ಸೋಮವಾರ, ಜೂನ್ 16, 2025
HomeBreakingಸರ್ಜಾ ಕುಟುಂಬದ ಸಿಕ್ಸ್ ಪ್ಯಾಕ್ ಹಿರೋಗಳು…! ಮೇಘನಾ ರಾಜ್ ಶೇರ್ ಮಾಡಿದ್ರು ಸ್ಪೆಶಲ್ ಪೋಟೋ…!!

ಸರ್ಜಾ ಕುಟುಂಬದ ಸಿಕ್ಸ್ ಪ್ಯಾಕ್ ಹಿರೋಗಳು…! ಮೇಘನಾ ರಾಜ್ ಶೇರ್ ಮಾಡಿದ್ರು ಸ್ಪೆಶಲ್ ಪೋಟೋ…!!

- Advertisement -

ಸದಾ ಕಾಲ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಅಗಲಿದ ಪತಿಯ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳೋ ಮೇಘನಾ ರಾಜ್ ಒಂದೇ ಒಂದು ಪೋಟೋವನ್ನು ಬಿಡದೇ ಸ್ಪೆಶಲ್ ಕ್ಯಾಪ್ಸನ್ ಜೊತೆ ಅಭಿಮಾನಿಗಳ ಜೊತೆ ಶೇರ್ ಮಾಡ್ತಾರೆ. ನಿನ್ನೆ ಅಂತಹುದೇ ಸ್ಪೆಶಲ್ ಪೋಟೋ ಸರ್ಜಾ ಕುಟುಂಬದ ಸಿಕ್ಸ್ ಪ್ಯಾಕ್ ಹೀರೋಸ್ ಪೋಟೋ ರಿವೀಲ್ ಮಾಡಿದ್ದಾರೆ.

M1

ಅಭಿಮಾನಿಯೊಬ್ಬರು ಕೋಲಾಜ್ ಮಾಡಿದ ಅರ್ಜುನ್ ಸರ್ಜಾ, ದಿ.ಚಿರು ಸರ್ಜಾ ಹಾಗೂ ಧ್ರುವ್ ಸರ್ಜಾ ಸಿಕ್ಸ್ ಪ್ಯಾಕ್ ಪೋಟೋವನ್ನು ಮೇಘನಾ ರಾಜ್ ತಮ್ಮ ಇನ್ ಸ್ಟಾ ಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಅರ್ಜುನ್ ಸರ್ಜಾ ಫಿಟನೆಸ್ ಹಾಗೂ ವರ್ಕೌಟ್ ಗೆ ತುಂಬ ಮಹತ್ವ ನೀಡುತ್ತಾರೆ. ಅವರೇ ಚಿರು ಹಾಗೂ ಧ್ರುವ್ ಸರ್ಜಾ ವರ್ಕೌಟ್ ಪಾಠ ಮಾಡಿದ್ದರು.

M2

ಮಾವನ ಮಾರ್ಗದರ್ಶನದಲ್ಲಿ ವರ್ಕೌಟ್ ಗೆ ಮನಸ್ಸು ಮಾಡಿದ ಧ್ರುವ್ ಸರ್ಜಾ ಹಾಗೂ ಚಿರು ಸಖತ್ ಫಿಟನೆಸ್ ಮೆಂಟೆನ್ ಮಾಡಿದ್ದಲ್ಲದೇ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದರು. ಸರ್ಜಾ ಕುಟುಂಬದ ಈ ಮೂವರು ಬಾಡಿ ಬಿಲ್ಡರ್ ಗಳ ಪೋಟೋವನ್ನು ಅಭಿಮಾನಿಯ ವಾಲ್ ನಿಂದ ಮೇಘನಾ ರಾಜ್ ಶೇರ್ ಮಾಡಿದ್ದಾರೆ.

Meghanaraj New

ಮೇಘನಾ ರಾಜ್ ಚಿರುಗೆ ಸಂಬಂಧಿಸಿದ ಎಲ್ಲ ಹಳೆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಅನುಪ್ರಭಾಕರ ಶೇರ್ ಮಾಡಿದ್ದ ಚಿರು ಚೈಲ್ಡ್ ವುಡ್ ಪೋಟೋವನ್ನು ಮೇಘನಾ ಶೇರ್ ಮಾಡಿದ್ದರು.

Meghanaraj

ಸಧ್ಯ ಜ್ಯೂನಿಯರ್ ಚಿರು ನಾಮಕರಣಕ್ಕೆ ದಿನಗಣನೆ ನಡೆದಿದ್ದು, 4 ತಿಂಗಳ ಮಗನ ಜೊತೆ ಮೇಘನಾ ರಾಜ್ ತಾಯ್ತನದ ಸಂಭ್ರಮದಲ್ಲಿದ್ದು, ಮಗನ ಪೋಟೋಗಳನ್ನು ಆಕರ್ಷಕ ಕ್ಯಾಪ್ಸನ್ ಗಳ ಜೊತೆ ಆಗಾಗ ಅಭಿಮಾನಿಗಳ ಜೊತೆ ಮೇಘನಾ ರಾಜ್ ಹಂಚಿಕೊಳ್ಳುತ್ತಿರುತ್ತಾರೆ.

RELATED ARTICLES

Most Popular