ಬ್ರಿಜಿಲ್ : ಮಗು ಜನಿಸಿದಾಗ ಅಳುವುದು ಸಾಮಾನ್ಯ. ಮಗು ಅಳದೇ ಇದ್ರೆ ವೈದ್ಯರು ಮಗು ಅಳುವಂತೆ ಮಾಡ್ತಾರೆ. ಆದ್ರೆ ಇಲ್ಲೊಂದು ಮಗು ತಾಯಿಯ ಗರ್ಭದಿಂದ ಹೊರಬರುವಾಗ ಅಳುವ ಬದಲು ವೈದ್ಯರನ್ನೇ ಗುರಾಯಿಸಿಸೋ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಬ್ರಿಜಿಲ್ ನಲ್ಲಿ ಜನಿಸಿರೋ ಮಗುವಿನ ವಿಡಿಯೋ ಇಡೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈದ್ಯರು ಮಗುವನ್ನು ತಾಯಿ ಗರ್ಭದಿಂದ ಹೊರ ಬರುವಾಗ ಮಗು ವೈದ್ಯರನ್ನು ಸಿಟ್ಟಿನಿಂದಲೇ ನೋಡುತ್ತಿತ್ತು. ಕರುಳ ಬಳ್ಳಿ ಕತ್ತರಿಸೋ ವರೆಗೂ ಮಗು ಹುಬ್ಬನ್ನು ಗಂಟಿಕ್ಕಿಕೊಂಡಿತ್ತು. ಕರುಳ ಬಳ್ಳಿ ಕತ್ತರಿಸಿದ ನಂತರ ಮಗು ಅಳುವುದಕ್ಕೆ ಪ್ರಾರಂಭಿಸಿದೆ.

ಇಸಾಬೆಲ್ ಪಿರೇರಾ ಅನ್ನೋ ಮಗುವಿನ ಲುಕ್ ಅಚ್ಚರಿಗೆ ಕಾರಣವಾಗಿದೆ. ಛಾಯಾಗ್ರಾಹಕ ರೋಡ್ರಿಗೋ ಕುನ್ಸಮನ್ ತಮ್ಮ ಕ್ಯಾಮರಾದಲ್ಲಿ ಮಗುವಿನ ಚಿತ್ರವನ್ನು ಸೆರೆ ಹಿಡಿದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದೀಗ ಮಗುವಿನ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಬ್ರೆಜಿಲ್ ಬೇಬಿ ಇದೀಗ ಇಂಟರ್ ನೆಟ್ ಸ್ಟಾರ್ ಆಗಿದೆ.
