ಬುಧವಾರ, ಏಪ್ರಿಲ್ 30, 2025
HomeBreakingನೆಕ್ಸ್ಟ್ ಜೇಮ್ಸ್ ಅವತಾರ ಎತ್ತಲಿದ್ದಾರೆ ಯುವರತ್ನ…! ಹುಟ್ಟುಹಬ್ಬಕ್ಕೆ ಹೊರಬಿತ್ತು ಪೋಸ್ಟರ್…!!

ನೆಕ್ಸ್ಟ್ ಜೇಮ್ಸ್ ಅವತಾರ ಎತ್ತಲಿದ್ದಾರೆ ಯುವರತ್ನ…! ಹುಟ್ಟುಹಬ್ಬಕ್ಕೆ ಹೊರಬಿತ್ತು ಪೋಸ್ಟರ್…!!

- Advertisement -

ಯುವರತ್ನನ ಬಳಿಕ ಅಪ್ಪು ಯಾವ ಅವತಾರ ತಾಳ್ತಾರೆ ಅನ್ನೋ ಪ್ರಶ್ನೆಗೆ ಸಖತ್ ಉತ್ತರ ಸಿಕ್ಕಿದೆ. ಅದೇ ಜೇಮ್ಸ್. ಹೌದು 46 ವಸಂತಕ್ಕೆ ಕಾಲಿಟ್ಟಿರೋ ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಮುಂದಿನ ಸಿನಿಮಾ ಪೋಸ್ಟರ್ ಸಮೇತ ಅನೌನ್ಸ್ ಆಗಿದ್ದು  ಪವರ್ ಸ್ಟಾರ್ ಜೇಮ್ಸ್  ಚಿತ್ರೀಕರಣಕ್ಕೆ ಸಿದ್ಧವಾಗ್ತಿದ್ದಾರೆ.

ಬಹಾದ್ದೂರ್ ಚೇತನ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಈ ಸಿನಿಮಾದಲ್ಲಿ ಪವರ್ ಸ್ಟಾರ್ ಇದುವರೆಗಿನ ಎಲ್ಲ ಪಾತ್ರಗಳಿಗಿಂತ ಭಿನ್ನವಾಗಿ ಸೈಲೆಂಟ್ ಹಾಗೂ ವೈಲೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ರಿಲೀಸ್ ಆಗಿರೋ ಪೋಸ್ಟರ್ ಕೂಡ ಇದಕ್ಕೆ ಸಾಕ್ಷಿಯಾಗಿದೆ.

 ಪವರ್ ಸ್ಟಾರ್ ಪುನೀತ್ ಜೇಮ್ಸ್ ಪೋಸ್ಟರ್ ಜೊತೆ,  ಪುನೀತ್ ಒಂಥರಾ ಗನ್ ಇದ್ದ ಹಾಗೇ, ಟ್ರಿಗ್ಗರ್ ಅಷ್ಟೇ ಸೈಲೈಂಟ್, ಫೈರ್ ಅಷ್ಟೇ ವೈಲೆಂಟ್ ಅನ್ನೋ ಡೈಲಾಗ್ ಕೂಡ ನೀಡಲಾಗಿದೆ.

ಕಿಶೋರ್ ಪತ್ತಿಕೊಂಡ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ಪುನೀತ್ ಸಖತ್ ಸಾಹಸ ದೃಶ್ಯಗಳಲ್ಲೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Most Popular