ಸೋಮವಾರ, ಏಪ್ರಿಲ್ 28, 2025
HomeBreakingಕಿರುತೆರೆಗೂ ಲಗ್ಗೆ ಇಟ್ಟ ಸೋಂಕು…! ಗಿಣಿರಾಮನ ನಾಯಕಿಗೆ ಕೊರೋನಾ ಸೋಂಕು…!!

ಕಿರುತೆರೆಗೂ ಲಗ್ಗೆ ಇಟ್ಟ ಸೋಂಕು…! ಗಿಣಿರಾಮನ ನಾಯಕಿಗೆ ಕೊರೋನಾ ಸೋಂಕು…!!

- Advertisement -

ಕೊರೋನಾ ಎರಡನೇ ಅಲೆ ಸ್ಯಾಂಡಲ್ ವುಡ್ ಬಳಿಕ‌ ಇದೀಗ ಕನ್ನಡ ಕಿರುತೆರೆ ಲೋಕಕ್ಕೆ ಲಗ್ಗೆ ಇಟ್ಟಿದ್ದು ಗಿಣಿರಾಮ ಧಾರಾವಾಹಿ ನಟಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಗಿಣಿರಾಮ ಧಾರಾವಾಹಿ ನಟಿ ನಾಯಕಿ ಮಹತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ನಯನಾ ನಾಗರಾಜ್ ಗೆ ಕೊರೋನಾ ಸೋಂಕು ತಗುಲಿದೆ.

ಸಾಮಾಜಿಕ ಜಾಲತಾಣದಲ್ಲಿ ನಟಿ ನಯನಾ ನಾಗರಾಜ್ ಈ ಸಂಗತಿಯನ್ನು ಖಚಿತಪಡಿಸಿದ್ದಾರೆ. ಆದರೆ ತನಗೆ ಸೋಂಕು ಹೇಗೆ ತಗುಲಿತು ಎಂಬುದೇ ಅರ್ಥವಾಗುತ್ತಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿಬರುತ್ತಿರುವ‌ ಗಿಣಿರಾಮ ಧಾರಾವಾಹಿಯಲ್ಲಿ‌ ನಟಿ ನಯನಾ ಲೀಡ್ ರೋಲ್ ನಿಭಾಯಿಸುತ್ತಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಸದ್ಯ ಹೋಂ ಐಷೋಲೇಶನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಯನಾ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬ ವರ್ಗ ತಿಳಿಸಿದೆ.

ಇತ್ತೀಚಿಗಷ್ಟೇ ಸ್ಯಾಂಡಲ್ ವುಡ್ ತಾರಾ ದಂಪತಿ ಡಾರ್ಲಿಂಗ್ ಕೃಷ್ಣ,ಮಿಲನಾ ನಾಗರಾಜ್, ಪ್ರಜ್ವಲ್ ಹಾಗೂ ಅವರ ಪತ್ನಿ, ನಟ ನಿಖಿಲ್ ಕುಮಾರಸ್ವಾಮಿಗೆ ಕೊರೋನಾ ಸೋಂಕು ತಗುಲಿತ್ತು.

RELATED ARTICLES

Most Popular