ಆಂಧ್ರಪ್ರದೇಶ : ಮನೆಯಲ್ಲಿ ನಡೆದ ಅಗ್ನಿ ಅವಘಡದಿಂದಾಗಿ ಒಂದೇ ಕುಟುಂಬದ ನಾಲ್ಚರು ಸಜೀವವಾಗಿ ದಹನವಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ವಿಶಾಖಪಟ್ಟಣಂನ ಮಿಥಿಲಾಪುರಿ ಉಡಾ ನಗರದ ನಿವಾಸಿಯಾಗಿ ರುವ ಬಂಗಾರು ನಾಯ್ಡು (50 ವರ್ಷ), ಪತ್ನಿ ಡಾ.ನಿರ್ಮಲಾ (45 ವರ್ಷ) ಮಕ್ಕಳಾದ ದೀಪಕ್ (22 ವರ್ಷ), ಕಶ್ಯಪ್ (19 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ.
ವಿದೇಶದಲ್ಲಿ ನೆಲೆಸಿದ್ದ ಕುಟುಂಬ ಕಳೆದ 8 ತಿಂಗಳಿನಿಂದಲೂ ವಿಶಾಖಪಟ್ಟಣಂನ ಆದಿತ್ಯ ಟವರ್ಸ್ ನಲ್ಲಿ ವಾಸಿಸುತ್ತಿತ್ತು. ಆದರೆ ಮನೆಯಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿದೆ ಅನ್ನೋದು ಇನ್ನೂ ಖಚಿತವಾಗಿಲ್ಲ.