ಬುಧವಾರ, ಜೂನ್ 18, 2025
HomeBreakingಆಪ್ತರ ಜೊತೆ ಕಾಣಿಸಿಕೊಂಡ ಮೇಘನಾ ರಾಜ್....! ಕುಟ್ಟಿಮಾಗೆ ಸಾಥ್ ಕೊಟ್ಟೋರ್ಯಾರು ಗೊತ್ತಾ...!!

ಆಪ್ತರ ಜೊತೆ ಕಾಣಿಸಿಕೊಂಡ ಮೇಘನಾ ರಾಜ್….! ಕುಟ್ಟಿಮಾಗೆ ಸಾಥ್ ಕೊಟ್ಟೋರ್ಯಾರು ಗೊತ್ತಾ…!!

- Advertisement -

ಸದ್ಯ ಮೂರು ತಿಂಗಳ ಬಾಳಂತನ ಮುಗಿಸಿ ಜ್ಯೂನಿಯರ್ ಚಿರು ತುಂಟಾಟ ನೋಡ್ತಾ ಸಮಯ ಕಳೆಯುತ್ತಿರೋ ಮೇಘನಾ ಮೊನ್ನೆಯಷ್ಟೇ ಮೊದಲ ಬಾರಿಗೆ ಮಗನನ್ನು ಬಿಟ್ಟು ಕೆಲಕಾಲ ಹೊರಬಂದಿದ್ದಾರೆ.

Meghana W E1608955210853

ಇಷ್ಟಕ್ಕೂ ಮೇಘನಾ ಮಗನನ್ನು ಬಿಟ್ಟು ಹೋಗಿದ್ದೆಲ್ಲಿಗೆ ಅಂದ್ರಾ…?! ಮೇಘನಾ ಹಾಗೂ ಚಿರು ಪ್ರೆಂಡ್ಸ್ ಗ್ರೂಪ್ ನ ಮೇಘನಾ ಡಿನ್ನರ್ ಗಾಗಿ ಮನೆಯಿಂದ ಆಚೆ ಬಂದಿದ್ದಾರೆ.ಚಿರು ನಿಧನದ ಬಳಿಕ ಆಸ್ಪತ್ರೆ,ಚೆಕ್ ಅಪ್,ಹೆರಿಗೆ ಬಿಟ್ಟು ಬೇರಾವ ಸಂದರ್ಭದಲ್ಲೂ ಮನೆಯಿಂದ ಹೊರಗೆ ಕಾಲಿಡದ ಮೇಘನಾ ತುಂಬಾ ತಿಂಗಳ ಬಳಿಕ ಮೊದಲ ಬಾರಿಗೆ ಸ್ನೇಹಿತರ ಜೊತೆ ಊಟಕ್ಕೆ ಬಂದಿದ್ದು ಕೊಂಚ ರಿಲ್ಯಾಕ್ಸ್ ಮೂಡಿನಲ್ಲಿ ಕಂಡುಬಂದಿದ್ದಾರೆ.

Meghanaraj 1

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕಾಮನ್ ಪ್ರೆಂಡ್ಸ್ ಗ್ರೂಪ್ ನ ಸದಸ್ಯರಾದ ಪ್ರಜ್ವಲ್, ರಾಗಿಣಿ ಪ್ರಜ್ವಲ್, ಪನ್ನಗಾಭರಣ ಸೇರಿದಂತೆ ಹಲವರು ಈ ಡಿನ್ನರ್ ನಲ್ಲಿ ಭಾಗಿಯಾಗಿದ್ದರು. ಮೇಘನಾ ರಾಜ್ ಪ್ರಗ್ನೆಂಟ್ ಆಗಿದ್ದಾಗಲೂ ಈ ಟೀಂ ಮೇಘನಾಗೆ ಅದ್ದೂರಿ ಸೀಮಂತ ಮಾಡಿ ಸಂಭ್ರಮಿಸಿತ್ತು.

Meghana Raj 2

ಪ್ರಜ್ವಲ್, ಪನ್ನಗಾಭರಣ ಹಾಗೂ ಮೇಘನಾ ರಾಜ್ ಫ್ಯಾನ್ಸ್ ಗ್ರೂಪ್ ನಲ್ಲಿ ಈ ಪೋಟೋ ವೈರಲ್ ಆಗಿದೆ. ಸದ್ಯದಲ್ಲೇ ಮೇಘನಾ ರಾಜ್ ಪುತ್ರ ನಾಮಕರಣ ನೆರವೇರಿಸಲಿದ್ದು ಫೆಬ್ರವರಿ ಅಂತ್ಯಕ್ಕೆ ಮುಹೂರ್ತ ನಿಗದಿಯಾಗೋ ಸಾಧ್ಯತೆ ಇದೆ.

Mm E1612798564192

ನಟನೆಗೆ ಮರಳೋದಾಗಿ ಹೇಳಿಕೊಂಡಿರೋ ಮೇಘನಾ ರಾಜ್ ಒಂದಿಷ್ಟು ಕಾಲ ಮಗನ ಆರೈಕೆಯಲ್ಲಿ ತೊಡಗಿಸಿಕೊಂಡು ಬಳಿಕ ಶೂಟಿಂಗ್ ಗೆ ಮರಳಲಿದ್ದಾರೆ ಎನ್ನಲಾಗಿದೆ. ಮೇಘನಾರಾಜ್ ನಟನೆಯ ಕೆಲ ಚಿತ್ರಗಳು ಇನ್ನೂ ರಿಲೀಸ್ ಗೆ ಬಾಕಿ ಇದೆ.

Meghanaraj 1

ಪ್ರಜ್ವಲ್ ಹಾಗೂ ಧ್ರುವ್ ಸರ್ಜಾ ಸಿನಿಮಾ ರಿಲೀಸ್ ಗೆ ಸಪೋರ್ಟ್ ಮಾಡ್ತಿರೋ ಮೇಘನಾ ಚಿತ್ರದ ಟ್ರೇಲರ್, ಟೀಸರ್,ಪೋಸ್ಟರ್ ಗಳನ್ನು ಶೇರ್ ಮಾಡಿಕೊಂಡು ಶುಭಹಾರೈಸಿದ್ದಾರೆ.

RELATED ARTICLES

Most Popular