ಮಂಗಳೂರು : 14 ವರ್ಷದ ಶಾಲಾ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ನಿವಾಸಿ ಮುಹಮ್ಮದ್ ಮುನೀರ್, ಕೈಂಕಬ ನಿವಾಸಿ ತಸ್ವಿನ್ ಮತ್ತು ಸಾದಿಕ್ ಎಂಬವರೇ ಬಂಧಿತ ಆರೋಪಿಗಳು. ದಕ್ಷಿಣಕನ್ನಡ ಜಿಲ್ಲೆಯ ನಗರದ ಹೊರವಲಯದ ಗುರುಪುರದಲ್ಲಿ ಗುರುಪುರ ಮತ್ತು ಕೈಕಂಬ ಪರಿಸರದಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಟಾರ್ಗೆಟ್ ಮಾಡಿ ಅವರಿಗೆ ತಿಂಡಿ-ತಿನಸು ನೀಡಿ ನಂತರ ಲೈಂಗಿಕ ಕ್ರಿಯೆಗೆ ದೌರ್ಜನ್ಯವೆಸಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಗುರುಪುರದಲ್ಲಿ 14 ವರ್ಷದ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.