ಹಿಂದಿಕಿರುತೆರೆಯಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕ ಗಮನಸೆಳೆದಿದ್ದ ನಟಿ ದೀಪಿಕಾಸಿಂಗ್ ಚಂಡಮಾರುತದ ಅಬ್ಬರದ ಮನೆಯಲ್ಲಿ ಹಾಗೂ ಸಂಕಷ್ಟದ ಹೊತ್ತಿನಲ್ಲಿ ಪೋಟೋಶೂಟ್ ನಡೆಸಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೈಕ್ಲೋನ್ ಅಬ್ಬರಕ್ಕೆ ಮುರಿದು ಬಿದ್ದ ಮರದ ಜೊತೆ ದೀಪಿಕಾ ಪೋಟೋಶೂಟ್ ಸಖತ್ ಟ್ರೋಲ್ ಆಗಿದೆ.

ಹಿಂದಿಯ ಜನಪ್ರಿಯ ಸೀರಿಯಲ್ ದಿಯಾ ಓರ್ ಬಾತಿ ಹಮ್ ನಲ್ಲಿ ಮುಗ್ಧ ಸೊಸೆಯಾಗಿ, ದಡ್ಡ ಹಲ್ವಾಯಿಯ ಹೆಂಡತಿಯಾಗಿ ನಟಿಸಿ ಮನಗೆದ್ದಿದ್ದ ದೀಪಿಕಾ ಸಿಂಗ್ ನಿಜಜೀವನದಲ್ಲಿ ಮಾತ್ರ ಟ್ರೋಲಿಗರ್ ಟ್ರೋಲಿಗೆ ಆಹಾರವಾಗಿದ್ದಾರೆ.

ಮೊನ್ನೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದ ಮುಂಬೈನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಭಾರಿ ಮಳೆ ಕೂಡ ಸುರಿದಿದೆ. ಹಲವಾರು ಜನರು ಜೀವ ಕೂಡ ಕಳೆದುಕೊಂಡಿದ್ದಾರೆ.

ಆದರೆ ದೀಪಿಕಾ ಮಾತ್ರ ಈ ಚಂಡಮಾರುತದ ಎಫೆಕ್ಟ್ ನಿಂದ ಮುರಿದು ಮರದ ಬಳಿ ಪೋಟೋಶೂಟ್ ನಡೆಸಿ ಇನ್ ಸ್ಟಾಗ್ರಾಂನಲ್ಲಿ ಪೋಟೋ ಹಂಚಿಕೊಂಡಿದ್ದಾರೆ.
https://www.instagram.com/p/CPARk2uhj9O/?utm_medium=copy_link
ದೀಪಿಕಾ ಅವರ ಮುಂಬೈ ನಿವಾಸದ ಎದುರು ಭಾರಿ ಮರವೊಂದು ಮುರಿದು ಬಿದ್ದಿತ್ತು. ಅದೃಷ್ಟವಶಾತ ಯಾರಿಗೂ ಹಾನಿಯಾಗಿಲ್ಲ.

ಈ ಮರವನ್ನು ತೆರವುಗೊಳಿಸುವ ಮುನ್ನ ಮರದ ಬಳಿ ಕಲರ್ ಫುಲ್ ಡ್ರೆಸ್ ನಲ್ಲಿ ಪೋಸು ನೀಡಿದ ದೀಪಿಕಾಗೆ ಪತಿಯೇ ಪೋಟೋಗ್ರಾಫರ್ ಆಗಿದ್ದರಂತೆ.

ಅಷ್ಟೇ ಅಲ್ಲ ಮರದ ಜೊತೆ ಪೋಟೋ ತೆಗೆಸಿಕೊಂಡ ಬಳಿಕ ದೀಪಿಕಾ ಮಳೆಯಲ್ಲಿ ಡ್ಯಾನ್ಸ್ ಮಾಡಿ ಆ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

ತೌಕ್ತೆ ಚಂಡಮಾರುತದ ನೆನಪಿಗೆ ಈ ಪೋಟೋಶೂಟ್ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

ದೀಪಿಕಾ ಈ ಪೋಟೋಶೂಟ್ ಹಾಗೂ ಪೋಸ್ಟ್ ನೆಟ್ಟಿಗರ ಟೀಕೆಗೆ ಗುರಿಯಾಗಿದೆ.

ಸಾವಿರಾರು ಜನರು ಈ ಚಂಡಮಾರುತದಿಂದ ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಜೀವಹಾನಿಯಾಗಿದೆ. ಆದರೆ ನಿಮಗೆ ಇದು ಸಂತೋಷ ತರುವ ಸಂಗತಿಯೇ. ಮರ್ಯಾದೆ ಎನ್ನಿಸುವುದಿಲ್ಲವೇ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
