ಕಲಬುರಗಿ : ಖ್ಯಾತ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅವರು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಷ್ಟಗಿ ಅವರು ಕಲಬುರಗಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಸಂತ ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ- ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್ ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗಳನ್ನು ಪಡೆದುಕೊಂಡಿದ್ದಾರೆ.
1936ರ ಅಕ್ಟೋಬರ್ 10 ರಂದು ಬಾದಾಮಿಯಲ್ಲಿ ಜನಿಸಿದ್ದ ವಸಂತ ಕುಷ್ಟಗಿ ಅವರು ಎಂಎ ಪದವಿಧರರಾ ಗಿದ್ದು, ಹಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಬೀದರಿನ ಟಿ.ವಿ. ಭೂಮರೆಡ್ಡಿ ಕಾಲೇಜು, ಶಹಾಬಾದಿನ ಎಸ್‌ಎಸ್‌ಎಂ ಕಾಲೇಜಿನ ಉಪನ್ಯಾಸಕ ರಾಗಿ ಹಾಗೂ ಕಲಬುರ್ಗಿಯ ಎಂಎಸ್‌ಐ ಕಾಲೇಜು, ಶಹಾಬಾದಿನ ಎಸ್‌ಎಸ್‌ಎಂ ಕಾಲೇಜಿನಲ್ಲಿ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದ್ದರು. ಸೇವಾ ನಿವೃತ್ತಿಯ ನಂತರ ಸ್ವಾಮಿ ರಾಮಾನಂದ ತೀರ್ಥ ಸಂಶೋಧನ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ ಸ್ಥಾಪನೆ ಯಾದಾಗ(1980-82) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ನನ್ನ ಮನೆ ಹಾಲಕೆನೆ, ಭಾವದೀಪ್ತಿ, ಭಕ್ತಿಗೋಪುರ. ವ್ಯಕ್ತಿ ಚಿತ್ರ ಕೃತಿಗಳು, ದಾಸ ಸಾಹಿತ್ಯದ ಕೃತಿಗಳು, ಸಾಹಿತ್ಯ ಪರಿಚಯಾತ್ಮಕ ಕೃತಿ ಮಾತ್ರವಲ್ಲದೇವನಾಟಕಗಳ ರಚನೆಯನ್ನೂ ಮಾಡಿದ್ದಾರೆ.