ಐಸ್ ನಲ್ಲಿ ಮೂಡಿಬಂದ್ರು ಗಾಂಧಿತಾತಾ…! ಕೆನಡಾ ಹೊಟೇಲ್ ನಿಂದ ರಾಷ್ಟ್ರಪಿತನಿಗೆ ವಿಭಿನ್ನ ಗೌರವ…!!

ಭಾರತದ ರಾಷ್ಟ್ರಪಿತ ಮಹಾತ್ಮಾಗಾಂಧಿ ತಮ್ಮ ವಿಚಾರಧಾರೆಗಳಿಂದ ವಿಶ್ವದೆಲ್ಲೆಡೆ ಪ್ರಸಿದ್ಧರು. ಕೆನಡಾದಲ್ಲೂ ರಾಷ್ಟ್ರಪಿತ ಗಾಂಧೀಜಿಗೆ ಸಲ್ಲಿಕೆಯಾಗಿರುವ ಗೌರವ ಇದಕ್ಕೆ ಸಾಕ್ಷಿ.ಕೆನಡಾದ ಹೊಟೇಲ್ ವೊಂದು ಐಸ್ ನಲ್ಲಿ ಗಾಂಧೀಜಿ ಪ್ರತಿಮೆ ರಚಿಸಿ ಗೌರವ ಸಲ್ಲಿಸಿದ್ದು, ಪೋಟೋ ಎಲ್ಲೆಡೆ ವೈರಲ್ ಆಗಿದೆ.

ಕೆನಡಾದ ಹೊಟೇಲ್ ಡಿ ಗ್ಲೇಸ್ ಇಂತಹದೊಂದು ವಿಭಿನ್ನ ಪ್ರಯತ್ನದ ಮೂಲಕ ಭಾರತೀಯರ ಮನಸೆಳೆದಿದೆ. ಕೆನಡಾದ ಕ್ವೆಬೆಕ್ ಸಿಟಿಯಲ್ಲಿರೋ ಹೊಟೇಲ್ ನ ಮುಂಭಾಗದಲ್ಲಿ 7 ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ಐಸ್ ನಿಂದ ನಿರ್ಮಿಸಲಾಗಿದೆ. ಪ್ರತಿಮೆಯ ಕೆಳಭಾಗದಲ್ಲಿ ಭಾರತದ 75 ಸ್ವಾತಂತ್ರೋತ್ಸವದ ವಿವರಣೆ ನೀಡಲಾಗಿದೆ.

ಕೆನಡಾದ ಪ್ರಸಿದ್ಧ ಐಸ್ ಕಲಾಕೃತಿ ತಯಾರಕ ಮಾರ್ಕ್ ಲೆಪೈರೆ ಈ ಪ್ರತಿಮೆಯನ್ನು  5 ಗಂಟೆಗಳಲ್ಲಿ  ಕೇವಲ 9 ತುಂಡು ಐಸ್ ಬಳಸಿ ಸಿದ್ಧಪಡಿಸಿದ್ದು, ಟೊರಂಟೋದ ಭಾರತೀಯ ರಾಯಭಾರ ಕಚೇರಿ ಈ ಪೋಟೋದ ಜೊತೆ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ.

ಮಾರ್ಕ್ ಲೆಪೈರೆ ಗಾಂಧೀಜಿ ಪ್ರತಿಮೆ ನಿರ್ಮಿಸಿದ ಬಳಿಕ ಇದೊಂದು ರೋಮಾಂಚನಕಾರಿಯಾದ ಅನುಭವ ಎಂದಿದ್ದಾರೆ. ಈ ಪೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಹೆಮ್ಮೆಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ.

Comments are closed.