virat kohli : T20 ಮೊದಲ ಪಂದ್ಯದಲ್ಲಿ ಕೊಯ್ಲಿ ಗಳಿಸಿದ್ದು ಎಷ್ಟು ರನ್ ಗೊತ್ತಾ ..??

ಮುಂಬೈ : ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನಾಡಲು ಕಾತರರಾಗಿದ್ದಾರೆ. ಭಾರತ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಮುಂದಾಗಿದೆ. ಟೆಸ್ಟ್, ಏಕದಿನ, ಟಿ20 ಪಂದ್ಯಗಳಲ್ಲಿ ಮಿಂಚು ಹರಿಸಿರುವ ಕೊಯ್ಲಿ ಮೊದಲ ಟಿ20 ಪಂದ್ಯಾವಳಿ ಆಡಿ ಇಂದಿಗೆ 11 ವರ್ಷ ಕಳೆದಿದೆ.

ದೆಹಲಿಯ ವಿರಾಟ್ ಕೊಯ್ಲಿ ಬಾಲ್ಯದಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ತಮ್ಮನ್ನು ಗುರುತಿಸಿಕೊಂಡವರು. ತನ್ನ ನಾಯಕತ್ವದಲ್ಲಿ ಅಂಡರ್ 19 ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕನಾಗಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ ವಿರಾಟ್ ಕೊಯ್ಲಿ.

2010ರ ಜೂನ್ 12ರಂದು ಟಿ20 ಪಂದ್ಯಾವಳಿಗೆ ಆಯ್ಕೆಯಾಗಿದ್ದ ವಿರಾಟ್ ಕೊಯ್ಲಿ 18 ನಂಬರ್ ಜರ್ಸಿ ತೊಟ್ಟು ಜಿಂಬಾಬ್ವೆ ವಿರುದ್ದ ಟೀಂ ಇಂಡಿಯಾ ಪರ ಬ್ಯಾಟ್ ಬೀಸಿದ್ದಾರೆ. ಮೊದಲ ಪಂದ್ಯದಲ್ಲಿಯೇ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ನಾಟೌಟ್ ಆಗಿದ್ದರು. ಈ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಜಯಿಸಿತ್ತು.

ಮೊದಲ ಪಂದ್ಯದ ನಂತರ ವಿರಾಟ್ ಕೊಯ್ಲಿ ಭರವಸೆಯನ್ನು ಮೂಡಿಸಿದ್ರು. ಇದುವರೆಗೆ ಒಟ್ಟು 90 ಟಿ20 ಪಂದ್ಯಗಳನ್ನು ಆಡಿದ್ದು, 55.65 ಸರಾಸರಿಯಲ್ಲಿ 3,159 ರನ್ ಗಳಿಸಿದ್ದಾರೆ. 28 ಅರ್ಧ ಶತಕಗಳನ್ನು ಗಳಿಸಿರುವ ಕೊಯ್ಲಿ ಅತ್ಯಧಿಕ 94 ರನ್ ಬಾರಿಸಿದ್ದಾರೆ. ಅಷ್ಟೇ ಅಲ್ಲಾ ಬೌಲಿಂಗ್ ನಲ್ಲಿಯೂ ಮಿಂಚಿರುವ ಕೊಯ್ಲಿ 4 ವಿಕೆಟ್ ಕಬಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನೆಡೆಸುತ್ತಿರುವ ವಿರಾಟ್ ಕೊಯ್ಲಿ ಕನ್ನಡಿಗರ ಮನಗೆದ್ದಿದ್ದಾರೆ.

ಟೀಂ ಇಂಡಿಯಾ ನಾಯಕನಾಗಿ ಟೆಸ್ಟ್, ಏಕದಿನ ಹಾಗೂ ಟಿ20 ತಂಡವನ್ನು ಮುನ್ನೆಡೆಸಿದ್ದಾರೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿಯೂ ಕೊಯ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ಕಲಾತ್ಮಕ ಶೈಲಿಯ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಆರಾಧ್ಯ ದೇವರಂತಾಗಿರುವ ವಿರಾಟ್ ಕೊಯ್ಲಿ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಕೊಯ್ಲಿ ಸದ್ಯ ಅದ್ಬುತ ಫಾರ್ಮ್ ನಲ್ಲಿದ್ದು ಇನ್ನಷ್ಟು ವರ್ಷಗಳ ಕಾಲ ಟೀಂ ಇಂಡಿಯಾವನ್ನು ಮುನ್ನೆಡೆಸುವ ಭರವಸೆಯನ್ನು ನೀಡಿದ್ದಾರೆ.

Comments are closed.