ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಹಾಗೂ ನಟ ಅನುಷ್ಕಾ ದಂಪತಿ ನಿನ್ನೆಯಷ್ಟೇ ಹೆಣ್ಣು ಮಗುವಾಗಿರೋ ಸಂತಸವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ವಿರುಷ್ಕಾ ಮಗಳನ್ನು ನೋಡಲು ಕಾತರರಾಗಿದ್ದರು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ವಿರುಷ್ಕಾ ಮಗಳ ಪೋಟೋವೊಂದು ವೈರಲ್ ಆಗಿದೆ.

ವಿರಾಟ್ ಕೊಯ್ಲಿ ತಮ್ಮ ಮಗುವಿನ ಆರೈಕೆಗಾಗಿ ಆಸ್ಟ್ರೇಲಿಯಾ ಸರಣಿಯನ್ನು ಅರ್ಧದಲ್ಲಿಯೇ ಕೈಬಿಟ್ಟು ದೇಶಕ್ಕೆ ವಾಪಾಸಾಗಿದ್ದರು. ಅನುಷ್ಕಾ ಶರ್ಮ ಕೂಡ ಮಗುವಿನ ಬಗ್ಗೆ ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ನಿರೀಕ್ಷೆಯಂತೆಯೇ ಸ್ಟಾರ್ ದಂಪತಿಗಳಿಗೆ ಹೆಣ್ಣು ಮಗು ಜನಿಸಿದೆ.

ವಿರಾಟ್ ಕೊಯ್ಲಿ ಅವರ ಸಹೋದರ ವಿಕಾಸ್ ಕೊಯ್ಲಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ನವಜಾತ ಶಿಶುವಿನ ಪೋಟೋವೊಂದ ನ್ನು ಹಂಚಿಕೊಂಡಿದ್ದಾರೆ. ಮುದ್ದಾದ ಮಗುವಿನ ಸಣ್ಣ ಪಾದಗಳ ಪೋಟೋವನ್ನು ಅಪ್ಲೋಡ್ ಮಾಡಿರುವ ವಿಕಾಸ್ ಕೊಯ್ಲಿ Verified Happiness overboard…. angel in the house ಎಂದು ಬರೆದುಕೊಂಡಿದ್ದಾರೆ.

ಜನವರಿ 11ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ವಿರಾಟ್ ಕೊಯ್ಲಿ ತಮ್ಮ ಸಂಭ್ರಮವನ್ನು ನಿನ್ನೆ ಮಧ್ಯಾಹ್ನ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು. ನಿಮ್ಮ ಪ್ರೀತಿ, ಪ್ರಾರ್ಥನೆ, ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದ್ದರು.