ಸ್ಮೈಲಿಂಗ್ ಕಿಂಗ್….! ಪತಿಯ ಪೋಟೋಜೊತೆ ನೆನಪು ಹಂಚಿಕೊಂಡ ಮೇಘನಾ ರಾಜ್…!!

ಚಿರು ನಿಧನದ ಬಳಿಕ ಕುಗ್ಗಿ ಹೋಗಿದ್ದ ಮೇಘನಾ ರಾಜ್ ಈಗ ಜ್ಯೂನಿಯರ್ ಚಿರು ಜೊತೆ ಬದುಕು ಕಟ್ಟುತ್ತಿದ್ದಾರೆ. ಆದರೂ ಚಿರು ನೆನಪುಗಳನ್ನು ಸದಾ ಸ್ಮರಿಸುತ್ತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಲೇ ಇರೋ ಮೇಘನಾ ಈಗ ಹಳೆ ಪೋಟೋ ವೊಂದನ್ನು ಹಂಚಿಕೊಂಡು ಚಿರುಗೆ ಸ್ಮೈಲಿಂಗ್ ಕಿಂಗ್ ಎಂದಿದ್ದಾರೆ.

ಜನವರಿ 11 ರಂದು ಚಿರು ಹಳೆ  ಪೋಟೋವೊಂದನ್ನು ಹಂಚಿಕೊಂಡಿರೋ ಮೇಘನಾ ರಾಜ್, ಸ್ಮೈಲಿಂಗ್ ಕಿಂಗ್, ಆಲ್ವೇಸ್ ಸ್ಮೈಲಿಂಗ್ ಎನ್ನುವ ಮೂಲಕ  ಯುವಸಾಮ್ರಾಟ್ ನನ್ನು ನೆನಪಿಸಿಕೊಂಡಿದ್ದಾರೆ. ಚಿರು ಕೊನೆಯ ಟಿವಿ ಸಂದರ್ಶನವೊಂದರಲ್ಲಿ ತೆಗೆಯಲಾದ  ಪೋಟೋವನ್ನು ಮೇಘನಾ ರಾಜ್ ಹಾರ್ಟ್ ಇಮೋಜಿ ಜೊತೆ ಶೇರ್ ಮಾಡಿದ್ದಾರೆ.

ಜೂನ್ 7 ರಂದು ಚಿರು ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಮನೆಯಲ್ಲೇ ಕುಸಿದು ಬಿದ್ದಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದರು. ಚಿರು ನಿಧನರಾದಾಗ 5 ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ರಾಜ್, ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮನೀಡಿದ್ದು, ಸರ್ಜಾ ಕುಟುಂಬ ಚಿರುವೇ ಮತ್ತೊಮ್ಮೆ ಹುಟ್ಟಿಬಂದಿದ್ದಾನೆ ಎಂಬ ಸಮಾಧಾನದಲ್ಲಿ ದಿನದೂಡುತ್ತಿದೆ.

ಮಗು ಜನಿಸಿದ ಒಂದು ತಿಂಗಳ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ರಾಜ್, ಚಿರು ಕನಸಿನಂತೆ ಜ್ಯೂನಿಯರ್ ಚಿರುವನ್ನು ಬೆಳೆಸುವುದಷ್ಟೇ ನನ್ನ ಗುರಿ ಎಂದು ಹೇಳಿಕೊಂಡಿದ್ದರು.

ಸದಾ ಚಿರು ನೆನಪುಗಳನ್ನು ಹಂಚಿಕೊಳ್ಳುವ ಸಮಾಧಾನ ಪಟ್ಟುಕೊಳ್ಳುವ ಮೇಘನಾ ಮತ್ತೊಂದು ಚಿರು ಪೋಟೋ ಇನ್ ಸ್ಟಾಗ್ರಾಂನಲ್ಲಿ ಅಪ್ಡೇಟ್ ಮಾಡುತ್ತಿದ್ದಂತೆ ಚಿರು ಹಾಗೂ ಮೇಘನಾ ಅಭಿಮಾನಿಗಳು ಭಾವುಕರಾಗಿದ್ದು, ಮೇಘನಾಗೆ ಧೈರ್ಯ ತುಂಬುವ ಕಮೆಂಟ್ ಮಾಡಿದ್ದಾರೆ.

Comments are closed.