ಮಂಗಳವಾರ, ಜೂನ್ 17, 2025
HomeBreakingನಟಿ ಸಂಜನಾ ಗಲ್ರಾನಿ ತಂಗಿಗೆ ವಂಚನೆ…! ಪೊಲೀಸ್ ಠಾಣೆ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ…!!

ನಟಿ ಸಂಜನಾ ಗಲ್ರಾನಿ ತಂಗಿಗೆ ವಂಚನೆ…! ಪೊಲೀಸ್ ಠಾಣೆ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ…!!

- Advertisement -

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಸಹೋದರಿ ನಟಿ ನಿಕ್ಕಿ ಗಲ್ರಾನಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ವಂಚನೆಯಾಗಿದೆ ಎನ್ನಲಾಗಿದೆ.

A6 5

ಈ ಸಂಬಂಧ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

A2 18

ನಟಿ ನಿಕ್ಕಿ ಗಲ್ರಾನಿ 2016 ರಲ್ಲಿ ಸ್ನೇಹಿತ ಹಲಸೂರಿನ ನಿಖಿಲ್ ಹೆಗ್ಡೆ ರೆಸ್ಟೊರೆಂಟ್ ವೊಂದನ್ನು ನಡೆಸಲು 50 ಲಕ್ಷ ರೂಪಾಯಿ ನೀಡಿದ್ದರು ಎನ್ನಲಾಗಿದೆ.

A1 19

ಪ್ರತಿ ತಿಂಗಳು 1 ಲಕ್ಷ ರೂಪಾಯಿ ನೀಡುವ ಭರವಸೆಯೊಂದಿಗೆ ಹಣ ನೀಡಲಾಗಿತ್ತು. ಆದರೆ ನಿಖಿಲ್ ಹಣ ನೀಡದೆ ವಂಚಿಸಿದ್ದಾನೆ ಎಂದು ನಿಕ್ಕಿ ಆರೋಪಿಸಿದ್ದಾನೆ.

A3 14

50 ಲಕ್ಷ ರೂಪಾಯಿಯನ್ನು ಹಿಂತಿರುಗಿಸಿಲ್ಲ. ತಿಂಗಳಿಗೆ ನೀಡುತ್ತೇನೆ ಎಂದಿದ್ದ 1 ಲಕ್ಷ ರೂಪಾಯಿ ಹಣವನ್ನು ನೀಡಿಲ್ಲ. ಹಣ ಹಿಂತಿರುಗಿಸುವಂತೆ ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿ ನಿಕ್ಕಿ ಆರೋಪಿಸಿದ್ದಾರೆ.

A5 5

ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ನಿಖಿಲ್ ಹೆಗ್ಡೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.

RELATED ARTICLES

Most Popular