ಬುಧವಾರ, ಏಪ್ರಿಲ್ 30, 2025
HomeSpecial StoryMukthi Naga Kshetra : ನಾಗದೋಷದಿಂದ ಮುಕ್ತಿ ನೀಡುತ್ತಾನೆ ಇಲ್ಲಿನ 16 ಅಡಿ ನಾಗರಾಜ

Mukthi Naga Kshetra : ನಾಗದೋಷದಿಂದ ಮುಕ್ತಿ ನೀಡುತ್ತಾನೆ ಇಲ್ಲಿನ 16 ಅಡಿ ನಾಗರಾಜ

- Advertisement -

Mukthi Naga Kshetra : ನಾಗ ದೋಷ … ಇದು ಎಲ್ಲ ದೋಷಗಳಿಗಿಂದ ಕಠಿಣದೋಷ ಅನ್ನೋ ಮಾತಿದೆ. ಅದನ್ನು ನಿವಾರಣೆ ಮಾಡೋಕೆ ಹೋಮ ಹವನ ಮಾಡ ಬೇಕಾಗುತ್ತೆ. ಅದರಲ್ಲೂ ಸುಬ್ರಹ್ಮಣ್ಯ ಅಥವಾ ನಾಗಗಳ ಆರಾಧನೆ ಮಾಡಿದ್ರೆ ಈ ನಾಗ ದೋಷ ಪರಿಹಾರವಾಗುತ್ತೆ ಅನ್ನೋ ನಂಬಿಕೆ. ಅದಕ್ಕೆ ಅಂತಾನೆ ಕುಕ್ಕೆ ಸುಬ್ರಹ್ಮಣ್ಯ ಅಥವಾ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಜನರು ಹೋಗುತ್ತಾರೆ. ಆದ್ರೆ ಇಲ್ಲೊಂದು ದೇವಾಲಯವಿದೆ. ಇಲ್ಲಿಗೆ ಬಂದ್ರೆ ನಾಗ ದೋಷಗಳು ಕೂಡಲೇ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆ.

ಪ್ರಕೃತಿಯ ಮಧ್ಯ ನೆಲೆನಿಂತಿರೋ ದೇವಾಲಯಕ್ಕೆ ಸಾವಿರಾರು ವರ್ಷ ಇತಿಹಾಸವಿಲ್ಲ. ಆದ್ರೂ ಈ ದೇವಾಲಯಕ್ಕೆ ಬಂದ್ರೆ ನಾಗದೋಷ ದಂತಹ ದೋಷವು ಪರಿಹಾರವಾಗುತ್ತೆ. ಬೇಡಿ ಬಂದ್ರೆ ಇಲ್ಲಿರುವ ನಾಗರಾಜ ಭಕ್ತರಿಗೆ ಬೇಡಿದನ್ನು ನೀಡುತ್ತಾನೆ ಅನ್ನೋ ನಂಬಿಕೆ ಇದೆ. ಇದು ಆದಿ ಸುಬ್ರಹ್ಮಣ್ಯದಷ್ಟೇ ಪವಿತ್ರ ಕ್ಷೇತ್ರ .

ಇಲ್ಲಿನ ಮುಖ್ಯ ವಿಶೇಷತೆ ಅಂದ್ರೆ 16 ಅಡಿಯ ಷ್ಟು ದೊಡ್ಡದಾಗಿ ನಿರ್ಮಿಸಲಾದ ನಾಗರಾಜನ ಮೂರ್ತಿ. ಇಲ್ಲಿ 3 ಅಡಿಯ ಪೀಠದ ಮೇಲೆ 16ಮುಕ್ಕಾಲು ಅಡಿಯ 7 ಹೆಡೆಯ ನಾಗರಾಜನನ್ನು ಪ್ರತಿಷ್ಟಾಪಿಸಲಾಗಿದೆ. ಇದು ಜಗತ್ತಿನ ಅತಿ ದೊಡ್ಡ ನಾಗನ ಮೂರ್ತಿ ಎಂದರೆ ತಪ್ಪಾಗಲ್ಲ. ಈ ಮುಖ್ಯ ಗುಡಿಯ ಸುತ್ತಲೂ ಬೇರೆ ಬೇರೆ ನಾಲ್ಕು ಗುಡಿಯನ್ನು ನಿರ್ಮಿಸಲಾಗಿದೆ. ಇಲ್ಲೇ ಪಕ್ಕದಲ್ಲಿ ನಾಗರಕಲ್ಲುಗಳನ್ನೂ ಸ್ಥಾಪಿಸಲಾಗಿದ್ದು ಇಲ್ಲಿ ಈ ನಾಗರ ಕಲ್ಲಿಗೆ ಸೇವೆ ಮಾಡಿದ್ರೆ ಇಷ್ಟಾರ್ಥಗಳು ಈಡೇರುತ್ತೆ ಅನ್ನೋ ನಂಬಿಕೆ ಇಲ್ಲಿನ ಭಕ್ತರದು.

