ಸ್ಯಾಂಡಲವುಡ್ ನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಫೇಮಸ್ ಜೋಡಿ ರಾಧಿಕಾ ಮತ್ತು ಯಶ್. ಮದುವೆ ಬಳಿಕ ತೆರೆ ಮೇಲೆ ಒಂದಾಗದ ರಾಕಿಂಗ್ ಜೋಡಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಸ್ಯಾಂಡಲವುಡ್ ನ ಮೋಸ್ಟ್ ರೋಮ್ಯಾಂಟಿಕ್ ಹಾಗೂ ಸಕ್ಸಸಫುಲ್ ಕಪಲ್ಸ್. ಧಾರಾವಾಹಿಯಿಂದ ಒಟ್ಟಿಗೆ ಜರ್ನಿ ಅರಂಭಿಸಿದ ಈ ಜೋಡಿ ಬಳಿಕ ಸಿನಿಮಾ ಹಾಗೂ ಬದುಕಿನಲ್ಲೂ ಒಂದಾಗಿ ಮೋಡಿ ಮಾಡಿದ್ರು.

ಆದರೆ ಮೊಗ್ಗಿನ ಮನಸ್ಸು, ಡ್ರಾಮಾ, ಮಿಸ್ಟರ್ ಆಂಡ್ ಮಿಸ್ಸೆಸ್ ರಾಮಾಚಾರಿ ಹಾಗೂ ಸಂತು ಸ್ಟ್ರೇಟ್ ಫಾರ್ವಡ್ ನಂತರ ಯಾವುದೇ ಚಿತ್ರದಲ್ಲೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ.

ಮದುವೆ ಬಳಿಕ ಯಶ್ ಮತ್ತು ರಾಧಿಕಾ ಒಟ್ಟಾಗಿ ನಟಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಲೇ ಬಂದ್ರೂ ಒಂದೊಳ್ಳೆ ಕತೆಗಾಗಿ ಕಾಯ್ತಿರೋ ಈ ಜೋಡಿ ಇನ್ನು ಒಟ್ಟಿಗೆ ತೆರೆ ಮೇಲೆ ಬಂದಿರಲಿಲ್ಲ.ಇದೀಗ ಎರಡು ಮಕ್ಕಳ ಮಮ್ಮಿಯಾಗಿರೋ ರಾಧಿಕಾ ಹಾಗೂ ಕೆಜಿಎಫ್-೨ ನಲ್ಲಿ ಬ್ಯುಸಿಯಾಗಿರೋ ಯಶ್ ಒಟ್ಟಿಗೆ ತೆರೆಗೆ ಬಂದಿದ್ದಾರೆ.

ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ ಅಂದ್ಕೊಂಡ್ರಾ ಇಲ್ಲ. ಯಶ್-ರಾಧಿಕಾ ದಂಪತಿ ಬಣ್ಣ ಹಚ್ಚಿರೋದು ಜಾಹೀರಾತಿಗಾಗಿ.
ಫ್ರೀಡಂ ಸನ್ ಪ್ಲವರ್ ಕುಕ್ಕಿಂಗ್ ಆಯಿಲ್ ನ ಜಾಹೀರಾತಿಗಾಗಿ ಯಶ್ ಮತ್ತು ರಾಧಿಕಾ ಒಟ್ಟಿಗೆ ನಟಿಸಿದ್ದಾರೆ. ಕುಕ್ಕಿಂಗ್ ಆಯಿಲ್ ಬಳಸಿ ಅಡುಗೆ ಮಾಡುವ ರಾಧಿಕಾ. ಅದನ್ನು ಸವಿದು ಮೆಚ್ಚಿಕೊಳ್ಳುವ ಯಶ್ ಜಾಹೀರಾತಿನ ಸಾರಾಂಶ. ಈ ವಿಚಾರವನ್ನು ಸ್ವತಃ ಸ್ಟಾರ್ ಕಪಲ್ಸ್ ಹಂಚಿಕೊಂಡಿದ್ದಾರೆ. ಮುಂದಿನ ವಾರದಿಂದ ಈ ಜಾಹೀರಾತು ತೆರೆಗೆ ಬರಲಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.