ಮಂಗಳವಾರ, ಜೂನ್ 17, 2025
HomeBreakingಪತಿ ಅಗಲಿಕೆಗೆ ಒಂದು ವರ್ಷ…! ಸುಂದರ ಸಂದೇಶದೊಂದಿಗೆ ಚಿರು ಪೋಟೋ ಹಂಚಿಕೊಂಡ ಮೇಘನರಾಜ್….!

ಪತಿ ಅಗಲಿಕೆಗೆ ಒಂದು ವರ್ಷ…! ಸುಂದರ ಸಂದೇಶದೊಂದಿಗೆ ಚಿರು ಪೋಟೋ ಹಂಚಿಕೊಂಡ ಮೇಘನರಾಜ್….!

- Advertisement -

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನಕ್ಕೆ ಒಂದು ವರ್ಷ ತುಂಬುತ್ತಿದ್ದು, ನಾಳೆ ಚಿರು ಮೊದಲ ಪುಣ್ಯತಿಥಿ ನಡೆಯಲಿದೆ. ಮಗನ ನೆನಪಲ್ಲಿ ಸರ್ಜಾ ಕುಟುಂಬ ಭಾವುಕ ಸಂದೇಶ ಹಂಚಿಕೊಂಡ ಬೆನ್ನಲ್ಲೇ, ಮೇಘನಾ ಪತಿಯ ಜೊತೆಗಿನಪೋಟೋ ಹಂಚಿಕೊಂಡು ನೀ ಸದಾ ನನ್ನವನು ಎಂದಿದ್ದಾರೆ.

C1 3
https://kannada.newsnext.live/topless-photo-priyavarrier-instagram-bollywood-movie/

2020 ರ ಜೂನ್ 7 ರಂದು ತೀವ್ರ ಹೃದಯಾಘಾತದಿಂದ ಚಿರು ಸರ್ಜಾ ನಿಧನರಾಗಿದ್ದರು. ಎಂದಿನಂತೆ ಆರೋಗ್ಯವಾಗಿ ಮನೆಯಲ್ಲಿದ್ದ ಚಿರು, ದೀಢೀರ್ ಹೃದಯಾಘಾತಕ್ಕೆ ಒಳಗಾದಾಗ ಸ್ಯಾಂಡಲ್ ವುಡ್ ಕಣ್ಣೀರಿನಲ್ಲೇ ಮುಳುಗಿ ಹೋಗಿತ್ತು.

Chiru Sarja 2
https://kannada.newsnext.live/cm-yediyruappa-says-hell-resign-immediately-if-high-command-asks-him-to-do/

ಚಿರು ನಿಧನರಾದಾಗ ಐದು ತಿಂಗಳ ಗರ್ಭೀಣಿಯಾಗಿದ್ದ ಮೇಘನಾ ರಾಜ್ ಈ ದುಃಖವನ್ನು ಹೇಗೋ ಸಹಿಸಿಕೊಂಡು ಅಕ್ಟೋಬರ್ ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದರು.

Chiru 3

https://www.instagram.com/p/CPxBLMvrrJD/?utm_medium=copy_link

ಮಗನ ತೊಟ್ಟಿಲ ಶಾಸ್ತ್ರದ ವೇಳೆ ಭಾವುಕರಾಗಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಘನಾ , ಚಿರು ಎಲ್ಲೂ ಹೋಗಿಲ್ಲ. ಮಗನ ರೂಪದಲ್ಲಿ ನನ್ನೊಂದಿಗೆ ಇದ್ದಾರೆ. ಅವರ ಕನಸಿನಂತೆ ಜ್ಯೂನಿಯರ್ ಚಿರುವನ್ನು ಬೆಳೆಸುತ್ತೇನೆ ಎಂದಿದ್ದರು.

Meghana Raj Amp Chiru Sarja Son Thotilu Shastra Photos 1605189498160
https://kannada.newsnext.live/sandalwood-senior-actor-sureka-death/

ಅಲ್ಲದೇ ಚಿರು ನಿಧನದ ಕೆಲ ತಿಂಗಳಿನಲ್ಲಿ ಸೋಷಿಯಲ್ ಮೀಡಿಯಾಗೆ ಮರಳಿದ ಮೇಘನಾ ರಾಜ್ ಸದಾ ತಮ್ಮ ಹಾಗೂ ಚಿರು ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ. ಪತಿಯ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುತ್ತ ದುಃಖ ಮರೆಯುತ್ತ ಬಂದಿದ್ದಾರೆ.

Junior Chiru New

ಇತ್ತೀಚಿಗಷ್ಟೇ ತಮ್ಮ ಆರು ತಿಂಗಳ ತಂದೆಯ ಪೋಟೋವನ್ನು ನೋಡಿ ತಂದೆಯನ್ನು ಗುರುತಿಸುವ ಪೋಟೋ ಹಂಚಿಕೊಂಡಿದ್ದ ಮೇಘನಾ, ಮಗ ಈಗಲೇ ಅಪ್ಪನನ್ನು ಗುರುತಿಸುತ್ತಾನೆ. ಈ ಬಾಂಡಿಂಗ್ ನನಗೆ ಹೆಮ್ಮೆ ತಂದಿದೆ ಎಂದಿದ್ದರು. ‘

Vbb

ಜೂನ್ 7 ರಂದು ಚಿರು ಮೊದಲ ಪುಣ್ಯತಿಥಿಯ ಹೊತ್ತಿನಲ್ಲಿ ತಮ್ಮ ಕ್ಯಾಂಡಿಡ್ ಪೋಟೋವೊಂದನ್ನು ಹಂಚಿಕೊಂಡಿರುವ ಮೇಘನಾ ರಾಜ್, ನೀನು ಸದಾ ನನ್ನವನು ಎಂಬ ಸಂದೇಶದ ಮೂಲಕ ಚಿರು ಸದಾ ತನ್ನೊಂದಿಗೆ ಇದ್ದಾರೆ ಎಂಬ ಸಂದೇಶ ನೀಡಿದಂತಿದೆ.

RELATED ARTICLES

Most Popular