ಬುಧವಾರ, ಜೂನ್ 18, 2025
HomeBreakingಕೊಲೆ ಬೆದರಿಕೆ ಹಿನ್ನೆಲೆ…! ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಹೆಚ್ಚಿನ ಭದ್ರತೆ, ಗನ್ ಮ್ಯಾನ್ ನಿಯೋಜನೆ…!!

ಕೊಲೆ ಬೆದರಿಕೆ ಹಿನ್ನೆಲೆ…! ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಹೆಚ್ಚಿನ ಭದ್ರತೆ, ಗನ್ ಮ್ಯಾನ್ ನಿಯೋಜನೆ…!!

- Advertisement -

ಅನಾಮಧೇಯ ಬೆದರಿಕೆ‌ಪತ್ರವೊಂದರ‌ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಿರಿಯ ನಟ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಭದ್ರತೆ ಹೆಚ್ಚಿಸಿದ್ದು ಗನ್‌ಮ್ಯಾನ್ ನೀಡಿದೆ.

C1 9

ನಿನ್ನೆ ನಗರದಲ್ಲಿ ನಡೆದ‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಸಚಿವೆ ಹಾಗೂ ಸಾಹಿತಿ ಬಿ.ಟಿ.ಲಲಿತಾ ನಾಯಕ್, ನನ್ನನ್ನು,ನಟ ಶಿವರಾಜ್ ಕುಮಾರ್ ಹಾಗೂ ಬಿಜೆಪಿ ನಾಯಕ ಸಿ.ಟಿ.ರವಿಯವರನ್ನು ಕೊಲ್ಲುವುದಾಗಿ‌ ಬೆದರಿಕೆ‌ ಪತ್ರಬಂದಿದೆ ಎಂದಿದ್ದರು.

C2 9

ಈ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶಿವಣ್ಣನಿಗೆ ಭದ್ರತೆ‌ ಒದಗಿಸಿದೆ.

C5 1

ಬೆದರಿಕೆ ಪತ್ರ ಬಂದಿದೆ. ಅದರಲ್ಲಿ ನನ್ನೊಂದಿಗೆ ಇತರರ ಹೆಸರು ಇದೆ. ಆದರೆ ನಾನು ಇದಕ್ಕೆಲ್ಲ ಹೆದರುವುದಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಲಲಿತಾ ನಾಯಕ್ ಹೇಳಿದ್ದರು.

C3 4

ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಶಿವಣ್ಣ ನಿವಾಸಕ್ಕೆ ಎರಡು ಪಾಳಿಯಲ್ಲಿ ನಾಲ್ವರನ್ನು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು ಜೊತೆಗೆ ಗನ್ ಮ್ಯಾನ್‌ ಕೂಡ ನೀಡಿದೆ.ಈ‌ ಮಧ್ಯೆ ತಮ್ಮನ್ನು ಕೊಲ್ಲುವ‌ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್ ಈ ವಿಚಾರಕ್ಕೆ ಹೆಚ್ಚಿನ‌ ಮಹತ್ವ ನೀಡುವುದು ಬೇಡ ಎಂದಿದ್ದಾರೆ.

RELATED ARTICLES

Most Popular