ಈ ದೇವಾಲಯ ನಿರ್ಮಾಣವಾಗಿರೋದು 1999ರಲ್ಲಿ ವಿಜಯ ಕಾಲೋಜಿನ ಪ್ರೊಫೆಸರ್ ಆಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿಗಳು ಇದನ್ನು ನಿರ್ಮಿಸಿದ್ರು. ಸುಬ್ರಹ್ಮಣ್ಯ ಶಾಸ್ತ್ರಿಗಳಿಗೆ ಕನಸಿನಲ್ಲಿ ಪದೇ ಪದೇ ನಾಗರೂಪದಲ್ಲಿ ಸುಬ್ರಹ್ಮಣ್ಯ ದೇವರು ಬಂದು ತಮಗೆ ದೇವಾಲಯ ನಿರ್ಮಿಸಬೇಕು ಅಂತ ಹೇಳುತ್ತಿದ್ರಂತೆ. ಒಂದು ಬಾರಿ ನಾಗಭೂಷಣ ಎಂಬುವರು ತಮ್ಮ ಜಮೀನನ್ನು ಸುಬ್ರಹ್ಮಣ್ಯ ಶಾಸ್ತ್ರಿಗಳಿಗೆ ತೋರಿಸುತ್ತಿ ದ್ದಾಗ ಅಲ್ಲಿ ಹೆಡೆ ಬಿಚ್ಚಿ ನಿಂತ 16 ಅಡಿಗೂ ಉದ್ದದ ನಾಗನ ದರ್ಶನವಾಯಿತು. ಅದೇ ದಿನ ರಾತ್ರೆ ಕನಸಿನಲ್ಲಿ ನಾಗ ದೇವರು ಬಂದು ತನಗೆ ಜಮೀನಿನ ಅದೇ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಹೇಳಿದ್ರಂತೆ. ಇದಾದ ನಂತ್ರ ಸುಬ್ರಹ್ಮಣ್ಯ ಶಾಸ್ತ್ರಿಗಳು ಆ ಜಮೀನು ಖರೀದಿಸಿ ಅಲ್ಲೇ ದೇವಾಲಯವನ್ನು ನಿರ್ಮಿಸಿದರು.

ಈ ದೇವಾಲಯದಲ್ಲಿ 9 ಮಂಗಳವಾರ ಅಥವಾ 9 ಭಾನುವಾರ ದೇವರಿಗೆ 9 ಪ್ರದಕ್ಷಿಣೆ ಬಂದ್ರೆ ಇಷ್ಟಾರ್ಥ ಇಡೇರುತ್ತೆ ಅನ್ನೋದು ಭಕ್ತರ ನಂಬಿಕೆ . ಹೀಗಾಗಿ ಭಕ್ತರು ಇಲ್ಲಿಗೆ ಬಂದು ದೇವರ ಸೇವೆ ಮಾಡಿ ಕೃತಾರ್ಥರಾಗುತ್ತಾರೆ. ಜೇಷ್ಠ ಮಾಸದ ಶುದ್ದ ತ್ರಯೋದಶಿಯಲ್ಲಿ ಹಾಗೂ ಮಾಘ ಮಾಸದ ಶುದ್ಧ ಷಷ್ಠಿಯಲ್ಲಿ ಇಲ್ಲಿ ರಥೋತ್ಸವ ನಡೆಸಲಾಗುತ್ತೆ. ಈ ದಿನ ಸಾವಿರಾರು ಭಕ್ತರು ಬಂದು ಸೇವೆ ಮಾಡಿ ತಮ್ಮ ದೋಷ ಗಳನ್ನು ಕಳೆಯುತ್ತಾರೆ .ಇನ್ನು ಸದ್ಯ ಸಾಸ್ತ್ರಿಗಳ ಪತ್ನಿ ಡಾ ಗೌರಿ ಅವರು ಇಲ್ಲಿನ ಆಡಳಿತ ನೋಡಿಕೊಳ್ಳುತ್ತಿದ್ದಾರೆ. ಇವರು ನಾಗ ದೇವರ ಹೆಸರಲ್ಲಿ ಔಷಧಿ ನೀಡುತ್ತಿದ್ದು, ಹಲವರು ಇದರಿಂದ ಗುಣ ಮುಖರಾಗಿದ್ದಾರೆ.

ಇದನ್ನೂ ಓದಿ : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

ಈ ನಾಗ ದೇವಾಲಯ ಯಾವುದೆಂದ್ರೆ ಅದುವೇ ಬೆಂಗಳೂರಿನ ರಾಮೋಹಳ್ಳಿಯ ಸಮೀಪದ ಮುಕ್ತಿನಾಗ ದೇವಾಲಯ (Mukthi Naga Kshetra). ಬೆಂಗಳೂರಿನಿಂದ ದೊಡ್ಡ ಆಲದ ಮರಕ್ಕೆ ಹೋಗುವ ರಸ್ತೆಯಲ್ಲೇ ದೇವಾಲಯ ಸಿಗುತ್ತೆ. ಕೆಂಗೇರಿ ಬಸ್ ನಿಲ್ದಾಣದಿಂದ ರಾಮೋಹಳ್ಳಿಗೆ ಬಸ್ ಸೌಲಭ್ಯವಿದೆ. ರಾಮೋಹಳ್ಳಿ ಬಸ್ ನಿಲ್ದಾಣದಿಂದ ಕೇವಲ 1 ಕಿಲೋ ಮೀಟರ್ ದೂರದಲ್ಲಿದೆ ಈ ದೇವಾಲಯ. ಇಲ್ಲದಿದ್ದರೆ, ಆರ್. ಆರ್. ಡೆಂಟಲ್ ಕಾಲೇಜಿನಲ್ಲಿ ಬಳಿ ಯಿಂದ ಅಟೋ ಬೇಕಾದ್ರೂ ಮಾಡಿ ಇಲ್ಲಿಗೆ ತೆರಳಬಹುದು.

ಇದನ್ನೂ ಓದಿ : ತಿಮ್ಮಪ್ಪನ ಭಕ್ತರಿಗೆ ಹೊಸ ರೂಲ್ಸ್‌ ! ನಿಯಮ ಪಾಲಿಸದಿದ್ದರೆ ತಿಮ್ಮಪ್ಪನ ದರ್ಶನವೇ ಇಲ್ಲ

ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

Mukthi Naga Kshetra Ramohalli 16 foot Nagaraj Nagadosha

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular