ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ಅದ್ರಲ್ಲೂ ಸಿಲಿಕಾನ್ ಸಿಟಿಯಲ್ಲಿ ಸೋಂಕಿತ ಸಂಖ್ಯೆ ಇಳಿಕೆಯಾಗಿದೆ. ಆದರೆ ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 6,00,147ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿಂದು 31,531 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು ಸೋಂಕಿತರ ಸಂಖ್ಯೆ 22,03,462 ಕ್ಕೆ ಏರಿಕೆಯಾಗಿದೆ. ಇದುವರೆಗೆ 15,81,457 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದರೆ ರಾಜ್ಯದಲ್ಲಿ ಒಟ್ಟು 6,00,147 ಸಕ್ರಿಯ ಪ್ರಕರಣಗಳಿವೆ. ಇಂದು 403 ಮಂದಿ ಸಾವನ್ನಪ್ಪಿದ್ದು, ಕೋವಿಡ್ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,837ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ-431, ಬಳ್ಳಾರಿ-1729, ಬೆಳಗಾವಿ- 1762 , ಬೆಂಗಳೂರು ಗ್ರಾಮಾಂತರ-1082, ಬೆಂಗಳೂರು ನಗರ -8344, ಬೀದರ್-129, ಚಾಮರಾಜನಗರ -440, ಚಿಕ್ಕಬಳ್ಳಾಪುರ- 558, ಚಿಕ್ಕಮಗಳೂರು -963, ಚಿತ್ರದುರ್ಗ- 640, ದಕ್ಷಿಣ ಕನ್ನಡ- 957, ದಾವಣಗೆರೆ- 1155, ಧಾರವಾಡ- 937, ಗದಗ- 453, ಹಾಸನ- 1182, ಹಾವೇರಿ- 184, ಕಲಬುರಗಿ -645, ಕೊಡಗು- 191, ಕೋಲಾರ- 569, ಕೊಪ್ಪಳ- 617, ಮಂಡ್ಯ- 709, ಮೈಸೂರು- 1811, ರಾಯಚೂರು- 464, ರಾಮನಗರ- 403, ಶಿವಮೊಗ್ಗ- 643, ತುಮಕೂರು- 2138, ಉಡುಪಿ- 745, ಉತ್ತರ ಕನ್ನಡ- 1087, ವಿಜಯಪುರ- 330 ಹಾಗೂ ಯಾದಗಿರಿಯಲ್ಲಿ 233 ಮಂದಿಗೆ ಸೋಂಕು ದೃಢಪಟ್ಟಿದೆ.
