ವಿಪರೀತ ಮದ್ಯಪಾನ ಮಾಡಿಸಿ ನಿದ್ರೆಯಲ್ಲಿದ್ದ ತಂದೆಗೆ  ಬೆಂಕಿ ಹಚ್ಚಿದ ಮಗಳು….!!!

ಕೋಲ್ಕೊತ್ತಾ : ಕಂಠಪೂರ್ತಿ ಮದ್ಯಪಾನ ಮಾಡಿಸಿ, ಮದ್ಯದ ಅಮಲಿನಲ್ಲಿ ನಿದ್ರಿಸುತ್ತಿದ್ದ ತಂದೆಯ ಮೈಮೇಲೆ ಸೀಮೆ ಎಣ್ಣೆ ಸುರಿದು ಮಗಳು ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.

ಪಾನಪ್ರಿಯನಾಗಿದ್ದ ತಂದೆಯನ್ನು ಸ್ನೇಹಿತರ ಪಾರ್ಟಿಯಿದೆ ಎಂದು ಸುಳ್ಳು ಹೇಳಿ ಹೊರಗೆ ಕರೆದೊಯ್ದಿದ್ದ ಆರೋಪಿ ಮಗಳು ರೆಸ್ಟಾರೆಂಟ್ ಒಂದರಲ್ಲಿ ಊಟ ಕೊಡಿಸಿ, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅಲ್ಲಿ ಕಂಠಪೂರ್ತಿ ಮದ್ಯ ಕುಡಿಸಿ ತಂದೆ ನಿದ್ರಾವಸ್ಥೆಯಲ್ಲಿದ್ದಾಗ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.

ಘಟನೆಯಲ್ಲಿ 56 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ‌. 22 ವರ್ಷದ ವಿಚ್ಛೇದಿತ ಮಗಳು ಅಮಾನುಷ ಕೃತ್ಯವನ್ನೆಸಗಿದ್ದಾಳೆ. ತನ್ನ ತಂದೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ, ಇದೇ ಕಾರಣಕ್ಕೆ ತಂದೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Comments are closed.