ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ನಲಪಾಡ್ ಕಣ್ಣು….! ಕಾಂಗ್ರೆಸ್ ನಲ್ಲೇ ಅಸಮಧಾನ…!!

ಬೆಂಗಳೂರು: ವರ್ಷದ ಹಿಂದೆ ಸ್ನೇಹಿತನ ಮೇಲಿನ ಹಲ್ಲೆ‌ ಪ್ರಕರಣದ ಮೂಲಕ ರಾಜ್ಯದಾದ್ಯಂತ ಸಂಚಲನ‌ ಮೂಡಿಸಿದ್ದ ಶಾಸಕರ ಪುತ್ರ ನಲಪಾಡ್ ಯುವಕಾಂಗ್ರೆಸ್ ರಾಜ್ಯಾಧ್ಯಕ್ಷರ‌ ರೇಸ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಸ್ನೇಹಿತನ ಮೇಲೆ‌ ಮಾರಣಾಂತಿಕ‌ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ನಲಪಾಡ್ ಶತಾಯ ಗತಾಯ ಬೇಲ್ ಪಡೆದುಕೊಂಡು ಹೊರಬಂದಿದ್ದು, ಸಧ್ಯ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಹೀಗಿರುವಾಗಲೇ ಕಾಂಗ್ರೆಸ್ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಸಿದ್ಧತೆಯಲ್ಲಿರುವ ನಲಪಾಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ‌ ಮೇಲೆ ಕಣ್ಣಿಟ್ಟಿದ್ದಾನೆ.

ಈಗಾಗಲೇ ತಂದೆ ಹಾಗೂ ಶಾಸಕ ಎನ್.ಎ.ಹ್ಯಾರಿಸ್‌ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಸಾಮಾಜಿಕ ಕಾರ್ಯದ ಮೂಲಕ ಮುನ್ನಲೆಗೆ ಬರುವ ಸರ್ಕಸ್ ನಡೆಸಿರುವ ನಲಪಾಡ್ ವಿರುದ್ಧ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಮುಖ್ಯವಾಗಿ ಕ್ರಿಮಿನಲ್ ಪ್ರಕರಣವಿದೆ.

ಆದರೂ ಈಗಾಗಲೇ ನಲಪಾಡ್, ಕೇಂದ್ರ ಕಾಂಗ್ರೆಸ್ ಸಮಿತಿ ಎದುರು ಸಂದರ್ಶನಕ್ಕೆ ಹಾಜರಾಗಿದ್ದು ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಇದೆ ಎಂದು ಹೈಕಮಾಂಡ್ ಸರ್ಟಿಫಿಕೇಟ್ ನೀಡಿದೆ ಎನ್ನಲಾಗಿದೆ.

ಇದಲ್ಲದೇ ರಾಜ್ಯದ ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿರುವವರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದ್ದು ಇದರಲ್ಲಿ ರಾಜ್ಯದ ೧೬ ಯುವ ಕಾಂಗ್ರೆಸ್ ನಾಯಕರು ಅವಕಾಶ ಪಡೆದಿದ್ದಾರೆ.

ಎಂ.ಎಸ್.ರಾಮಯ್ಯ ಕುಟುಂಬದ ಕುಡಿ ರಕ್ಷಾ ರಾಮಯ್ಯ, ಮೊಹಮ್ಮದ್ ನಲಪಾಡ್,ಎಚ್.ಎಸ್.ಮಂಜುನಾಥ್ ಹಾಗೂ ಕರಾವಳಿ ಮೂಲದ ಮಿಥುನ್ ರೈ ಸೇರಿ ೧೬ ಜನರು ಒಂದು ಹಂತದ ಅಯ್ಕೆ ಬಳಿಕ ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದ್ದಾರೆ.

ವೈಯಕ್ತಿಕವಾಗಿ ರಾಜ್ಯ ಕಾಂಗ್ರೆಸ್ ಇಮೇಜ್ ಸಾಕಷ್ಟು ಧಕ್ಕೆ ಮಾಡಿದ್ದ ಶಾಸಕರ ಪುತ್ರನ ಪುಂಡಾಟದ ಪ್ರಕರಣದ ಬಳಿಕವೂ ನಲಪಾಡ್ ಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ಇದೀಗ ಕಾಂಗ್ರೆಸ್ ವಲಯದಲ್ಲೇ ಅಸಮಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Comments are closed.