ಸ್ಯಾಂಡಲ್ ವುಡ್ ನಲ್ಲಿ ಇನ್ನಷ್ಟು ವಿಭಿನ್ನ ಚಿತ್ರಗಳನ್ನು ನಿರ್ಮಿಸಿ,ನಟಿಸಬೇಕೆನ್ನುವ ಕನಸಿನಲ್ಲಿದ್ದ ಯುವಸಾಮ್ರಾಟ್ ಚಿರಂಜೀವಿ ಅಕಾಲಿಕವಾಗಿ ಅಗಲಿದ್ದರೂ ಅವರ ಕನಸುಗಳ ರೂಪದಲ್ಲಿ ಜ್ಯೂನಿಯರ್ ಚಿರು ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ.

ಚಿರಂಜೀವಿ ಸರ್ಜಾ ಕೊನೆಯ ಚಿತ್ರ ರಣಂ ಫ್ರೀ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ಹಿರಿಯ ನಟ ಹಾಗೂ ಚಿರು ಮಾವ ಸುಂದರ್ ರಾಜ್ ಜ್ಯೂನಿಯರ್ ಚಿರು ಸಿನಿಮಾಗೆ ಬಂದೇ ಬರ್ತಾನೆ. ಅಷ್ಟೇ ಅಲ್ಲ ತಂದೆಯ ಕನಸುಗಳನ್ನು ಈಡೇರಿಸುತ್ತಾನೆ ಎಂದಿದ್ದಾರೆ.

ರಣಂ ಚಿರು ಕೊನೆಯ ಚಿತ್ರವಲ್ಲ. ಇಲ್ಲಿಂದ ಅಸಲಿ ಆಟ ಶುರು. ಚಿರು ಯಾವಾಗಲೂ ಹೇಳ್ತಿದ್ದ ನನಗೆ ಸಾವಿಲ್ಲ,ಸೋಲಿಲ್ಲ. ನಾನು ಫಿನಿಕ್ಸ್ ತರ ಮತ್ತೆ ಎಲ್ಲವನ್ನು ಗೆದ್ದು ಬರ್ತಿನಿ ಅಂತ. ಆದರೆ ಅವನು ಆ ಮಾತನ್ನು ಯಾಕೆಹೇಳ್ತಿದ್ದ ಅಂತ ಗೊತ್ತಿಲ್ಲ. ಈಗ ಅನ್ನಸುತ್ತೆ ಅವನ ಚಿತ್ರಗಳ ಮೂಲಕ ನಮ್ಮ ಜೊತೆನೇ ಇದ್ದಾನೆ ಎಂದು ಸುಂದರರಾಜ್ ಭಾವುಕರಾಗಿ ನುಡಿದಿದ್ದಾರೆ.

ಚಿರಂಜೀವಿ ಬದುಕಿದ್ದಷ್ಟು ದಿವಸ ನಗುನಗುತ್ತ ಖುಷಿಯಾಗಿ ಪ್ರಾಮಾಣಿಕವಾಗಿ ಬದುಕಿದ್ದ. ಸಂತೋಷ ವನ್ನೇ ಹಂಚುತ್ತಿದ್ದ. ಕೇವಲ ಮೂರೇ ನಿಮಿಷದಲ್ಲಿ ಪ್ರಾಣ ಹೋಯ್ತು. ಅವತ್ತು ನಾವು ಮೂರು ನಿಮಿಷದಲ್ಲಿ ಆಸ್ಪತ್ರೆಯಲ್ಲಿದ್ವಿ.ಆದರೆ ಆಸ್ಪತ್ರೆ ಬಾಗಿಲಲ್ಲೇ ಅವನ ಪ್ರಾಣ ಹಾರಿಹೋಗಿತ್ತು ಎಂದು ಸುಂದರ್ ರಾಜ್ ಕಣ್ಣೀರಿಟ್ಟರು.

ಸದ್ಯ ಜ್ಯೂನಿಯರ್ ಚಿರು ಐದು ತಿಂಗಳು ಪೂರ್ತಿಗೊಳಿಸಿದ್ದು ತನ್ನ ತುಂಟಾಟಗಳ ಮೂಲಕ ಅಜ್ಜಿ,ತಾತ,ಅಮ್ಮನನ್ನು ದುಃಖದಿಂದ ಹೊರತರುವ ಪ್ರಯತ್ನ ಮಾಡ್ತಿದ್ದಾನೆ.

ಚಿರು ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬ ಜ್ಯೂನಿಯರ್ ಚಿರುವನ್ನು ಚಿತ್ರರಂಗಕ್ಕೆ ತರಲೇ ಬೇಕೆಂದು ನಿರ್ಧರಿಸಿದ್ದು ಜ್ಯೂನಿಯರ್ ಚಿರು ಜನಿಸಿದಾಗಲೇ ಅರ್ಜುನ್ ಸರ್ಜಾ, ೨೦ ವರ್ಷದ ಬಳಿಕ ಇವನನ್ನು ನಾನೇ ಲಾಂಚ್‌ಮಾಡ್ತಿನಿ ಎಂದಿದ್ದರು.
ಚಿರು ಅಭಿನಯದ ಕೊನೆಯ ಚಿತ್ರ ರಣಂ ಇದೇಮಾರ್ಚ್ ೨೬ ರಂದು ಚಿತ್ರಮಂದಿರಗಳಲ್ಲಿತೆರೆ ಕಾಣಲಿದೆ.