ತಮಿಳಿಗರ ಎದೆ ಬಡಿತಕ್ಕೆ ಹೆಚ್ಚಿಸೋಕೆ ಬರ್ತಿದ್ದಾರೆ ಮಾದಕತಾರೆ…! ಎರಡೆರಡು ತಮಿಳು ಚಿತ್ರದಲ್ಲಿ ಸನ್ನಿ ಲಿಯೋನ್…!!

ನೀಲಿತಾರೆ ಪಟ್ಟದಿಂದ ನಿಧಾನಕ್ಕೆ ಬಹುಭಾಷಾ ತಾರೆ ಪಟ್ಟಕ್ಕೇರುತ್ತಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ತಮಿಳು ಭಾಷೆ ಕಲಿಯುತ್ತಿದ್ದಾರಂತೆ. ಅದ್ಯಾಕೆ ಈಗ ತಮಿಳು ಕಲಿತಿದ್ದಾರೇ ಅಂದ್ರಾ ಒಟ್ಟೊಟ್ಟಿಗೆ ಎರಡೆರಡು ತಮಿಳು ಸಿನಿಮಾಗೆ ಬಣ್ಣ ಹಚ್ಚಿರೋ ಸನ್ನಿ ಅದಕ್ಕಾಗಿ ತಮಿಳು ಭಾಷೆ ಕಲಿಕೆಯನ್ನು ಆರಂಭಿಸಿದ್ದಾರೆ.

ವಡಿಯುಧಾಯನ್ ನಿರ್ದೇಶನದ ಐತಿಹಾಸಿಕ ಚಿತ್ರ ವೀರಮಾದೇವಿ ಚಿತ್ರದಲ್ಲಿ ನಟಿಸುತ್ತಿರುವ ನಟಿ ಸನ್ನಿ ಲಿಯೋನ್ ತಮ್ಮ  ಈ ಮೊದಲ ಚಿತ್ರ ರಿಲೀಸ್ ಗೂ ಮುನ್ನವೇ ಎರಡನೇ ತಮಿಳು ಸಿನಿಮಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ತಮಿಳು ಭಾಷೆ ಕಲಿತು ತಾವೇ ಡಬ್ ಮಾಡಲು ಚಿಂತನೆ ನಡೆಸಿದ್ದಾರಂತೆ.

ಯುವನ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ತಮಿಳು ಸಿನಿಮಾದ ಲೀಡ್ ರೋಲ್ ಗೆ ಸನ್ನಿ ಲಿಯೋನ್ ಆಯ್ಕೆಯಾಗಿದ್ದು, ಐತಿಹಾಸಿಕ ಕತೆಯುಳ್ಳ ಹಾರರ್ ಸಿನಿಮಾ ಇದೆಂದು ನಿರ್ದೇಶಕ ಯುವನ್ ಮಾಹಿತಿ ನೀಡಿದ್ದಾರೆ.

ಯುವನ್ ಸ್ವತಃ ಮೂರು ವರ್ಷಗಳ ಕಾಲ ಶ್ರಮಿಸಿ ಈ ಕತೆಯನ್ನು ಸಿದ್ಧಪಡಿಸಿದ್ದಾರಂತೆ. ಬಳಿಕ ಅವರಿಗೆ ಚಿತ್ರದ ಪಾತ್ರಕ್ಕೆ ಸನ್ನಿ ಲಿಯೋನ್ ಸರಿಯಾದ ಆಯ್ಕೆ ಎನ್ನಿಸಿ ಸನ್ನಿಯವರನ್ನು ಕೇಳಿದ್ದಾರಂತೆ.

ಸನ್ನಿ ಲಿಯೋನ್ ಕೂಡ ಕತೆ ಕೇಳಿ ಇಂಪ್ರೆಸ್ ಆಗಿದ್ದು, ನಟಿಸಲು ಒಪ್ಪಿಕೊಂಡಿದ್ದಾರಂತೆ. ಜೂನ್ ನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಅಲ್ಲಿಯವರೆಗೆ ಒಂದು ಹಂತಕ್ಕೆ ತಮಿಳು ಭಾಷೆಯನ್ನು ಕಲಿತು ಮುಗಿಸಬೇಕೆಂಬ ಪ್ರಯತ್ನದಲ್ಲಿದ್ದಾರಂತೆ ಸನ್ನಿ ಲಿಯೋನ್.

ಈ ಸಿನಿಮಾ ಭೂತಕಾಲ ಹಾಗೂ ವರ್ತಮಾನದ ಕತೆಯನ್ನು ಬಿಚ್ಚಿಡಲಿದ್ದು, ಫ್ಲ್ಯಾಶ್ ಬ್ಯಾಕ್ ರೂಪದಲ್ಲಿ  ಚಿತ್ರದ ಕತೆಯನ್ನು ಹೇಳೋದು ನಿರ್ದೇಶಕರ ಪ್ಲ್ಯಾನ್. ಈ ಸಿನಿಮಾದಲ್ಲಿ ಸನ್ನಿ ಜೊತೆ ರಮೇಶ್ ತಿಲಕ್,ಮೊಟ್ಟೈರಾಜೇಂದ್ರ್,ತಂಗದೊರೈ ಸೇರಿ ಹಲವರು ನಟಿಸಲಿದ್ದಾರಂತೆ. ಜಾವೇದ್ ರಿಯಾಜ್ ಸಂಗೀತ ನೀಡಲಿದ್ದಾರೆ.

ಈಗಾಗಲೇ ತಮ್ಮ ಮಾದಕ ಸೌಂದರ್ಯ ಹಾಗೂ ನಟನೆ, ನೃತ್ಯದ ಮೂಲಕ ಬಾಲಿವುಡ್,ಸ್ಯಾಂಡಲ್ ವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಛಾಪು ಮೂಡಿಸಿದ ಸನ್ನಿ ಲಿಯೋನ್ ಗೆ ತಮಿಳು ಪ್ರೇಕ್ಷಕರು ಹೇಗೆ ರಿಯಾಕ್ಟ್ ಮಾಡ್ತಾರೆ ಕಾದುನೋಡಬೇಕಿದೆ.

Comments are closed.