ಕೋಲಾರ: ಜಗತ್ತಿನಾದ್ಯಂತ ಬ್ರಿಟನ್ ವೈರಸ್ ಆತಂಕ ಸೃಷ್ಟಿಸಿದೆ. ಎಲ್ಲೆಡೆ ಲಾಕ್ ಡೌನ್,ನೈಟ್ ಕರ್ಪ್ಯೂ ಸದ್ದು ಮಾಡ್ತಿದ್ದರೇ ಕರ್ನಾಟಕ ಸರ್ಕಾರ ಮಾತ್ರ ಮಧ್ಯ ರಾತ್ರಿ ಯ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಬರೋಬ್ಬರಿ ೨೦ ಕೋಟಿ ಆದಾಯದ ನೀರಿಕ್ಷೆಯಲ್ಲಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಕೇವಲ ವರ್ಷಾಚರಣೆ ಮಾತ್ರವಲ್ಲದೇ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಬೆಂಗಳೂರಿನಲ್ಲಿ ರಾತ್ರಿ 1 ಗಂಟೆಯವರೆಗೆ ಹಾಗೂ ಜಿಲ್ಲೆಗಳಲ್ಲಿ ಮಧ್ಯರಾತ್ರಿ 12.30 ರವರೆಗೆ ಮದ್ಯ ಮಾರಾಟಕ್ಕೆ ಅಂಗಡಿಗಳು ತೆರೆದಿರುತ್ತವೆ.

ಸಾರ್ವಜನಿಕವಾಗಿ ಪಾರ್ಟಿ ಆಚರಣೆಗೆ ಅವಕಾಶವಿಲ್ಲದೇ ಹೋದರೂ ನಿಗದಿತ ಸ್ಥಳದಲ್ಲಿ ಹಾಗೂ ಬಾರ್,ಕ್ಲಬ್,ಪಾರ್ಟಿ ಹಾಲ್ನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ.ಜನರ ಹೊಸವರ್ಷಾಚರಣೆ ಉತ್ಸಾಹಕ್ಕೆ ಸರ್ಕಾರ ಬ್ರಿಟನ್ ವೈರಸ್ ಹರಡುವಿಕೆಯ ಸಾಧ್ಯತೆ ಮುಂದಿಟ್ಟು ಬ್ರೇಕ್ ಹಾಕುವ ಬದಲು ಮದ್ಯ ಮಾರಾಟಕ್ಕೆ ಅವಕಾಶ ನೀಡಿಮತ್ತಷ್ಟು ಉತ್ತೇಜನ ನೀಡಿದೆ.

ಕೊವೀಡ್ ಮಾರ್ಗ ಸೂಚಿಯಂತೆ ಹೊಸವರ್ಷಾಚರಣೆ ಹಾಗೂ ಪಾರ್ಟಿ ನಡೆಸುವಂತೆ ಸೂಚಿಸಿರುವ ಸರ್ಕಾರದ ಆದೇಶ ನಗೆಪಾಟಲಿಗೀಡಾಗಿದೆ. ಕುಡಿದಾದ ಮೇಲೆ ಸೋಷಿಯಲ್ ಡಿಸ್ಟನ್ಸ್ ಹೇಗೆ ಮೆಂಟೆನ್ ಆಗುತ್ತೆ ಅಂತ ಜನ ಪ್ರಶ್ನಿಸಿದ್ದಾರೆ.

ಆದರೆ ಸರ್ಕಾರಕ್ಕೆ ಜನರ ಆರೋಗ್ಯ ಕ್ಕಿಂತ ಆದಾಯವೇ ಮುಖ್ಯ ಎನ್ನುವಂತಾಗಿದ್ದು, ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ಇದಕ್ಕೆ ಸಾಕ್ಷಿ ಒದಗಿಸಿದೆ.

ಕೋಲಾರದಲ್ಲಿ ಮಾತನಾಡಿದ ಸಚಿವ ಎಚ್.ನಾಗೇಶ್, ಇಂದು ಮತ್ತು ನಾಳೆ ಸರ್ಕಾರಕ್ಕೆ ಮದ್ಯ ಮಾರಾಟದಿಂದ ೨೦ ಕೋಟಿ ಆದಾಯದ ನೀರಿಕ್ಷೆ ಇದೆ ಎಂದಿದ್ದು ಸರ್ಕಾರದ ಆದ್ಯತೆ ಯಾವುದಕ್ಕೆ ಎಂಬುದನ್ನು ಸಾಬೀತು ಪಡಿಸಿದೆ.

ನೈಟ್ ಕರ್ಪ್ಯೂ ಹೇರಿಕೆ, ಅಗತ್ಯವಿರುವ ಕಡೆ ಲಾಕ್ ಡೌನ್ ಮಾಡಲು ಸರ್ಕಾರ ಹಿಂದೇಟು ಹಾಕ್ತಿರೋದಕ್ಕೆ ಮದ್ಯ ಮಾರಾಟಗಾರರ ಹಾಗೂ ಬಾರ್,ಪಬ್ ಮಾಲೀಕರ ಲಾಭಿನೇ ಕಾರಣ ಎನ್ನಲಾಗ್ತಿದೆ.

ಒಟ್ಟಿನಲ್ಲಿ ಸರ್ಕಾರ ಖಾಲಿಯಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಜನರ ಪ್ರಾಣವನ್ನು ಪಣವಾಗಿಡ್ತಿದೆ ಎನ್ನುವ ಟೀಕೆಗಳು ಕೇಳಿ ಬರ್ತಿದ್ದು ಹೊಸವರ್ಷಾಚರಣ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಿದಲ್ಲಿ ಜನ ಸಾಮಾನ್ಯರಿಗೆ ಸಂಕಷ್ಟ ತಪ್ಪಿದಲ್ಲ.