂತಿ, ರಾಜ ವಿರೋಧ, ಯತ್ನ ಕಾರ್ಯಭಂಗ, ಆರೋಗ್ಯದಲ್ಲಿ ಏರುಪೇರು, ವಿಪರೀತ ವ್ಯಸನ.

ತುಲಾರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ, ಆತ್ಮವಿಶ್ವಾಸದಿಂದ ಗೆಲುವು, ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬದಲ್ಲಿ ಪ್ರೀತಿ, ಮಿತ್ರರ ಭೇಟಿ, ಪ್ರವಾಸದಿಂದ ದುಃಖ.

ವೃಶ್ಚಿಕರಾಶಿ
ಧನಾಗಮನದಲ್ಲಿ ಏರುಪೇರಾದ್ರೂ ಆದಾಯದಲ್ಲಿ ವೃದ್ದಿಯನ್ನುಕಾಣುವಿರಿ, ಇಲ್ಲ ಸಲ್ಲದ ಅಪವಾದ ನಿಂದನೆ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ, ಆತ್ಮೀಯರ ಸಹಕಾರದಿಂದ ಕಾರ್ಯಸಿದ್ದಿಯಾಗಲಿದೆ.

ಧನಸ್ಸುರಾಶಿ
ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಇದು ಸೂಕ್ತ ಕಾಲ, ಆತ್ಮವಿಶ್ವಾಸದಿಂದ ಗೆಲುವನ್ನು ಕಾಣುವಿರಿ, ಉದ್ಯೋಗದಲ್ಲಿ ಬಡ್ತಿ, ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ, ಮನಶಾಂತಿ, ಐಶ್ವರ್ಯ ವೃದ್ಧಿ, ಋಣವಿಮೋಚನೆ.

ಮಕರರಾಶಿ
ನಿರಾಸೆಯಿಂದ ಕೊರಗದಿರಿ, ನಿಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ಮರೆಯದಿರಿ, ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಕೂಡ ಧನಾಗಮನದಿಂದ ನೆಮ್ಮದಿ, ವಿವಾಹಕ್ಕೆ ಅಡಚಣೆ, ಸಾಲ ಮಾಡಬೇಕಾಗುವ ಪರಿಸ್ಥಿತಿ, ಉದ್ಯೋಗದಲ್ಲಿ ತೊಂದರೆ.

ಕುಂಭರಾಶಿ
ಕೆಲಸ ಕಾರ್ಯಗಳಿಗಾಗಿ ಅಧಿಕ ಸುತ್ತಾಟ, ವೈವಾಹಿಕ ಸಂಬಂಧಿಗಳಿಗೆ ಅಡೆತಡೆಗಳಿರುತ್ತದೆ, ನೀಚ ಜನರಿಂದ ದೂರವಿರಿ, ಅನಗತ್ಯ ತಿರುಗಾಟ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ಮನಃಶಾಂತಿ.

ಮೀನರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶತ್ರುಭಯ, ವಿದ್ಯಾರ್ಥಿಗಳಿಗೆ ಆತಂಕ, ವಿದೇಶ ಪ್ರಯಾಣ, ಸುಖ ಭೋಜನ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ಕ್ರೀಡಾ ಮನೋಭಾವಕ್ಕೆ ಮನ್ನಣೆ ಸಿಗಲಿದೆ, ನೂತನ ವಾಹನ ಖರೀದಿ ಯೋಗ.

Comments are closed.