ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತು ಹೋಗಿದ್ದ ಕನ್ನಡದ ಬಿಗ್ ಬಾಸ್ ಮತ್ತೆ ಆರಂಭವಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬಂದು ಅನ್ ಲಾಕ್ ಘೋಷಣೆಯಾಗುತ್ತಲೇ ಜೂನ್ ಅಂತ್ಯಕ್ಕೆ ಬಿಗ್ ಬಾಸ್ ಶೋ ಶುರುವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಕನ್ನಡ ಕಿರುತೆರೆಯ ಪ್ರಖ್ಯಾತ ಬಿಗ್ ಬಾಸ್ ಶೋ ಸುಮಾರು 72 ದಿನಗಳ ಕಾಲ ನಡೆದಿತ್ತು. 73ನೇ ದಿನಕ್ಕೆ ಕಾಲಿಡುವ ಹೊತ್ತಲೇ ಕೊರೊನಾ ಹೆಮ್ಮಾರಿಯ ಆರ್ಭಟ ಜೋರಾಗಿತ್ತು. ಹೀಗಾಗಿ ಬಿಗ್ ಬಾಸ್ ಶೋ ಅನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಆದ್ರೀಗ ಶೋ ಮತ್ತೊಮ್ಮೆ ಆರಂಭವಾಗಲಿದೆ. ಕಿಚ್ಚ ಸುದೀಪ್ ಶೋ ಹೋಸ್ಟ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಇನ್ನು ವಾಹಿನಿ ಕೂಡ ಬಿಗ್ ಬಾಸ್ ಶೋ ಆರಂಭಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಂಡಿದೆ.
ಇದೀಗ ಬಿಗ್ ಬಾಸ್ ಶೋ ಮತ್ತೆ ಆರಂಭವಾಗ್ತಿರೋದ್ರಿಂದಾಗಿ ಪ್ರೇಕ್ಷಕರ ಕುತೂಹಲವೂ ಮೂಡಿದೆ. ಈ ಬಾರಿಯ ಬಿಗ್ ಬಾಸ್ ಕೇವಲ 30 ದಿನಗಳ ಕಾಲ ನಡೆಯುತ್ತಾ, ಇಲ್ಲಾ ಮತ್ತೆ 100 ದಿನಗಳ ಕಾಲ ಶೋ ನಡೆಯುತ್ತಾ ಅನ್ನೋದನ್ನು ವಾಹಿನಿ ಬಿಟ್ಟುಕೊಟ್ಟಿಲ್ಲ. ಲೆಕ್ಕಾಚಾರಗಳ ಪ್ರಕಾರ 30 ದಿನಗಳ ಕಾಲ ಶೋ ಮಾಡಿದ್ರೆ ವಾಹಿನಿಗೆ ಪಕ್ಕಾ ನಷ್ಟವಾಗುತ್ತೆ. ಹೀಗಾಗಿ 100 ದಿನಗಳ ಕಾಲ ಎಲ್ಲಾ ಸ್ಪರ್ಧಿಗಳನ್ನು ಕರೆಯಿಸಿ ಶೋ ನಡೆಸಲಾಗುತ್ತೆ ಅಂತಾ ಹೇಳಲಾಗ್ತಿದೆ.
ಒಂದೊಮ್ಮೆ 100 ದಿನಗಳ ಕಾಲ ನಡೆಯೋದೆ ಆದ್ರೆ ಯಾರೆಲ್ಲಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ. ಇಲ್ಲಾ ಈಗಿರುವ ಸ್ಫರ್ಧಿಗಳನ್ನೇ ಬಳಸಿಕೊಂಡು ಶೋ ಆರಂಭಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಶೋ ಆರಂಭವಾಗ್ತಿರೋದು ಮಾತ್ರ ಪ್ರೇಕ್ಷಕರಿಗೆ ಖುಷಿ ಕೊಟ್ಟಿದ್ದಂತೂ ಸುಳ್ಳಲ್ಲ.