ಬ್ರಹ್ಮಾವರ : ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ ಕ್ರಾಸ್ ಲ್ಯಾಂಡ್ ಕಲರವ -2020 ನಡೆಯಿತು. ಕಾರ್ಯಕ್ರಮವನ್ನು ಉಡುಪಿಯ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಉಮೇಶ್ ನಾಯ್ಕ ಚೇರ್ಕಾಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಾಲೇಜು ಜೀವನದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸುವುದು ಅತೀ ಅಗತ್ಯ. ಜೀವನದಲ್ಲಿ ಅಂಕಗಳಿಸುವುದು ಸಾಧನೆಯಲ್ಲ, ಅಂಕದೊಂದಿಗೆ ಗುಣ ನಡೆತೆಯೂ ಮುಖ್ಯವಾಗಿದೆ. ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ದೂರವಿದ್ದಲ್ಲಿ ಅವರು ಮುಂದಿನ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸ್ಯಾಮುಯೆಲ್ ಕೆ.ಸ್ಯಾಮುಯೆಲ್ ಅಧ್ಯಕ್ಷತೆವಹಿಸಿದ್ದರು. ಅಂತಿಮ ಬಿ.ಎ. ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಇತರೆ ವಿದ್ಯಾರ್ಥಿಗಳಿಗೆ ಕ್ರಾಸ್ ಲ್ಯಾಂಡ್ ಕಲರವ 2020 ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನಿವೃತ್ತರಾಗಲಿರುವ ಪ್ರಾಧ್ಯಾಪಕರಾದ ಪ್ರೊ.ಎಲಿಜೆಬೆತ್ ರಾಯ್ ಮತ್ತು ಪ್ರೊ.ಕೆ.ಕೆ. ಗುರುಮೂರ್ತಿ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಕಾರ್ಯಕ್ರಮದ ಸಂಚಾಲಕಿ ಪ್ರೊ.ರಿಬೂ ಸ್ಯಾಮುಯೆಲ್ ಉಪಸ್ಥಿತಿತರಿದ್ದರು. ವಿದ್ಯಾರ್ಥಿನಿ ಸ್ವಾತಿ ಸ್ವಾಗತಿಸಿ, ಆದಿತ್ಯ ಕೆದ್ಲಾಯ ವಂದಿಸಿದರು. ವಫಾ ಕಾರ್ಯಕ್ರಮವನ್ನು ನಿರೂಪಿಸಿದರು. ಇನ್ನು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಕನ್ನಡ ಉಪನ್ಯಾಸಕ ರಮಾನಂದ ರಾವ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳು ತಂಡ ಪ್ರಶಸ್ತಿ ಗಳಿಸಿದರೆ, ದ್ವಿತೀಯ ಬಿಕಾಂ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಪ್ರಶಸ್ತಿ ಪಡೆದರು. ವಿದ್ಯಾರ್ಥಿಗಳಾದ ಅಕ್ಸಾ, ಅನಿಲ್, ಸಲ್ವಾ, ಅರ್ಚನಾ ಸಹಕರಿಸಿದರು.
ಬ್ರಹ್ಮಾವರದಲ್ಲಿ ‘ಕ್ರಾಸ್ ಲ್ಯಾಂಡ್ ಕಲರವ -2020’
- Advertisement -